ಯುಎಇglobalkannadiga.com ಅನಿವಾಸಿಗಳ ಸಮಸ್ಯೆ, ಸವಾಲು, ಸುಖದುಃಖಕ್ಕೆ ಸ್ಪಂದಿಸುವ ತಾಣವಾಗಲಿ:...

globalkannadiga.com ಅನಿವಾಸಿಗಳ ಸಮಸ್ಯೆ, ಸವಾಲು, ಸುಖದುಃಖಕ್ಕೆ ಸ್ಪಂದಿಸುವ ತಾಣವಾಗಲಿ: ಹಿದಾಯತ್ ಅಡ್ಡೂರು ಶುಭ ಹಾರೈಕೆ

ಇಂಟರ್ ನ್ಯಾಷನಲ್ ಕನ್ನಡಿಗಾಸ್ ಫೆಡೆರೇಶನ್'ನಿಂದ ಶುಭಾಶಯ

ಕನ್ನಡಿಗರ ಅಚ್ಚುಮೆಚ್ಚಿನ ಮಾಧ್ಯಮ ಸಂಸ್ಥೆ ವಾರ್ತಾಭಾರತಿ ಈಗ ಇನ್ನೊಂದು ವಿನೂತನ ಸಾಹಸಕ್ಕೆ ಅಣಿಯಾಗಿದೆ. ಜಾಗತಿಕ ಕನ್ನಡಿಗರಿಗಾಗಿಯೇ ಒಂದು ವಿಶೇಷ ವೆಬ್ ಸೈಟ್ globalkannadiga.com ಎಂಬ ಹೆಸರಲ್ಲಿ ಪ್ರಾರಂಭಿಸುತ್ತಿದೆ. ಇದು ಅತ್ಯಂತ ಶ್ಲಾಘನೀಯ ಕೆಲಸವಾಗಿದೆ. ವಾರ್ತಾಭಾರತಿ ಪ್ರಾರಂಭದಿಂದಲೂ ಅನಿವಾಸಿ ಕನ್ನಡಿಗರಿಗೆ ವಿಶೇಷ ಆದ್ಯತೆ ನೀಡುತ್ತಾ ಬಂದಿರುವ ಪತ್ರಿಕೆ. ಅನಿವಾಸಿಗಳ ಸಮಸ್ಯೆಗಳಿಗೆ ಧ್ವನಿಯಾಗುತ್ತಾ ಬಂದಿದೆ. ಈಗ ಡಿಜಿಟಲ್ ಹಾಗು ವಿಶುವಲ್ ಮೀಡಿಯಾಗಳಲ್ಲೂ ಛಾಪು ಮೂಡಿಸಿರುವ ವಾರ್ತಾಭಾರತಿ ಅನಿವಾಸಿ ಕನ್ನಡಿಗರ ಬಗ್ಗೆ ವಿಶೇಷ ಪ್ರೀತಿ ಹಾಗು ಕಾಳಜಿಯಿಂದ ರೂಪಿಸಿರುವ ಹೊಸ ವೆಬ್ ತಾಣ globalkannadiga.com ಭರ್ಜರಿ ಯಶಸ್ಸು ಕಾಣಲಿ. ಇದು ಜಗತ್ತಿನ ಎಲ್ಲ ದೇಶಗಳ ಕನ್ನಡಿಗರು ಒಟ್ಟು ಸೇರುವ ವೇದಿಕೆಯಾಗಲಿ. ಅನಿವಾಸಿಗಳ ಸಮಸ್ಯೆ, ಸವಾಲು, ಸುಖದುಃಖಕ್ಕೆ ಸ್ಪಂದಿಸುವ ತಾಣವಾಗಲಿ, ಕರ್ನಾಟಕ ಸರಕಾರ ಹಾಗು ಅನಿವಾಸಿ ಕನ್ನಡಿಗರ ನಡುವಿನ ಸೇತುವೆಯಾಗಲಿ ಎಂದು ಹಾರೈಸುತ್ತೇನೆ.

ಹಿದಾಯತ್ ಅಡ್ಡೂರು
ಸಂಚಾಲಕರು, ಇಂಟರ್ ನ್ಯಾಷನಲ್ ಕನ್ನಡಿಗಾಸ್ ಫೆಡೆರೇಶನ್
32 ದೇಶಗಳ 128 ಕನ್ನಡ ಸಂಘಟನೆಗಳ ಒಕ್ಕೂಟ

Hot this week

ದುಬೈನಲ್ಲಿ ಎಸ್‌ಕೆಎಸ್‌ಎಸ್‌ಎಫ್ ವಿಖಾಯ ವತಿಯಿಂದ ರಕ್ತದಾನ ಶಿಬಿರ; 194 ಮಂದಿಯಿಂದ ರಕ್ತದಾನ

ದುಬೈ: ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್...

ಸೋಲೋ ವಿಶ್ವ ಮೋಟಾರ್‌ಸೈಕಲ್ ಯಾತ್ರಿಕ ಗೇಬ್ರಿಯಲ್ ಶರತ್​​ರನ್ನು ಗೌರವಿಸಿದ ಕರ್ನಾಟಕ ಸಂಘ ಖತರ್

ದೋಹಾ: ಭಾರತೀಯ ಸಮುದಾಯಕ್ಕೆ ಹೆಮ್ಮೆಯ ಕ್ಷಣವಾಗುವಂತೆ, ಮಂಗಳೂರಿನ ಸಾಹಸಿ ಸೋಲೋ ವಿಶ್ವ...

ಕನ್ನಡ ಸಂಘ ಬಹರೈನ್‌ಗೆ ಪ್ರತಿಷ್ಠಿತ “ನವ ಕರ್ನಾಟಕ ರತ್ನ” ಪ್ರಶಸ್ತಿ

ಬೆಂಗಳೂರು: ಕನ್ನಡ ಭಾಷೆ, ನಾಡು-ನುಡಿ, ಕಲೆ, ಸಂಸ್ಕೃತಿ ಹಾಗೂ ಹೊರನಾಡಿನಲ್ಲಿ ಕನ್ನಡಿಗರ...

ದುಬೈಯಲ್ಲಿ ದಾಸವಾಣಿಯ ಸೊಬಗನ್ನು ಸಾರಿದ 27ನೇ ಹರಿನಾಮ ಸಂಕೀರ್ತನೆ

ದುಬೈ: ಕಳೆದ ನಾಲ್ಕು ದಶಕಗಳಿಂದ ದುಬೈಯಲ್ಲಿ ನೆಲೆಸಿದ್ದು, ಆಸಕ್ತರಿಗೆ ಕರ್ನಾಟಕ ಶಾಸ್ತ್ರೀಯ...

ಬಹರೈನ್‌; ಅ.9ರಂದು ಶ್ರೀ ನಾರಾಯಣ ಗುರು ಜಯಂತಿ ಅಂಗವಾಗಿ ‘Tribute to Bahrain’ ವಿಶೇಷ ಕಾರ್ಯಕ್ರಮ

ಮನಾಮಾ: ಬದುಕನ್ನು ಕಟ್ಟಿಕೊಳ್ಳಲು, ಕನಸುಗಳನ್ನು ನನಸಾಗಿಸಿಕೊಳ್ಳಲು ಹಾಗೂ ಭವಿಷ್ಯಕ್ಕೆ ಹೊಸ ದಿಕ್ಕು...

Related Articles

Popular Categories