ಡಿಜಿಟಲ್ ಹಾಗು ದೃಶ್ಯ ಮಾಧ್ಯಮಗಳಲ್ಲೂ ಛಾಪು ಮೂಡಿಸಿರುವ ವಾರ್ತಾಭಾರತಿ ಅನಿವಾಸಿ ಕನ್ನಡಿಗರ ಬಗ್ಗೆ ವಿಶೇಷ ಪ್ರೀತಿ ಹಾಗು ಕಾಳಜಿಯಿಂದ ರೂಪಿಸಿರುವ ಹೊಸ ವೆಬ್ ಜಾಲತಾಣ globalkannadiga.com ಭರ್ಜರಿ ಯಶಸ್ಸು ಕಾಣಲಿ.
ಎರಡು ದಶಕಗಳಿಂದ ನಿರ್ಭೀತ ಪತ್ರಿಕೋದ್ಯಮ ನಡೆಸುತ್ತಿರುವ ‘ವಾರ್ತಾಭಾರತಿ’ ಜನಸಾಮಾನ್ಯರು ಹಾಗೂ ಸರಕಾರದ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ. ಪತ್ರಿಕೆಯ ಸಂಪಾದಕೀಯವು ಸರಕಾರ ಹಾಗೂ ಅಧಿಕಾರಿಗಳನ್ನು ನಿರಂತರವಾಗಿ ಎಚ್ಚರಿಸುತ್ತಿದೆ. ಪತ್ರಿಕೆಯಲ್ಲಿನ ವಿಶೇಷ ವರದಿಗಳು ಅದೆಷ್ಟೋ ಅವಕಾಶ ವಂಚಿತರಿಗೆ ಆಶಾಕಿರಣವಾಗಿದೆ. ಸಂವಿಧಾನದ ಆಶಯಗಳು ಈಡೇರಬೇಕಾದರೆ ಪ್ರಜಾಪ್ರಭುತ್ವದ ಮೌಲ್ಯಗಳು ಗಟ್ಟಿಗೊಳ್ಳಬೇಕು. ಅದಕ್ಕೆ ಪೂರಕವಾಗಿ ಮಾಧ್ಯಮಗಳು ಕೆಲಸ ನಿರ್ವಹಿಸಬೇಕಾಗುತ್ತದೆ. ಸದ್ಯ ಪ್ರಜಾಪ್ರಭುತ್ವದ ಉಳಿವಿಗೆ ಶ್ರಮಿಸಬೇಕಾದ ಅಗತ್ಯವಿದ್ದು, ಆ ನಿಟ್ಟಿನಲ್ಲಿ ವಾರ್ತಾಭಾರತಿ ಕನ್ನಡ ದಿನ ಪತ್ರಿಕೆ ಕೆಲಸ ಮಾಡುತ್ತಿದೆ ಇದು ಶ್ಲಾಘನೀಯ.
ಇದೀಗ ಇನ್ನೊಂದು ಹೆಜ್ಜೆ ಮುಂದಿಟ್ಟು ಡಿಜಿಟಲ್ ಹಾಗು ದೃಶ್ಯ ಮಾಧ್ಯಮಗಳಲ್ಲೂ ಛಾಪು ಮೂಡಿಸಿರುವ ವಾರ್ತಾಭಾರತಿ ಅನಿವಾಸಿ ಕನ್ನಡಿಗರ ಬಗ್ಗೆ ವಿಶೇಷ ಪ್ರೀತಿ ಹಾಗು ಕಾಳಜಿಯಿಂದ ರೂಪಿಸಿರುವ ಹೊಸ ವೆಬ್ ತಾಣ globalkannadiga.com ಎಂಬ ವೇದಿಕೆ ಸಜ್ಜು ಮಾಡಿದೆ. ಇದು ಭರ್ಜರಿ ಯಶಸ್ಸು ಕಾಣಲಿ, ಕರ್ನಾಟಕ ಸರಕಾರದ ಅನಿವಾಸಿ ಭಾರತೀಯ ಸಮಿತಿ ಹಾಗು ಅನಿವಾಸಿ ಕನ್ನಡಿಗರ ನಡುವಿನ ಸೇತುವೆಯಾಗಲಿ ಎಂದು ಹಾರೈಸುತ್ತೇನೆ.
ಅನ್ವರ್ ಮಾಣಿಲ ಯುಏಇ
ಸಂಯೋಜಕರು
ಕೆಪಿಸಿಸಿ, ಅನಿವಾಸಿ ಭಾರತೀಯ ವಿಭಾಗ
ಸಾಮಾಜಿಕ ಜಾಲತಾಣ ದಕ್ಷಿಣ ಕನ್ನಡ ಜಿಲ್ಲೆ