ಯುಎಇಯುಎಇಯಲ್ಲಿ ಪ್ರಯಾಣಿಕರ ಸೇವೆ ಆರಂಭಿಸಿದ ಇತ್ತಿಹಾದ್ ರೈಲು; ಸಾರ್ವಜನಿಕರಿಂದ...

ಯುಎಇಯಲ್ಲಿ ಪ್ರಯಾಣಿಕರ ಸೇವೆ ಆರಂಭಿಸಿದ ಇತ್ತಿಹಾದ್ ರೈಲು; ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ

ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್‌ನ ರಾಷ್ಟ್ರೀಯ ರೈಲು ಜಾಲವಾದ ಇತ್ತಿಹಾದ್ ರೈಲು ಪ್ರಯಾಣಿಕರ ಸೇವೆಗೆ ಇಂದು ಅಧಿಕೃತ ಚಾಲನೆ ನೀಡಲಾಗಿದೆ.

ಮೊದಲ ಹಂತದಲ್ಲಿ ಅಬುಧಾಬಿ ಮತ್ತು ಫುಜೈರಃ ನಡುವಿನ ರೈಲು ಸಂಚಾರ ಆರಂಭಗೊಂಡಿದ್ದು, ಈ ಪ್ರಯಾಣವು ಅತ್ಯಂತ ಕಡಿಮೆ ಸಮಯದಲ್ಲಿ ತಲುಪಲಿದೆ.

ಮಂಗಳವಾರ ಬೆಳಗ್ಗೆ 5.34ಕ್ಕೆ ಫುಜೈರಃ ದಿಂದ ಸಂಚಾರ ಆರಂಭಿಸಿದ ಉದ್ಘಾಟನಾ ರೈಲು ನಿಗದಿಯುತ ಸಮಯಕ್ಕಿಂತ ಮೊದಲೇ ಅಬುಧಾಬಿಯ ಮೊಹಮ್ಮದ್ ಬಿನ್ ಝಾಯಿದ್ ಸಿಟಿ ನಿಲ್ದಾಣವನ್ನು ತಲುಪಿದೆ.

ಈ ಸೇವೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಧಿಕೃತ ಚಾಲನೆಗೂ ಮುನ್ನವೇ 10,000ಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ ಎಂದು ವರದಿಯಾಗಿದೆ. ಆರಂಭಿಕ ಹಂತದಲ್ಲಿ ಅಬುಧಾಬಿ–ಫುಜೈರಃ ಮಾರ್ಗದಲ್ಲಿ ಸೇವೆ ಲಭ್ಯವಿದ್ದು, ಮುಂದಿನ ಹಂತಗಳಲ್ಲಿ ದುಬೈ ಸೇರಿದಂತೆ ಇತರ ಎಮಿರೇಟ್‌ಗಳಿಗೆ ವಿಸ್ತರಿಸುವ ಯೋಜನೆ ಇದೆ.

Hot this week

ಬಹರೈನ್‌; ಅ.9ರಂದು ಶ್ರೀ ನಾರಾಯಣ ಗುರು ಜಯಂತಿ ಅಂಗವಾಗಿ ‘Tribute to Bahrain’ ವಿಶೇಷ ಕಾರ್ಯಕ್ರಮ

ಮನಾಮಾ: ಬದುಕನ್ನು ಕಟ್ಟಿಕೊಳ್ಳಲು, ಕನಸುಗಳನ್ನು ನನಸಾಗಿಸಿಕೊಳ್ಳಲು ಹಾಗೂ ಭವಿಷ್ಯಕ್ಕೆ ಹೊಸ ದಿಕ್ಕು...

‘ಕನ್ನಡ ಸಂಘ ಬಹರೈನ್’ನಿಂದ ‘ಯಕ್ಷ ವೈಭವ 2026’: ಅದ್ಧೂರಿ ಯಕ್ಷಗಾನ ಪ್ರದರ್ಶನ

ಬಹರೈನ್: ಕನ್ನಡ ಸಂಘ ಬಹರೈನ್ ವತಿಯಿಂದ ಆಯೋಜಿಸಲಾದ “ಯಕ್ಷ ವೈಭವ 2026...

ಕರ್ನಾಟಕ ಸಂಘ ಖತರ್‌ನಿಂದ 71ನೇ ಕರ್ನಾಟಕ ರಾಜ್ಯೋತ್ಸವ ‘ಕರುನಾಡ ವೈಭವ 2026’ ಪೋಸ್ಟರ್ ಅನಾವರಣ

ದೋಹಾ: ಭಾರತೀಯ ರಾಯಭಾರ ಕಚೇರಿ, ದೋಹಾ ಇದರ ಆಶ್ರಯದಲ್ಲಿ ಕಾರ್ಯನಿರ್ವಹಿಸುವ ಭಾರತೀಯ...

ಮಸ್ಕತ್‌ನಲ್ಲಿ ಸತ್ಯನಾರಾಯಣ ಪೂಜೆ-ನಾರಾಯಣ ಗುರು ಜಯಂತಿ ಆಚರಣೆ

ಮಸ್ಕತ್: ಒಮಾನ್ ಬಿಲ್ಲವಾಸ್ ವತಿಯಿಂದ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಬ್ರಹ್ಮಶ್ರೀ...

ದುಬೈ; ಗಂಧರ್ವ ಗಮಕ ಶಾಲೆಯಲ್ಲಿ ವಿಶೇಷ ಗುರುಪೂರ್ಣಿಮಾ ಕಾರ್ಯಕ್ರಮ

ದುಬೈ: ಗಮಕ ಕಲೆಯ ಪ್ರಸಿದ್ಧ ಕಲಾವಿದ ಹಾಗೂ ಪದ್ಮಶ್ರೀ ಪುರಸ್ಕೃತ ಹೊಸಹಳ್ಳಿ...

Related Articles

Popular Categories