ಯುಕೆಐತಿಹಾಸಿಕ ಕೇಂಬ್ರಿಡ್ಜ್‌ ಯೂನಿಯನ್‌ ಅಧ್ಯಕ್ಷೆಯಾಗಿ ಭಾರತೀಯ ಮೂಲದ ಅನುಷ್ಕಾ...

ಐತಿಹಾಸಿಕ ಕೇಂಬ್ರಿಡ್ಜ್‌ ಯೂನಿಯನ್‌ ಅಧ್ಯಕ್ಷೆಯಾಗಿ ಭಾರತೀಯ ಮೂಲದ ಅನುಷ್ಕಾ ಕಾಳೆ ಆಯ್ಕೆ

ಲಂಡನ್: ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಐತಿಹಾಸಿಕ ಕೇಂಬ್ರಿಡ್ಜ್ ಯೂನಿಯನ್ ಸೊಸೈಟಿಯ ಅಧ್ಯಕ್ಷೆಯಾಗಿ ಬ್ರಿಟಿಷ್ ಭಾರತೀಯ ವಿದ್ಯಾರ್ಥಿನಿ ಅನುಷ್ಕಾ ಕಾಳೆ ಆಯ್ಕೆಯಾಗಿದ್ದಾರೆ. ಕೇಂಬ್ರಿಡ್ಜ್ ಯೂನಿಯನ್ ಸೊಸೈಟಿಯು ವಿಶ್ವದ ಅತ್ಯಂತ ಹಳೆಯ ಚರ್ಚಾ ಸಮಾಜಗಳಲ್ಲಿ (debating soceity) ಒಂದಾಗಿದೆ ಮತ್ತು 1815 ರಿಂದ ವಾಕ್ ಸ್ವಾತಂತ್ರ್ಯವನ್ನು ಬಲವಾಗಿ ಪ್ರತಿಪಾದಿಸುತ್ತಿದೆ.

ಇತ್ತೀಚಿನ ಚುನಾವಣೆಯಲ್ಲಿ, ಅನುಷ್ಕಾ ಕಾಳೆ ಅವರು 126 ಮತಗಳನ್ನು ಗಳಿಸಿ ಮುಂದಿನ ಈಸ್ಟರ್ 2025 ಅವಧಿಗೆ ಅವಿರೋಧವಾಗಿ ಆಯ್ಕೆಯಾದರು. ಕೇಂಬ್ರಿಡ್ಜ್‌ ಯೂನಿಯನ್‌ ನ ಅಧ್ಯಕ್ಷೆಯಾಗಿ ಮುಂದಿನ ದಿನಗಳಲ್ಲಿ ಭಾರತೀಯ ಸೊಸೈಟಿ ಸೇರಿದಂತೆ ಹಲವು ಸಂಬಂಧಗಳನ್ನು ಮರು ಗಟ್ಟಿಗೊಳಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

“ಈಸ್ಟರ್ 2025 ರ ಕೇಂಬ್ರಿಡ್ಜ್ ಯೂನಿಯನ್ ಸೊಸೈಟಿಯ ಅಧ್ಯಕ್ಷೆಯಾಗಿ ಚುನಾಯಿತಳಾಗಿರುವುದಕ್ಕೆ ನಾನು ಬಹಳ ಸಂತೋಷಪಡುತ್ತೇನೆ ಮತ್ತು ಹೆಮ್ಮೆಪಡುತ್ತೇನೆ. ನನ್ನನ್ನು ಬೆಂಬಲಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು” ಎಂದು ಅವರು ಹೇಳಿದ್ದಾರೆ. “ನನ್ನ ಅವಧಿಯಲ್ಲಿ ಯೂನಿಯನ್‌ ಅನ್ನು ಇನ್ನಷ್ಟು ವಿಸ್ತಾರಗೊಳಿಸುವ ಹಾಗೂ ಭಾರತೀಯ ಸಮಾಜದೊಂದಿಗಿನ ಬಾಂಧವ್ಯ ಬಲಪಡಿಸುವ ಕೆಲಸಗಳನ್ನು ಮುಖ್ಯವಾಗಿ ನಿರ್ವಹಿಸುತ್ತೇನೆ” ಎಂದು ಅವರು ಹೇಳಿದ್ದಾರೆ.

ಕೇಂಬ್ರಿಡ್ಜ್ ಯೂನಿಯನ್ ಸೊಸೈಟಿಯ ಮಾಜಿ ಅಧ್ಯಕ್ಷರಾಗಿ ಹಲವಾರು ಪ್ರಸಿದ್ಧ ವ್ಯಕ್ತಿಗಳು ಈ ಹಿಂದೆ ಕಾರ್ಯನಿರ್ವಹಿಸಿದ್ದಾರೆ. ಪ್ರಸಿದ್ಧ ಇಂಗ್ಲಿಷ್ ಅರ್ಥಶಾಸ್ತ್ರಜ್ಞ ಮತ್ತು ತತ್ವಜ್ಞಾನಿ ಜಾನ್ ಮೇನಾರ್ಡ್ ಕೇನ್ಸ್, ಕಾದಂಬರಿಕಾರ ರಾಬರ್ಟ್ ಹ್ಯಾರಿಸ್ ಮುಂತಾದವರು ಈ ಸ್ಥಾನವನ್ನು ಅಲಂಕರಿಸಿದ್ದರು.

Hot this week

ಕನ್ನಡ ಕಲಿಕೆಯ ಜೊತೆ ಖತರ್‌ನ ಸ್ಥಳೀಯ ಸಮುದಾಯದಲ್ಲಿ ಭಾರತೀಯ ಸಂಸ್ಕೃತಿ ಪ್ರಚಾರಕ್ಕೆ ಆದ್ಯತೆ ನೀಡಿ: ಭಾರತೀಯ ರಾಯಭಾರಿ ವಿಪುಲ್ ಮನವಿ

ದೋಹಾ: ಖತರ್‌ನ ಭಾರತೀಯ ಸಾಂಸ್ಕೃತಿಕ ಕೇಂದ್ರದ (ಐಸಿಸಿ) ಅಂಗಸಂಸ್ಥೆಯಾದ ‘ಕರ್ನಾಟಕ ಸಂಘ...

ಬಹರೈನ್‌; ‘ಕೆಸಿಎಫ್’ನಿಂದ ಈದ್ ಮಿಲಾದ್ ಸಮ್ಮೇಳನಕ್ಕೆ ಸ್ವಾಗತ ಸಮಿತಿ ರಚನೆ

ಮನಾಮ: ಕರ್ನಾಟಕ ಕಲ್ಬರಲ್ ಫೌಂಡೇಶನ್ (ಕೆಸಿಎಫ್) ಬಹರೈನ್‌ ವತಿಯಿಂದ ಪ್ರವಾದಿ ಮುಹಮ್ಮದ್‌ರವರ...

ಅಮೇರಿಕ; ಭಕ್ತಿ, ಬಸವತತ್ವ, ನಾಟಕ-ನೃತ್ಯ ವೈಭವದಿಂದ ಕಂಗೊಳಿಸಿದ VSNA ಮಹಾಸಮ್ಮೇಳನದ ಎರಡನೇ ದಿನ

ವರದಿ: ಬೆಂಕಿ ಬಸಣ್ಣ, ನ್ಯೂಯಾರ್ಕ್ ಸ್ಯಾನ್‌ಫೋರ್ಡ್ (ಉತ್ತರ ಕೆರೊಲಿನಾ: 48ನೇ ವೀರಶೈವ ಸೊಸೈಟಿ...

ಕನ್ನಡ ಸಂಘ ಬಹರೈನ್‌ನ ‘ಯಕ್ಷ ವೈಭವ 2026’ ಮುಹೂರ್ತ ಪೂಜೆ ಸಂಪನ್ನ

ಬಹರೈನ್‌: ಕನ್ನಡ ಸಂಘ ಬಹರೈನ್ ಅರ್ಪಿಸುವ ‘ಯಕ್ಷ ವೈಭವ 2026’ ರ...

ಅಮೇರಿಕ; ಉತ್ತರ ಕೆರೊಲಿನಾದಲ್ಲಿ 48ನೇ ವಿಎಸ್‌ಎನ್‌ಎ ಮಹಾಸಮ್ಮೇಳನಕ್ಕೆ ಅದ್ದೂರಿ ಚಾಲನೆ

-ಬೆಂಕಿ ಬಸಣ್ಣ, ಉತ್ತರ ಕೆರೊಲಿನಾ ಉತ್ತರ ಅಮೇರಿಕದ ವೀರಶೈವ-ಲಿಂಗಾಯತ ಸಮುದಾಯದ ಅತ್ಯಂತ ಹಿರಿಯ...

Related Articles

Popular Categories