ಇತರೆಹಜ್ ಯಾತ್ರೆಯ ಸಂದರ್ಭ 1,300 ಮಂದಿ ಮೃತ್ಯು: ವರದಿ

ಹಜ್ ಯಾತ್ರೆಯ ಸಂದರ್ಭ 1,300 ಮಂದಿ ಮೃತ್ಯು: ವರದಿ

ರಿಯಾದ್ : ಈ ವರ್ಷದ ಹಜ್ ಯಾತ್ರೆಯ ಸಂದರ್ಭದಲ್ಲಿ ಬಿಸಿಲ ಬೇಗೆ ಹಾಗೂ ಶಾಖ ಸಂಬಂಧಿತ ಸಮಸ್ಯೆಗಳಿಂದ 1,300ಕ್ಕೂ ಅಧಿಕ ಹಜ್ ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ ಎಂದು ಸೌದಿ ಅರೆಬಿಯಾ ಸೋಮವಾರ ದೃಢಪಡಿಸಿದೆ.

ಸಾವನ್ನಪ್ಪಿದವರಲ್ಲಿ ಅಮೆರಿಕ, ಇಂಡೊನೇಶ್ಯಾ, ಭಾರತ, ಈಜಿಪ್ಟ್, ಜೋರ್ಡಾನ್ ಸೇರಿದಂತೆ 10 ದೇಶಗಳ ಯಾತ್ರಾರ್ಥಿಗಳು ಸೇರಿದ್ದಾರೆ. `ಈ ವರ್ಷ 1,75,000 ಭಾರತೀಯರು ಹಜ್‍ಗೆ ಭೇಟಿ ನೀಡಿದ್ದು ಯಾತ್ರೆಯ ಸಂದರ್ಭ ನೈಸರ್ಗಿಕ ಕಾರಣಗಳಿಂದ 98 ಭಾರತೀಯರು ಮರಣ ಹೊಂದಿದ್ದಾರೆ’ ಎಂದು ಭಾರತದ ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್ ಕಳೆದ ವಾರ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದರು. ಹವಾಮಾನ ಬದಲಾವಣೆಯಿಂದ ಹಜ್ ಯಾತ್ರಾರ್ಥಿಗಳು ತೀವ್ರ ಪರಿಣಾಮ ಎದುರಿಸುತ್ತಿದ್ದಾರೆ. ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುವ ಸ್ಥಳದಲ್ಲಿ ಪ್ರತೀ ದಶಕದಲ್ಲಿ 0.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಏರಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.

Hot this week

ಕನ್ನಡ ಸಂಘ ಬಹರೈನ್; ಸೆಪ್ಟೆಂಬರ್ 5ರಂದು ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ

ಬಹರೈನ್: ಬಹರೈನ್‌ನಲ್ಲಿರುವ ಕನ್ನಡ ಸಮುದಾಯವನ್ನು ಕನ್ನಡ ಸಂಘ ಬಹರೈನ್‌ನ ನೂತನ ಕಾರ್ಯಕಾರಿ...

ಬಹರೈನ್ ಕನ್ನಡ ಸಂಘದಿಂದ 79ನೇ ಸ್ವಾತಂತ್ರ್ಯ ದಿನಾಚರಣೆ

ಬಹರೈನ್: ಭಾರತದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಗಸ್ಟ್ 15ರಂದು ಬೆಳಗ್ಗೆ 8:30ಕ್ಕೆ...

ಬಹರೈನ್ ರೇಡಿಯೋ ಆರ್ ಜೆ ಕಮಲಾಕ್ಷ ಅಮೀನ್​ಗೆ ‘ಗೋಲ್ಡನ್ ಐಕಾನಿಕ್ ಅವಾರ್ಡ್’ ಗೌರವ ಪ್ರಶಸ್ತಿ

ಮಂಗಳೂರು: ಬಹರೈನ್ ನ ಕಸ್ತೂರಿ ಕನ್ನಡ ಎಫ್ಎಂ ರೇಡಿಯೋ ಆರ್ ಜೆ...

Related Articles

Popular Categories