ಯುಕೆಭಾರತ-ಬ್ರಿಟನ್‌ ಸಂಬಂಧವನ್ನು ಪುನರುಚ್ಚರಿಸಿದ ಮೋದಿ-ಕಿಂಗ್‌ ಚಾರ್ಲ್ಸ್‌

ಭಾರತ-ಬ್ರಿಟನ್‌ ಸಂಬಂಧವನ್ನು ಪುನರುಚ್ಚರಿಸಿದ ಮೋದಿ-ಕಿಂಗ್‌ ಚಾರ್ಲ್ಸ್‌

ಲಂಡನ್:‌ ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟನ್‌ನ ಕಿಂಗ್ ಚಾರ್ಲ್ಸ್ III ಬುಧವಾರ ಫೋನ್ ಕರೆಯ ಮೂಲಕ ಪರಸ್ಪರ ಮಾತನಾಡಿದ್ದು, ಭಾರತ ಮತ್ತು ಬ್ರಿಟನ್‌ ನಡುವಿನ ಪಾಲುದಾರಿಕೆಯ ಕುರಿತು ಮಾತನಾಡಿದ್ದಾರೆ ಮತ್ತು ಕ್ರಿಸ್ಮಸ್‌ ಶುಭಾಶಯ ವಿನಿಮಯ ಮಾಡಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

“ಎರಡೂ ದೇಶಗಳ ನಡುವಿನ ಐತಿಹಾಸಿಕ ಸಂಬಂಧಗಳನ್ನು ನೆನಪಿಸಿಕೊಳ್ಳುತ್ತಾ, ಭಾರತ ಮತ್ತು ಯುನೈಟೆಡ್‌ ಕಿಂಗ್ಡಂ ನಡುವಿನ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ಅವರಿಬ್ಬರೂ ಪುನರುಚ್ಚರಿಸಿದ್ದಾರೆ” ಎಂದು ಸರ್ಕಾರವು ತಿಳಿಸಿದ್ದಾಗಿ the hindu ವರದಿ ಮಾಡಿದೆ.

ಅಕ್ಟೋಬರ್‌ನಲ್ಲಿ ಸಮೋವಾದಲ್ಲಿ ನಡೆದ ಕಾಮನ್‌ವೆಲ್ತ್ ಮತ್ತು ಕಾಮನ್‌ವೆಲ್ತ್ ಮುಖ್ಯಸ್ಥರ ಸಭೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಕಿಂಗ್‌ ಚಾರ್ಲ್ಸ್ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಮೋದಿಯವರು‌ ಈ ಸಭೆಗೆ ಹಾಜರಾಗಿರಲಿಲ್ಲ.

ಬುಧವಾರದ ಕರೆಯಲ್ಲಿ ಪ್ರಧಾನಿ ಮೋದಿ ಹಾಗೂ ಕಿಂಗ್‌ ಚಾರ್ಲ್ಸ್‌ ಅವರು ಹವಾಮಾನದ ಕುರಿತಾದ ಕ್ರಮ ಹಾಗೂ ಸುಸ್ಥಿರತೆಯ ಕುರಿತು ಚರ್ಚೆ ಮಾಡಿದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಿಂಗ್‌ ಚಾರ್ಲ್ಸ್‌ ಕೈಗೊಂಡಿದ್ದ ಕ್ರಮಗಳ ಕುರಿತು ಅವರು ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಸರಕಾರದ ಮೂಲಗಳ ತಿಳಿಸಿವೆ.

2024ರ ಆರಂಭದಲ್ಲಿ ಕಿಂಗ್‌ ಚಾರ್ಲ್ಸ್‌ ರವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಸದ್ಯ ಅವರು ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.  ಪ್ರಧಾನಿ ನರೇಂದ್ರ ಮೋದಿ ಅವರ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ತಮ್ಮ ಶುಭ ಹಾರೈಕೆಗಳನ್ನು ತಿಳಿಸಿದರು ಎಂದು ಸರ್ಕಾರ ತಿಳಿಸಿದೆ.‌

Hot this week

ಜರ್ಮನಿಯಲ್ಲಿ ಅದ್ಧೂರಿಯಾಗಿ ನೆರವೇರಿದ ಜಾನಪದ ವೈಭವ; ಸಂಸ್ಕೃತಿಯ ಗತ ವೈಭವ ಸೃಷ್ಟಿ

ಜರ್ಮನಿ: ರೈನ್ ಮೈನ್ ಕನ್ನಡ ಸಂಘದಿಂದ ಇದೇ ಮೊದಲ ಬಾರಿಗೆ ಶನಿವಾರ...

ಕನ್ನಡ ಸಂಘ ಬಹರೈನ್‌ನಿಂದ ಆರೋಗ್ಯ ದಿನ; ಉಚಿತ ವೈದ್ಯಕೀಯ ಶಿಬಿರ

ಬಹರೈನ್: ಕನ್ನಡ ಸಂಘ ಬಹರೈನ್ ವತಿಯಿಂದ ಅಲ್ ಹಿಲಾಲ್ ಹೆಲ್ತ್ ಕೇರ್...

ಕರ್ನಾಟಕ ಸಂಘ ಖತರ್‌ಗೆ ನೂತನ ಆಡಳಿತ ಸಮಿತಿ ಆಯ್ಕೆ; 2026–2028 ಅವಧಿಗೆ 15ನೇ ಅಧ್ಯಕ್ಷರಾಗಿ ಸುಬ್ರಮಣ್ಯ ಹೆಬ್ಬಾಗಿಲು ಅವಿರೋಧ ಆಯ್ಕೆ

ದೋಹಾ: ಭಾರತೀಯ ಸಾಂಸ್ಕೃತಿಕ ಕೇಂದ್ರ (ICC) ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಭಾರತೀಯ...

ಖತರ್‌ ಕರ್ನಾಟಕ ಸಂಘದಿಂದ ‘ತಾಯಂದಿರ ದಿನ 2026’ ಆಚರಣೆ

ದೋಹಾ(ಖತರ್‌): ಕರ್ನಾಟಕ ಸಂಘ ಖತರ್‌ (KSQ), ಭಾರತೀಯ ಸಾಂಸ್ಕೃತಿಕ ಕೇಂದ್ರ (ICC)...

ಮೇ 15ರಂದು ಬಹರೈನ್ ಕನ್ನಡ ಸಂಘದ ಆಶ್ರಯದಲ್ಲಿ ಉಚಿತ ವೈದ್ಯಕೀಯ ಶಿಬಿರ

ಕನ್ನಡ ಸಂಘ ಬಹರೈನ್ ಆಶ್ರಯದಲ್ಲಿ ಅಲ್ ಹಿಲಾಲ್ ಹೆಲ್ತ್ ಕೇರ್ ಗ್ರೂಪ್...

Related Articles

Popular Categories