ಸಂದೇಶರಾಬಿತಾ ಸೊಸೈಟಿಯಿಂದ globalkannadiga.comಗೆ ಶುಭಾಶಯ

ರಾಬಿತಾ ಸೊಸೈಟಿಯಿಂದ globalkannadiga.comಗೆ ಶುಭಾಶಯ

ವಾರ್ತಾ ಭಾರತಿ ಮಾಧ್ಯಮ ಸಂಸ್ಥೆ ಅನಿವಾಸಿ ಕನ್ನಡಿಗರಿಗಾಗಿ ವಿಶೇಷ ವೆಬ್ ಸೈಟ್ globalkannadiga.com ಪ್ರಾರಂಭಿಸುತ್ತಿರುವುದು ಅಪಾರ ಸಂತೋಷ ತಂದಿದೆ. ಅನಿವಾಸಿ ಕನ್ನಡಿಗರ ಹಿತಚಿಂತನೆಯಲ್ಲಿ ವಾರ್ತಾ ಭಾರತಿ ಕೈಗೊಂಡಿರುವ ಈ ಕ್ರಮ ಶ್ಲಾಘನೀಯವಾಗಿದೆ.

ವಾರ್ತಾ ಭಾರತಿ ಸದಾ ಜನಪರವಾಗಿ ಯೋಚಿಸುವ, ಕಾರ್ಯ ನಿರ್ವಹಿಸುತ್ತಾ ಬಂದಿರುವ ಪತ್ರಿಕೆ. ಸತ್ಯವನ್ನು ಎಲ್ಲೆಡೆಗೆ ತಲುಪಿಸುವ, ಜನರ ಧ್ವನಿಯಾಗಿ ಎರಡು ದಶಕಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಹೆಗ್ಗಳಿಕೆ ವಾರ್ತಾಭಾರತಿ ಮಾಧ್ಯಮ ಸಮೂಹಕ್ಕಿದೆ.

ಅನಿವಾಸಿ ಕನ್ನಡಿಗರ ಪ್ರಾಮುಖ್ಯತೆಯನ್ನು ವಾರ್ತಾ ಭಾರತಿ ತನ್ನ ಪತ್ರಿಕೆ ಮತ್ತು ಡಿಜಿಟಲ್ ಮಾಧ್ಯಮಗಳ ಮೂಲಕ ಸದಾ ಪರಿಗಣಿಸುತ್ತಾ ಬಂದಿದೆ.

ವಿದೇಶಗಳಲ್ಲೂ ಬಹಳ ದೊಡ್ಡ ಸಂಖ್ಯೆಯ ಕನ್ನಡಿಗರು ವಾರ್ತಾ ಭಾರತಿಯ ನಿಷ್ಠಾವಂತ ಓದುಗರು, ವೀಕ್ಷಕರೂ ಆಗಿದ್ದಾರೆ. ಅವರಿಗಾಗಿಯೇ ಮೀಸಲಾಗಿರುವ ಈ ಹೊಸ ವೆಬ್ ಸೈಟ್ ಅನಿವಾಸಿ ಕನ್ನಡಿಗರ ಜೊತೆಗೆ ಕರ್ನಾಟಕದ ಬಂಧವನ್ನು ಮತ್ತಷ್ಟು ಬೆಸೆಯಲು ಸಹಕಾರಿ ಆಗುತ್ತದೆ. ಈ ಯೋಜನೆ ಯಶಸ್ವಿಯಾಗಲಿ ಎಂದು  ಹಾರೈಸುತ್ತೇನೆ.

ಉಮರ್ ಫಾರೂಖ್ ಮುಸ್ಬಾ,

ಅಧ್ಯಕ್ಷರು, ರಾಬಿತಾ ಸೊಸೈಟಿ.

Hot this week

ದುಬೈ; ಅ.11ರಂದು ‘ಗಮ್ಮತ್ ಕಲಾವಿದೆರ್ ದುಬೈ’ ತಂಡದಿಂದ ‘ಪೋನಗ ಕೊನೊಪರಾ..?’ ನಾಟಕ

ದುಬೈ: ಯುಎಇಯಲ್ಲಿರುವ ನಾಟಕ ಅಭಿಮಾನಿಗಳಿಗೆ ಕಳೆದ ಹಲವಾರು ವರ್ಷಗಳಿಂದ ಮನರಂಜನೆ ನೀಡುತ್ತಾ...

ಅಮೇರಿಕದಲ್ಲಿ ‘ಕಾಂತಾರ: ಚಾಪ್ಟರ್ 1’ ಯಶಸ್ಸಿನ ಅಬ್ಬರ! ಸಿನೆಮಾ ನೋಡಿದವರು ಏನೆಂದಿದ್ದಾರೆ ನೋಡಿ…!

ನ್ಯೂಯಾರ್ಕ್: ಬಹುನಿರೀಕ್ಷಿತ ‘ಕಾಂತಾರ: ಚಾಪ್ಟರ್ 1’ ಎಲ್ಲೆಡೆ ಬಿಡುಗಡೆಗೊಂಡಿದ್ದು, ಅಮೇರಿಕದ ನ್ಯೂಯಾರ್ಕ್...

Related Articles

Popular Categories