ಯುಎಇದುಬೈನಲ್ಲಿ ಯುಎಇ ಬಂಟ್ಸ್ ವತಿಯಿಂದ 11ನೇ ವರ್ಷದ ಸಾಮೂಹಿಕ...

ದುಬೈನಲ್ಲಿ ಯುಎಇ ಬಂಟ್ಸ್ ವತಿಯಿಂದ 11ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

ದುಬೈ: ಯುಎಇ ಬಂಟ್ಸ್ ನ ವತಿಯಿಂದ 11ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು ನಗರದ ಜೆ.ಎಸ್.ಎಸ್.ಶಾಲೆಯಲ್ಲಿ ಭಕ್ತಿ ಭಾವದೊಂದಿಗೆ ಇತ್ತೀಚೆಗೆ ನಡೆಯಿತು.

ಪೂಜಾ ಕಾರ್ಯಕ್ರಮದಲ್ಲಿ ಯುಎಇ ರಾಜ್ಯದಲ್ಲಿ ಎಲ್ಲಾ ಬಂಟ ಬಾಂಧವರು ಹಾಗೂ ಯುಎಇಯ ಎಲ್ಲಾ ಸಮುದಾಯದ ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡು ಶ್ರೀ ಸತ್ಯನಾರಾಯಣ ದೇವರ ಕೃಪೆಗೆ ಪಾತ್ರರಾದರು.

ರಘು ಭಟ್ ಮತ್ತು ಸಂತೋಷ್ ಭಟ್ ಅವರ ಪೌರೋಹಿತ್ಯದಲ್ಲಿ ನಡೆದ ಶ್ರೀ ಸತ್ಯನಾರಾಯಣ ಪೂಜೆಯ ವೈದಿಕ ವಿಧಿ ವಿಧಾನಗಳನ್ನು ನೆರವೇರಿತು. ಪೂಜೆಯ ಪ್ರತಿನಿಧಿಯಾಗಿ ಯುಎಇ ಬಂಟ್ಸ್ ನ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ ಮತ್ತು ರೂಪಲಿ ಕುಮಾರ್ ಶೆಟ್ಟಿ, ಸಾಯಿನಾಥ್ ವಿಠಲ ಶೆಟ್ಟಿ ಮತ್ತು ಪ್ರತಿಮಾ ಸಾಯಿನಾಥ್ ಶೆಟ್ಟಿ, ಪೆರ್ಲಗುತ್ತು ಗೋಕುಲದಾಸ್ ರೈ ಮತ್ತು ನಿಶ್ಮೀತಾ ಗೋಕುಲದಾಸ್ ರೈ ದಂಪತಿಗಳು ಕುಳಿತುಕೊಂಡಿದ್ದರು.

ಬಂಟ್ಸ್ ನ ಮಹಾ ಪೋಷಕರಾದ ಸರ್ವೋತ್ತಮ ಶೆಟ್ಟಿ ಮತ್ತು ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿಯವರು ಪೂಜೆಯಲ್ಲಿ ಪಾಲ್ಗೊಂಡ ಎಲ್ಲಾರನ್ನು ಸ್ವಾಗತಿಸಿದರು.

ಶ್ರೀ ರಾಜರಾಜೇಶ್ವರಿ ಭಜನಾ ಸಂಘದ ವತಿಯಿಂದ ಭಜನಾ ಕಾರ್ಯಕ್ರಮ, ಮಕ್ಕಳಿಂದ ವಿಷ್ಣು ಸಹಸ್ರನಾಮ ಹಾಗೂ ಯುಎಇ ಬಂಟ್ಸ್ ಮತ್ತು ವರಮಹಾಲಕ್ಷ್ಮಿ ಸಮಿತಿಯ ಸದಸ್ಯ ಸದಸ್ಯೆಯರಿಂದ ನೃತ್ಯ ಭಜನೆ ಸೇವೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ಮತ್ತು ಅನ್ನಸಂತರ್ಪಣೆ ನಡೆಯಿತು.

ಪೂಜೆಯ ನೇತೃತ್ವವನ್ನು ವಹಿಸಿದ ರವಿರಾಜ್ ಶೆಟ್ಟಿ ಮತ್ತು ಶಶಿ ರವಿರಾಜ್ ಶೆಟ್ಟಿ ಹಾಗೂ ವಾಸು ಕುಮಾರ್ ಶೆಟ್ಟಿ, ದಿನೇಶ್ ಶೆಟ್ಟಿ ಕೊಟ್ಟಿಂಜ ಹಾಗೂ ಯಶಸ್ಸಿನ ಹಿಂದೆ ದುಡಿದ 2025 ನೇ ಸಾಲಿನ ಸಂಘಟನಾ ಸಮಿತಿಯ ಸದಸ್ಯರಾದ ದಿನ್ ರಾಜ್ ಶೆಟ್ಟಿ ಮತ್ತು ದೀಪ್ತಿ ದಿನ್ ರಾಜ್ ಶೆಟ್ಟಿ, ಅನುಪ್ ಶೆಟ್ಟಿ ಮತ್ತು ಚೈತ್ರ ಅನುಪ್ ಶೆಟ್ಟಿ, ಸುಪ್ರಜ್ ಶೆಟ್ಟಿ ಮತ್ತು ಪೃಥ್ವಿ ಸುಪ್ರಜ್ ಶೆಟ್ಟಿ, ವಸಂತ ಶೆಟ್ಟಿ ಮತ್ತು ರಜಿತಾ ವಸಂತ ಶೆಟ್ಟಿ, ಸೀತಾರಾಮ ಶೆಟ್ಟಿ ಮತ್ತು ಅಶ್ವಿನಿ ಸೀತಾರಾಮ ಶೆಟ್ಟಿ, ಗೋಕುಲದಾಸ್ ರೈ ಮತ್ತು ನಿಶ್ಮಿತಾ ಗೋಕುಲದಾಸ್ ರೈ, ಕೀರ್ತಿ ನಿತ್ಯ ಪ್ರಕಾಶ್ ಶೆಟ್ಟಿ, ಮೇಘ ಪ್ರಸನ್ನ ಶೆಟ್ಟಿ, ವಿದ್ಯಾಶ್ರಿ ಸತೀಶ್ ಹೆಗ್ಡೆ, ದೀಪಾ ಕಿರಣ್ ಶೆಟ್ಟಿ, ಲಾಸ್ಯ ಸಂಪತ್ ಶೆಟ್ಟಿ ಹಾಗೂ ಬಾಲಕೃಷ್ಣ ಶೆಟ್ಟಿ, ಸಂತೋಷ್ ಶೆಟ್ಟಿ ಪೊಳಲಿ, ಬಾಲಕೃಷ್ಣ ಶೆಟ್ಟಿ ಮಾಡುರುಗುತ್ತು ಮತ್ತು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ ಧನ್ಯವಾದ ಸಲ್ಲಿಸಿದರು.

Hot this week

ಕುವೈತ್‌ನ ನೇರಂಬಳ್ಳಿ ಸುರೇಶ್ ರಾವ್​​ಗೆ ‘ಸಮಾಜ ಸೇವಾ ರತ್ನ ಪ್ರಶಸ್ತಿ–2026’

ಕುವೈತ್: ಸಂಘಟಕ, ಕಲಾವಿದ, ಲೇಖಕ, ಸಮಾಜಸೇವಕ, ಕೋವಿಡ್ ವಾರಿಯರ್ ಆಗಿ ಸೇವೆ...

ದುಬೈನಲ್ಲಿ ಫೆಬ್ರವರಿ 22ರಂದು ‘ಯುಎಇ ಬಂಟ್ಸ್’ನಿಂದ ವಾರ್ಷಿಕ ‘ಸ್ಪೋರ್ಟ್ಸ್ ಡೇ-2026’

ದುಬೈ: ಯುಎಇ ಬಂಟ್ಸ್ ನ ವಾರ್ಷಿಕ "ಸ್ಪೋರ್ಟ್ಸ್ ಡೇ-2026" ಫೆಬ್ರವರಿ 22ರಂದು...

Moolur Jumma Masjid representatives felicitated in Dubai; community backs renovation project

Dubai: Representatives of the historic Moolur Jumma Masjid were...

Related Articles

Popular Categories