ಟೆಹ್ರಾನ್: ಒಮಾನ್ ಮಧ್ಯಸ್ಥಿಕೆಯಲ್ಲಿ ನಡೆದ ಒಪ್ಪಂದದಂತೆ ಇರಾನ್ ಮತ್ತು ಸ್ವಿಝರ್‍ಲ್ಯಾಂಡ್ ದೇಶಗಳ ಕೈದಿಗಳ ವಿನಿಮಯ ಪ್ರಕ್ರಿಯೆ ನಡೆದಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಇರಾನ್‍ನ ಮಾಧ್ಯಮಗಳು ರವಿವಾರ ವರದಿ ಮಾಡಿದೆ.
ಇರಾನ್‍ನಲ್ಲಿ 1988ರಲ್ಲಿ ರಾಜಕೀಯ ಕೈದಿಗಳ ಸಾಮೂಹಿಕ ಮರಣದಂಡನೆ ಪ್ರಕರಣದ ಪ್ರಮುಖ ಆರೋಪಿ, ಮಾಜಿ ಅಧಿಕಾರಿ ಹಮೀದ್ ನುವಾರಿಯನ್ನು ಸ್ವಿಝರ್‍ಲ್ಯಾಂಡ್ ಬಿಡುಗಡೆಗೊಳಿಸಿದ್ದು ಪ್ರತಿಯಾಗಿ ಇರಾನ್ ಇಬ್ಬರು ಸ್ವೀಡನ್ ಪ್ರಜೆಗಳನ್ನು ಬಿಡುಗಡೆಗೊಳಿಸಿದೆ ಎಂದು ವರದಿಯಾಗಿದೆ.