ಯುಎಸ್‌ಎಅಟ್ಲಾಂಟ ಕನ್ನಡಿಗರಿಂದ ಯುಗಾದಿ-ಹೊಸ ತೊಡಕು ಆಚರಣೆ

ಅಟ್ಲಾಂಟ ಕನ್ನಡಿಗರಿಂದ ಯುಗಾದಿ-ಹೊಸ ತೊಡಕು ಆಚರಣೆ

ಅಟ್ಲಾಂಟ ಕನ್ನಡಿಗರು ಯುಗಾದಿಯನ್ನು ಏಪ್ರಿಲ್ 11 ಹಾಗೂ ಹೊಸತೊಡಕು ಹಬ್ಬವನ್ನು ಏಪ್ರಿಲ್ 26ರಂದು ಸಂಭ್ರಮದಿಂದ ಆಚರಿಸಿದರು.

ಹೊಸ ಕಾರ್ಯಕಾರಿ ಸಮಿತಿಯ ಸದಸ್ಯರೆಲ್ಲರ ಮೇಲ್ವೀಚಾರಣೆಯಲ್ಲಿ ಏಪ್ರಿಲ್ 11ರಂದು ಬಾಳೆ ಎಲೆಯ ಭರ್ಜರಿ ಭೋಜನವನ್ನು ಕನ್ನಡಿಗರು ಸವಿದರು. ನಂತರ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಮಹಿಮಾ ಹೊಳ್ಳ ಅವರ ತಂಡದಿಂದ ಕುಚುಪುಡಿ ನೃತ್ಯ, ರೇಷ್ಮಾ ಅವರ ನಿರ್ದೇಶನದಲ್ಲಿ ಪುಟಾಣಿಗಳಿಂದ RCB ಕಪ್ ಗೆಲುವಿನ ವಿಜಯೋತ್ಸವದ ನೃತ್ಯ, ಶೃತಿ ವಿನಯ್ ಅವರ ನೇತೃತ್ವದಲ್ಲಿ ನೃತ್ಯ, ಸ್ವರಸಂಗಮ ತಂಡದಿಂದ ಸಂಗೀತ, ಮೇರಿಯಟ್ಟ ಕನ್ನಡ ಶಾಲೆ ತಂಡದಿಂದ ಇಬ್ರಾಹಿಂ ಸುತಾರ್ ಅವರ ದೇಶಭಕ್ತಿ ಗೀತೆ ಹಾಗೂ ಇನ್ನಿತರ ಕಾರ್ಯಕ್ರಮಗಳು ಪ್ರೇಕ್ಷಕರನ್ನು ಮನರಂಜಿಸಿತು. ಸಂಜೆಯಲ್ಲಿ DJ Vizz ಅವರ ಕನ್ನಡ ಗೀತೆಗಳಿಗೆ ಪ್ರೇಕ್ಷಕರು ಉತ್ಸಾಹದಿಂದ ಕುಣಿದು ಕುಪ್ಪಳಿಸಿದರು.

ಇದೇ ಮೊದಲ ಬಾರಿಗೆ ಅಟ್ಲಾಂಟ ಕನ್ನಡಿಗರ ಅಭಿಲಾಷೆಯಂತೆ ಹೊಸತೊಡಕು ಹಬ್ಬವನ್ನು ನೃಪತುಂಗ ಕನ್ನಡ ಕೂಟದ ವತಿಯಿಂದ ಏಪ್ರಿಲ್ 26ಕ್ಕೆ ಆಯೋಜಿಸಲಾಗಿತ್ತು. ಮಾಂಸಾಹಾರ ಮತ್ತು ಸಸ್ಯಾಹಾರದ ಹೊಸತೊಡಕು ನಾಟಿ ಊಟವನ್ನು ಸವಿದ ಕನ್ನಡಿಗರು, ಬೆಂಗಳೂರಿನಿಂದ ಆಗಮಿಸಿದ್ದ ಕಲಾವಿದ ಪವನ್ ವೇಣುಗೋಪಾಲ್ ಅವರ ಹಾಸ್ಯ ಚಟಾಕಿಗಳಿಗೆ ಹೊಟ್ಟೆ ಬಿರಿಯುವಂತೆ ನಕ್ಕು ಆನಂದಿಸಿದರು.

ಬಹುದೊಡ್ಡ ಸಂಖ್ಯೆಯ ಕನ್ನಡಿಗರ ಭಾವನೆಗಳಿಗೆ ಸ್ಪಂದಿಸಿ, ಗೌರವಿಸಿದ್ದಕ್ಕೆ ಅಟ್ಲಾಂಟ ಕನ್ನಡಿಗರು ನೃಪತುಂಗ ಕನ್ನಡ ಕೂಟದ ಕಾರ್ಯಕಾರಿ ತಂಡಕ್ಕೆ ಮೆಚ್ಚುಗೆಯ ಸುರಿಮಳೆ ನೀಡಿದರು. ಎಲ್ಲರನ್ನೂ ಒಳಗೊಳ್ಳುವಿಕೆಯ ಈ ಭ್ರಾತೃತ್ವದ ಕ್ರಿಯೆಯಿಂದ ಹೆಚ್ಚು ಹೆಚ್ಚು ಕನ್ನಡಿಗರು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂತೋಷ ವ್ಯಕ್ತಪಡಿಸಿದರು.
ಕೆ.ಆರ್. ಶ್ರೀನಾಥ್, ಅಟ್ಲಾಂಟ

Hot this week

ಬಹರೈನ್; ಆಗಸ್ಟ್ 21ರಂದು ‘ಕೆಸಿಎಫ್’ನಿಂದ ಗ್ರ್ಯಾಂಡ್ ಮೀಲಾದ್ ಕಾನ್ಫರೆನ್ಸ್

ಮನಾಮ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಬಹರೈನ್ ರಾಷ್ಟ್ರೀಯ ಸಮಿತಿಯ ವತಿಯಿಂದ...

ಭಾರತೀಯ ರಾಯಭಾರ ಕಚೇರಿಯ ಡಾ.ಈಶ್ ಸಿಂಘಾಲ್​​ಗೆ ಭಾವಪೂರ್ಣ ಬೀಳ್ಕೊಡುಗೆ; ಕರ್ನಾಟಕ ಸಂಘ ಖತರ್‌ನಿಂದ ಅಭಿನಂದನೆ

ದೋಹಾ(ಖತರ್): ಖತರ್‌ನಲ್ಲಿ ತಮ್ಮ ಸೇವಾವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಭಾರತೀಯ ರಾಯಭಾರ ಕಚೇರಿಯ...

ವಂದೇ ಮಾತರಂ ಮತ್ತು ಜನಗಣಮನ ಗೀತೆಯೊಂದಿಗೆ ಅಮೇರಿಕದಲ್ಲಿ ಗೃಹಪ್ರವೇಶ

ವರದಿ: ಬೆಂಕಿ ಬಸಣ್ಣ, ನ್ಯೂಯಾರ್ಕ್ 1875ರಲ್ಲಿ ಭಾರತದಲ್ಲಿ ಮೊಳಗಿದ ‘ವಂದೇ ಮಾತರಂ’ 150...

ದುಬೈ; ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಸಾಮಾಜಿಕ ಸಮ್ಮಿಲನ ಕಾರ್ಯಕ್ರಮ

ದುಬೈ: ಪರಿಸರ ಸಂರಕ್ಷಣೆ, ಸಾಮಾಜಿಕ ಜಾಗೃತಿ ಹಾಗೂ ಸಮಾಜಮುಖಿ ಕಾರ್ಯಗಳಿಗೆ ಬದ್ಧವಾಗಿರುವ...

ನ್ಯೂಯಾರ್ಕ್; ಆಲ್ಬನಿಯಲ್ಲಿ ಸಂಭ್ರಮದ ಕನ್ನಡ ಕಲಿ ಪದವಿ ಪ್ರದಾನ

ವರದಿ: ಬೆಂಕಿ ಬಸಣ್ಣ, ನ್ಯೂಯಾರ್ಕ್ ಆಲ್ಬನಿ(ನ್ಯೂಯಾರ್ಕ್): ಅಮೇರಿಕದಲ್ಲಿ ಹುಟ್ಟಿ ಬೆಳೆಯುತ್ತಿರುವ ಮಕ್ಕಳಿಗೆ ಕನ್ನಡ...

Related Articles

Popular Categories