ವಾರ್ತಾ ಭಾರತಿ ಮಧ್ಯಮ ಸಂಸ್ಥೆ ಅನಿವಾಸಿ ಕನ್ನಡಿಗರಿಗಾಗಿಯೇ ಮೀಸಲಾದ ವಿಶೇಷ ವೆಬ್ ಸೈಟ್ globalkannadiga.com ಅನ್ನು ಪ್ರಾರಂಭಿಸುತ್ತಿರುವುದು ಸಂತಸದ ಸಮಾಚಾರ. ಅನಿವಾಸಿ ಕನ್ನಡಿಗರ ಕುರಿತ ವಾರ್ತಾ ಭಾರತಿಯ ಈ ಕಾಳಜಿ ಶ್ಲಾಘನೀಯ.
ವಾರ್ತಾ ಭಾರತಿ ಸತ್ಯ ಹೇಳುವ ಪತ್ರಿಕೆ. ಅನಿವಾಸಿ ಕನ್ನಡಿಗರ ಬಗ್ಗೆ ವಾರ್ತಾ ಭಾರತಿ ಈ ಹಿಂದಿನಿಂದಲೂ ತನ್ನ ಪತ್ರಿಕೆ, ಡಿಜಿಟಲ್ ಮಾಧ್ಯಮಗಳ ಮೂಲಕ ಸಾಕಷ್ಟು ಆದ್ಯತೆ ನೀಡುತ್ತಾ ಬಂದಿದೆ. ಕರ್ನಾಟಕದ ಉದ್ದಗಲಗಳಲ್ಲಿ ಇರುವಂತೆ ವಿದೇಶಗಳಲ್ಲೂ ವಾರ್ತಾ ಭಾರತಿಗೆ ದೊಡ್ಡ ಸಂಖ್ಯೆಯ ಓದುಗರು, ವೀಕ್ಷಕರು, ಅಭಿಮಾನಿಗಳು ಇದ್ದಾರೆ. ಈಗ ಅವರಿಗಾಗಿ ವಾರ್ತಾ ಭಾರತಿ ಒಂದು ಹೊಸ ವೆಬ್ ಸೈಟ್ ಅನ್ನೇ ಮೀಸಲಾಗಿಟ್ಟಿರುವುದು ವಿಶೇಷವಾಗಿದೆ. ಈ ವೆಬ್ ಸೈಟ್ ಎಲ್ಲ ರೀತಿಯಲ್ಲೂ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ.
ಅತೀಕುರ‍್ರಹ್ಮಾನ್ ಮುನೀರಿ,
ಖ್ಯಾತ ಅನಿವಾಸಿ ಉದ್ಯಮಿ, ದುಬೈ
ಪ್ರಧಾನ ಕಾರ್ಯದರ್ಶಿ, ರಾಬಿತಾ ಸೊಸೈಟಿ