ಯುಎಸ್‌ಎ'ಬಿಗ್ ಬಾಸ್ ಸೀಸನ್ 12'ನ್ನು ಗೆದ್ದ ಗಿಲ್ಲಿ; ಅಮೇರಿಕದಲ್ಲಿ...

‘ಬಿಗ್ ಬಾಸ್ ಸೀಸನ್ 12’ನ್ನು ಗೆದ್ದ ಗಿಲ್ಲಿ; ಅಮೇರಿಕದಲ್ಲಿ ವಿಜಯೋತ್ಸವ ಆಚರಿಸಿದ ಕನ್ನಡಿಗರು!

ನ್ಯೂಯಾರ್ಕ್: ಬಿಗ್ ಬಾಸ್ ಸೀಸನ್ 12ನ್ನು ದಾಖಲೆ ಓಟುಗಳಿಂದ ಗೆದ್ದ ಹಳ್ಳಿ ಹುಡುಗ ಗಿಲ್ಲಿಯ ವಿಜಯೋತ್ಸವವನ್ನು ಅಮೇರಿಕದ ನ್ಯೂಯಾರ್ಕ್ ರಾಜಧಾನಿ ಅಲ್ಪನಿಯಲ್ಲಿ ಬೆಂಕಿ ಬಸಣ್ಣ ನೇತೃತ್ವದಲ್ಲಿ ಆಲ್ಬನಿಯ ಕನ್ನಡಿಗರು ಸಂಭ್ರಮದಿಂದ ಆಚರಿಸಿದ್ದಾರೆ.

ಸಕಲಕಲಾವಲ್ಲಭ ಹಳ್ಳಿ ಹುಡುಗ ಗಿಲ್ಲಿಗೆ ಭಾರತದಲ್ಲಿ ಮಾತ್ರವಲ್ಲ ಅಮೇರಿಕದಲ್ಲಿಯೂ ಕೂಡ ಬಹಳಷ್ಟು ಅಭಿಮಾನಿಗಳ ವರ್ಗವಿದೆ, ಫ್ಯಾನ್ ಬೇಸ್ ಇದೆ. ಬಿಗ್ ಬಾಸ್ ಸೀಸನ್ ಕ್ರೇಜು ಅಮೇರಿಕದಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ತುಂಬಾ ಜಾಸ್ತಿ ಇತ್ತು.ಇದಕ್ಕೆ ಮುಖ್ಯ ಕಾರಣ ಗಿಲ್ಲಿ. ಇಷ್ಟು ವರ್ಷ ಬಿಗ್ ಬಾಸ್ ನಿಂದ ಸ್ಪರ್ಧಾಳುಗಳು ಫೇಮಸ್ ಆಗುತ್ತಿದ್ದರೆ ಈ ವರ್ಷ ಅದು ಉಲ್ಟಾ ಆಗಿದೆ. ಗಿಲ್ಲಿಯಿಂದಾಗಿ ಅಮೆರಿಕದಲ್ಲಿ ಬಿಗ್ ಬಾಸ್ ತುಂಬಾ ಜನಪ್ರಿಯವಾಗಿದೆ” ಎಂದು ಕನ್ನಡಿಗರ ಮುಖಂಡ ಬೆಂಕಿ ಬಸಣ್ಣ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಮನು, ನಮ್ಮ ಚಿಕ್ಕ ಮಕ್ಕಳಾದ ದಿಯಾ ಮತ್ತು ವಿಹಾನ್ ರಿಗೆ ಗಿಲ್ಲಿ ಕಂಡರೆ ಬಹಳ ಇಷ್ಟ. ಅವನ ಡೈಲಾಗ್ ಗಳನ್ನು ಹೇಳುತ್ತಾರೆ. ಅವನ ಡಾನ್ಸ್ ಗಳನ್ನು ಮಾಡುತ್ತಾರೆ ಎಂದು ಸಂತೋಷವನ್ನು ಹಂಚಿಕೊಂಡರು.

ಇನ್ನೋರ್ವ ಕನ್ನಡಿಗ ಅಭಿಷೇಕ್ ಅವರು ಮಾತನಾಡಿ, ಅವರು, ಎರಡನೇ ಸ್ಥಾನವನ್ನು ಮುಗ್ಧ ಮನಸ್ಸಿನ, ಒಳ್ಳೆ ಹೃದಯದ, ಸಾಮಾನ್ಯ ಕುಟುಂಬದ ಹುಡುಗಿ ರಕ್ಷಿತಾ ಗೆದ್ದದ್ದು ತುಂಬಾ ಖುಷಿಯಾಗಿದೆ. ಗಿಲ್ಲಿ ಮತ್ತು ರಕ್ಷಿತಾ ಇಬ್ಬರೂ ಹಳ್ಳಿ ಮೂಲದಿಂದ ಬಂದು ತಮ್ಮ ಸ್ವಪ್ರತಿಭೆಯಿಂದ ಇಷ್ಟು ದೊಡ್ಡ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇದಕ್ಕೆ ನಮ್ಮ ಕನ್ನಡ ಜನತೆಯ ಬೆಂಬಲವೇ ಕಾರಣ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಆಲ್ಬನಿ ಕನ್ನಡ ಸಂಘದಲ್ಲಿ ಇಂದು ಕರೋಕೆ ನೈಟ್ ಆಯೋಜಿಸಿ ಎಲ್ಲಾ ಸದಸ್ಯರು ಹಾಡಿ ಕುಣಿದು ಕುಪ್ಪಳಿಸಿ ಆನಂದ ಪಟ್ಟರು. ಜೊತೆಗೆ ಪಾಟ್ ಲಾಕ್ ಮೃಷ್ಟಾನ್ನ ಭೋಜನವನ್ನು ಆಯೋಜಿಸಲಾಗಿತ್ತು.

Hot this week

ಫ್ಲೋರಿಡಾ; ತ್ಯಾಗರಾಜ–ಪುರಂದರ ದಾಸರ ಆರಾಧನಾ ಉತ್ಸವ ಭಕ್ತಿಭಾವದಿಂದ ಆಚರಣೆ

ಫ್ಲೋರಿಡಾ: ಇತ್ತೀಚೆಗೆ ತ್ಯಾಗರಾಜ ಹಾಗೂ ಪುರಂದರ ದಾಸರ ಆರಾಧನಾ ಉತ್ಸವವನ್ನು ಸಾಂಸ್ಕೃತಿಕ...

ದುಬೈ; ಜನವರಿ 25ರಂದು ‘ಗುರು ಕಿರಣ್ ನೈಟ್’ ಅದ್ಧೂರಿ ಸಂಗೀತ ಕಾರ್ಯಕ್ರಮ

ದುಬೈ: ಇಲ್ಲಿನ ಅಲ್ ಖಿಸೆಸ್ಸ್ ಅಮಿಟಿ ಸ್ಕೂಲಿನ ಫುಟ್ಬಾಲ್ ಮೈದಾನದಲ್ಲಿ ಜನವರಿ...

ಉಗಾಂಡದಲ್ಲಿ ಕನ್ನಡ ಭವನವನ್ನು ನಿರ್ಮಿಸಲು ರಾಜ್ಯ ಸರಕಾರದ ಸಹಕಾರ ಅಗತ್ಯ: ಕರ್ನಾಟಕ ಸಂಘ ಅಧ್ಯಕ್ಷ ದೀಪಕ್ ಜಗದೀಶ್

ವಿಶೇಷ ಸಂದರ್ಶನ: ಎಂ.ಇಕ್ಬಾಲ್ ಉಚ್ಚಿಲ, ದುಬೈ ಕನ್ನಡಿಗರು ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಕನ್ನಡ...

ಜನವರಿ 25ರಂದು ಶಾರ್ಜಾದಲ್ಲಿ ‘ಕೆಸಿಎಫ್’ನಿಂದ ‘ಮಹಬ್ಬಾ ಫ್ಯಾಮಿಲಿ ಫೆಸ್ಟ್-2026’

ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಯುಎಇಯ ಆಶ್ರಯದಲ್ಲಿ 'ಮಹಬ್ಬಾ ಫ್ಯಾಮಿಲಿ ಫೆಸ್ಟ್...

Related Articles

Popular Categories