ಬಹರೈನ್ಬಹರೈನ್‌; 'ಕೆಸಿಎಫ್'ನಿಂದ ಈದ್ ಮಿಲಾದ್ ಸಮ್ಮೇಳನಕ್ಕೆ ಸ್ವಾಗತ ಸಮಿತಿ...

ಬಹರೈನ್‌; ‘ಕೆಸಿಎಫ್’ನಿಂದ ಈದ್ ಮಿಲಾದ್ ಸಮ್ಮೇಳನಕ್ಕೆ ಸ್ವಾಗತ ಸಮಿತಿ ರಚನೆ

ಮನಾಮ: ಕರ್ನಾಟಕ ಕಲ್ಬರಲ್ ಫೌಂಡೇಶನ್ (ಕೆಸಿಎಫ್) ಬಹರೈನ್‌ ವತಿಯಿಂದ ಪ್ರವಾದಿ ಮುಹಮ್ಮದ್‌ರವರ 1501ನೇ ಜನ್ಮದಿನಾಚರಣೆಯ ಅಂಗವಾಗಿ ಆಗಸ್ಟ್ 21ರಂದು ಮನಾಮದ ಕನ್ನಡ ಭವನದಲ್ಲಿ ಆಯೋಜಿಸಲಾಗುವ ‘ಅಂತಾರಾಷ್ಟ್ರೀಯ ಗ್ರಾಂಡ್ ಈದ್ ಮೀಲಾದ್ ಕಾನ್ಸರೆನ್ಸ್-2026’ ಕಾರ್ಯಕ್ರಮದ ಸ್ವಾಗತ ಸಮಿತಿ ರಚಿಸಲಾಗಿದೆ.

‘ಪ್ರವಾದಿ ಮುಹಮ್ಮದರ ಜೀವನ ಮಾನವತೆಗೆ ಮಾದರಿ’ ಎಂಬ ಘೋಷವಾಕ್ಯದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮದ ಸ್ವಾಗತ ಸಮಿತಿ ರಚನಾ ಸಭೆಯು ಕೆಸಿಎಫ್ ಬಹರೈನ್‌ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಜಮಾಲುದ್ದೀನ್ ವಿಟ್ಲ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಖಲಂದ‌ರ್ ಶರೀಫ್ ಕಕ್ಕೆಪದವು ಅವರನ್ನು ಸ್ವಾಗತ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಸಮದ್‌ ಉಜಿರೆಬೆಟ್ಟು ಹಾಗೂ ಸುಹೈಲ್ ಬಿ.ಸಿ.ರೋಡ್ ಉಪಾಧ್ಯಕ್ಷರಾಗಿ, ಇಕ್ಬಾಲ್ ಮಂಜನಾಡಿ ಕನ್ವಿನರ್ ಆಗಿ, ಹನೀಫ್ ಮುಸ್ಲಿಯಾರ್ ಉಪ ಕನ್ವಿನರ್ ಆಗಿ ಹಾಗೂ ನೌಫಲ್ ವಿಟ್ಲ ಅವರನ್ನು ಕೋಶಾಧಿಕಾರಿಯಾಗಿ ಆಯ್ಕೆ ಮಾಡಲಾಯಿತು.

ಇದೇ ವೇಳೆ ಸಿದ್ದೀಖ್ ಉಸ್ತಾದ್, ಅಹ್ಮದ್ ಉಸ್ತಾದ್, ಔಫ್ ಸಅದಿ, ಶಿಹಾಬ್ ಉಸ್ತಾದ್, ಮುಆಝ್ ಉಜಿರೆ, ಮನ್ಸೂ‌ರ್ ಬೆಲ್ಮ, ಅಶ್ರಫ್ ರೆಂಜಾಡಿ, ಲತೀಫ್ ಪೆರೋಲಿ, ತೌಫೀಖ್ ಬೆಳ್ತಂಗಡಿ, ಮಜೀದ್ ಪೈಂಬಚ್ಚಾಲ್, ಶಾಫಿ ಮಾದಾಪುರ, ಮುಹಮ್ಮದ್ ಅಲಿ ವೇಣೂರು, ಹಾರಿಸ್ ಒಕ್ಕೆತ್ತೂರು, ಸಯ್ಯದ್ ಪೆರ್ಲ, ಅಶ್ರಫ್ ಕಿನ್ಯ, ನಿಯಾಝ್ ಕುರ್ನಾಡು ಹಾಗೂ ಅಝೀಝ್ ಸುಳ್ಯ ಸೇರಿದಂತೆ ಹಲವರನ್ನು ಸ್ವಾಗತ ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಖ್ಯಾತ ವಾಗ್ಮಿ ನೌಫಲ್ ಸಖಾಫಿ ಕಳಸ ಉಸ್ತಾದ್ ಭಾಗವಹಿಸಲಿದ್ದಾರೆ. ಜೊತೆಗೆ ಹಲವು ವಿದ್ವಾಂಸರು, ಧಾರ್ಮಿಕ ಮುಖಂಡರು, ಸಮುದಾಯದ ಗಣ್ಯರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ. ಸುಹೈಲ್ ಬಿ.ಸಿ.ರೋಡ್ ಸ್ವಾಗತಿಸಿ, ಸೂಫಿ ಪೈಂಬಚ್ಚಾಲ್ ವಂದಿಸಿದರು.

Hot this week

ಕನ್ನಡಿಗರ ಕೂಟ ದುಬೈ ವತಿಯಿಂದ ಮಾಜಿ ಕ್ರಿಕೆಟಿಗ ಬ್ರಿಜೇಶ್ ಪಟೇಲ್‌ಗೆ ಸನ್ಮಾನ

ಬೆಂಗಳೂರು: ಕನ್ನಡಿಗರ ಕೂಟ, ದುಬೈ ತಂಡವು ಮಾಜಿ ಭಾರತೀಯ ಕ್ರಿಕೆಟಿಗ ಹಾಗೂ...

ಫ್ಲೋರಿಡಾ ತುಳು ಕೂಟದ 2ನೇ ವಾರ್ಷಿಕ ಪೊಟ್ಲಕ್ ಪಿಕ್ನಿಕ್ ಸಂಭ್ರಮ

ಅಮೇರಿಕದ ಫ್ಲೋರಿಡಾ ತುಳು ಕೂಟವು ಇತ್ತೀಚೆಗೆ ಕ್ಯಾಸೆಲ್‌ಬೆರ್ರಿ ಒರ್ಲಾಂಡೊದಲ್ಲಿ ತನ್ನ ಎರಡನೇ...

ಭಾರತದ ನೂತನ ಕಾನ್ಸುಲ್ ಜನರಲ್ ಡಾ.ವಿಷ್ಣುವರ್ಧನ ರೆಡ್ಡಿಗೆ ಕನ್ನಡಿಗರ ಕೂಟ ದುಬೈಯಿಂದ ಸ್ವಾಗತ

ದುಬೈ: ಯುಎಇಯ ಪ್ರತಿಷ್ಠಿತ ಕನ್ನಡ ಸಂಘಟನೆಗಳಲ್ಲಿ ಒಂದಾಗಿರುವ ಕನ್ನಡಿಗರ ಕೂಟ, ದುಬೈ...

ಭಾರತದ 80ನೇ ಸ್ವಾತಂತ್ರೋತ್ಸವದ ಸವಿನೆನಪಿಗಾಗಿ ರಕ್ತದಾನದಿಂದ ಮಾನವೀಯತೆಯ ಸಂದೇಶ ಸಾರಿದ ಕರ್ನಾಟಕ ಸಂಘ ಶಾರ್ಜಾ

ದುಬೈ: ಭಾರತದ 80ನೇ ಸ್ವಾತಂತ್ರೋತ್ಸವದ ಸವಿನೆನಪಿಗಾಗಿ ಕರ್ನಾಟಕ ಸಂಘ ಶಾರ್ಜಾ ಮತ್ತು...

ಸಲಾಲದ ಅಲ್ ನೂರ್ ಎಜುಕೇಶನ್ ಸೆಂಟರ್‌ನಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

ಸಲಾಲ(ಒಮಾನ್): ಸಲಾಲದ ಅಲ್ ನೂರ್ ಎಜುಕೇಶನ್ ಸೆಂಟರ್ ನಲ್ಲಿ ಬ್ಯಾರೀಸ್ ಕಮ್ಯುನಿಟಿ...

Related Articles

Popular Categories