ಒಮಾನ್ಸಲಾಲದ ಅಲ್ ನೂರ್ ಎಜುಕೇಶನ್ ಸೆಂಟರ್‌ನಲ್ಲಿ ಸಂಭ್ರಮದ ಸ್ವಾತಂತ್ರ್ಯ...

ಸಲಾಲದ ಅಲ್ ನೂರ್ ಎಜುಕೇಶನ್ ಸೆಂಟರ್‌ನಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

ಸಲಾಲ(ಒಮಾನ್): ಸಲಾಲದ ಅಲ್ ನೂರ್ ಎಜುಕೇಶನ್ ಸೆಂಟರ್ ನಲ್ಲಿ ಬ್ಯಾರೀಸ್ ಕಮ್ಯುನಿಟಿ ಸಲಾಲ ಸಹಯೋಗದಲ್ಲಿ ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶಭಕ್ತಿ ಹಾಗೂ ಸಂಭ್ರಮದ ವಾತಾವರಣದಲ್ಲಿ ಆಚರಿಸಲಾಯಿತು. ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ಗಣ್ಯ ಅತಿಥಿಗಳು ಹಾಗೂ ಸಮುದಾಯದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಅಂಡ್ ಅಪ್ಲೈಡ್ ಸೈನ್ಸಸ್, ಧೋಫಾರ್‌ನ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್ ವಿಭಾಗದ ಡಾ.ನೂರುಲ್ ಹಸನ್, ಸ್ವಾತಂತ್ರ್ಯದ ಮಹತ್ವ, ಭಾರತದ ಸ್ವಾತಂತ್ರ್ಯ ಹೋರಾಟ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಗಳ ಕುರಿತು ಮಕ್ಕಳೊಂದಿಗೆ ಸಂವಾದ ನಡೆಸಿದರು. ಉತ್ತಮ ರಾಷ್ಟ್ರ ನಿರ್ಮಾಣದಲ್ಲಿ ಯುವ ಪೀಳಿಗೆಯ ಜವಾಬ್ದಾರಿಯ ಕುರಿತು ಅವರು ಮಕ್ಕಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು.

ಇನ್ನೋರ್ವ ಮುಖ್ಯ ಅತಿಥಿ ಸಫ್ವಾ ಫುಡ್ ಮ್ಯಾನೇಜರ್ ಅರ್ಷಾಕ್, ಸ್ವಾತಂತ್ರ್ಯ ದಿನಾಚರಣೆಯ ಮಹತ್ವದ ಕುರಿತು ಮಾತನಾಡಿದರು. ಅಲ್ ನೂರ್ ಎಜುಕೇಶನ್ ಸೆಂಟರ್ ಅಧ್ಯಕ್ಷ ಉಮ್ಮರ್ ಫಾರೂಕ್ ಕಣ್ಣಂಗಾರ್ ಅವರು ಸಂಸ್ಥೆಯ ಶೈಕ್ಷಣಿಕ ಉದ್ದೇಶಗಳು ಹಾಗೂ ಸಲಾಲದ ಮಕ್ಕಳ ಶಿಕ್ಷಣ ಮತ್ತು ಮಾರ್ಗದರ್ಶನಕ್ಕಾಗಿ ಕೈಗೊಳ್ಳುತ್ತಿರುವ ಚಟುವಟಿಕೆಗಳ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಬ್ಯಾರೀಸ್ ಕಮ್ಯುನಿಟಿ ಸಲಾಲ ಅಧ್ಯಕ್ಷ ಸಿದ್ದೀಕ್, ಸಫ್ವಾ ಕ್ರಿಕೆಟ್ ಕ್ಲಬ್ ಮಾಲೀಕ ಆಸಿಬ್ ಇಬ್ರಾಹಿಂ ಮುಖ್ಯ ಅತಿಥಿಗಳಾಗು ಭಾಗವಹಿಸಿದ್ದರು.

ಗಮನ ಸೆಳೆದ ಮಕ್ಕಳ ಪ್ರತಿಭಾ ಪ್ರದರ್ಶನ
ಮಕ್ಕಳ ಸ್ಪರ್ಧಾ ಕಾರ್ಯಕ್ರಮವು ಮಾಸ್ಟರ್ ಅನಸ್ ಅವರ ಸುಂದರ ದುವಾ ಪಠಣದೊಂದಿಗೆ ಆರಂಭವಾಯಿತು. ಅಲ್ ನೂರ್ ಎಜುಕೇಶನ್ ಸೆಂಟರ್‌ನ ಶಿಕ್ಷಕರ ಮಾರ್ಗದರ್ಶನದಲ್ಲಿ ಭಾಷಣ, ದೇಶಭಕ್ತಿ ಗೀತೆ ಹಾಗೂ ಭಾರತದ ನಕ್ಷೆ ಚಿತ್ರಿಸುವ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಪ್ರತಿಭೆ ಹಾಗೂ ಆತ್ಮವಿಶ್ವಾಸವನ್ನು ಪ್ರದರ್ಶಿಸಿದರು. ಮಕ್ಕಳ ದೇಶಭಕ್ತಿ ಪ್ರದರ್ಶನವು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರು
ಭಾಷಣ ಸ್ಪರ್ಧೆ: 1ನೇ ತರಗತಿ

ಪ್ರಥಮ-ಝುಹಾ
ದ್ವಿತೀಯ-ಅರ್ಶ್ ಹುಸೈನ್
ತೃತೀಯ-ಸಫಾ
2ನೇ ತರಗತಿ
ಪ್ರಥಮ-ಆಶ್ವಿ
ದ್ವಿತೀಯ-ಇಫ್ರಾ
ತೃತೀಯ-ಸನಾ

ದೇಶಭಕ್ತಿ ಗೀತೆ ಸ್ಪರ್ಧೆ
1ನೇ ತರಗತಿ

ಪ್ರಥಮ-ಶೇಖ್ ಮಾಹಿ
ದ್ವಿತೀಯ-ಅಬ್ದುಲ್ ಹಾದಿ & ಫರ್ಹಾನ್ (ಜಂಟಿ)
ತೃತೀಯ-ಝಮಾ & ಅನಸ್ (ಜಂಟಿ)
2ನೇ ತರಗತಿ
ಪ್ರಥಮ-ಮುಹಮ್ಮದ್ ಅನಸ್

ಭಾರತದ ನಕ್ಷೆ ಚಿತ್ರಿಸುವ ಸ್ಪರ್ಧೆ
1ನೇ ತರಗತಿ
ಪ್ರಥಮ-ಮರ್ವಾನ್
ದ್ವಿತೀಯ-ಮಹೀನ್
ತೃತೀಯ-ಝೋಯಾ
2ನೇ ತರಗತಿ
ಪ್ರಥಮ-ಇಝ್ಮಾ
ದ್ವಿತೀಯ-ಅಯಾನ್
ತೃತೀಯ-ಮೆಹ್ರೀನ್

ವಿಜೇತರಿಗೆ ಬಹುಮಾನ ವಿತರಣೆ
ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು. ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದ ಎಲ್ಲ ಮಕ್ಕಳ ಪ್ರಯತ್ನ ಹಾಗೂ ಪ್ರತಿಭೆಯನ್ನು ಗಣ್ಯರು ಶ್ಲಾಘಿಸಿದರು. ಶೇಖ್ ತಬ್ರೇಝ್ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಅಬ್ದುಲ್ ಲತೀಫ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Hot this week

ಭಾರತದ 80ನೇ ಸ್ವಾತಂತ್ರೋತ್ಸವದ ಸವಿನೆನಪಿಗಾಗಿ ರಕ್ತದಾನದಿಂದ ಮಾನವೀಯತೆಯ ಸಂದೇಶ ಸಾರಿದ ಕರ್ನಾಟಕ ಸಂಘ ಶಾರ್ಜಾ

ದುಬೈ: ಭಾರತದ 80ನೇ ಸ್ವಾತಂತ್ರೋತ್ಸವದ ಸವಿನೆನಪಿಗಾಗಿ ಕರ್ನಾಟಕ ಸಂಘ ಶಾರ್ಜಾ ಮತ್ತು...

ಭಾರತದ 80ನೇ ಸ್ವಾತಂತ್ರ್ಯೋತ್ಸವದಲ್ಲಿ ಕರ್ನಾಟಕ ಸಂಘ ಖತರ್‌ನ ಅದ್ದೂರಿ ಭಾಗವಹಿಸುವಿಕೆ

ದೋಹಾ(ಖತರ್): ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಭಾರತೀಯ ರಾಯಭಾರ ಕಚೇರಿ ದೋಹಾ...

ಬಹರೈನ್; ಆಗಸ್ಟ್ 21ರಂದು ‘ಕೆಸಿಎಫ್’ನಿಂದ ಗ್ರ್ಯಾಂಡ್ ಮೀಲಾದ್ ಕಾನ್ಫರೆನ್ಸ್

ಮನಾಮ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಬಹರೈನ್ ರಾಷ್ಟ್ರೀಯ ಸಮಿತಿಯ ವತಿಯಿಂದ...

ಭಾರತೀಯ ರಾಯಭಾರ ಕಚೇರಿಯ ಡಾ.ಈಶ್ ಸಿಂಘಾಲ್​​ಗೆ ಭಾವಪೂರ್ಣ ಬೀಳ್ಕೊಡುಗೆ; ಕರ್ನಾಟಕ ಸಂಘ ಖತರ್‌ನಿಂದ ಅಭಿನಂದನೆ

ದೋಹಾ(ಖತರ್): ಖತರ್‌ನಲ್ಲಿ ತಮ್ಮ ಸೇವಾವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಭಾರತೀಯ ರಾಯಭಾರ ಕಚೇರಿಯ...

ವಂದೇ ಮಾತರಂ ಮತ್ತು ಜನಗಣಮನ ಗೀತೆಯೊಂದಿಗೆ ಅಮೇರಿಕದಲ್ಲಿ ಗೃಹಪ್ರವೇಶ

ವರದಿ: ಬೆಂಕಿ ಬಸಣ್ಣ, ನ್ಯೂಯಾರ್ಕ್ 1875ರಲ್ಲಿ ಭಾರತದಲ್ಲಿ ಮೊಳಗಿದ ‘ವಂದೇ ಮಾತರಂ’ 150...

Related Articles

Popular Categories