ಸೌದಿ ಅರೇಬಿಯಾಡಿಕೆಎಸ್ ಸಿ ಶೈಕ್ಷಣಿಕ ಕ್ರಾಂತಿ ಶ್ಲಾಘನೀಯ: ಸಿಎಂ ರಾಜಕೀಯ...

ಡಿಕೆಎಸ್ ಸಿ ಶೈಕ್ಷಣಿಕ ಕ್ರಾಂತಿ ಶ್ಲಾಘನೀಯ: ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್

ಡಿಕೆಎಸ್ ಸಿ ದಮ್ಮಾಮ್ ವಲಯದಿಂದ 'ಕುಟುಂಬ ಸಮ್ಮಿಲನ'

ದಮ್ಮಾಮ್: ಡಿಕೆಎಸ್ ಸಿ ಕಳೆದ 30 ವರ್ಷಗಳಿಂದ ಸಮುದಾಯದ ಮಕ್ಕಳಿಗೆ ಲೌಕಿಕ ಹಾಗೂ ಧಾರ್ಮಿಕ ಶಿಕ್ಷಣದಲ್ಲಿ ಮಾಡುತ್ತಿರುವ ಕ್ರಾಂತಿ ಶ್ಲಾಘನೀಯ. ಡಿಕೆಎಸ್‌ ಸಿಯ ಮುಂದಿನ ಶೈಕ್ಷಣಿಕ ಯೋಜನೆಗಳಿಗೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸಲು ಸದಾ ಸಿದ್ಧ ಎಂದು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಹಾಗೂ  ವಿಧಾನ ಪರಿಷತ್ ಸದಸ್ಯರಾದ ನಸೀರ್ ಅಹ್ಮದ್ ಹೇಳಿದ್ದಾರೆ.

ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್(ಡಿಕೆಎಸ್ ಸಿ) ಮಂಗಳೂರು, ಇದರ 30ನೇ ಸಂಸ್ಥಾಪನಾ ವರ್ಷದ ಪ್ರಯುಕ್ತ  ಡಿಕೆಎಸ್‌ ಸಿ ದಮ್ಮಾಮ್ ವಲಯದ ಅಧೀನದಲ್ಲಿ ಮರ್ಹೂಂ ಬಿ.ಎಂ.ಮುಮ್ತಾಝ್ ಅಲಿ ವೇದಿಕೆಯಲ್ಲಿ ಆಯೋಜಿಸಿದ್ದ ‘ಕುಟುಂಬ ಸಮ್ಮಿಲನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಅಂತಾರಾಷ್ಟ್ರೀಯ ಖ್ಯಾತಿಯ ವಾಗ್ಮಿ ಹಾಫಿಳ್ ಸಿರಾಜುದ್ದೀನ್ ಖಾಸಿಮಿ ದುಆಗೈದು ಮುಖ್ಯ ಭಾಷಣ ಮಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದಿ ನ್ಯಾಶನಲ್ ಕಮಿಷನ್ ಫಾರ್ ಅಲೈಡ್ ಆ್ಯಂಡ್ ಹೆಲ್ತ್ ಕೇರ್ ಕರ್ನಾಟಕದ ಅಧ್ಯಕ್ಷ ಡಾ. ಯು.ಟಿ.ಇಫ್ತಿಕಾರ್ ಅಲಿ ಮಾತನಾಡಿ, ಮೂರು ದಶಕಗಳಿಂದ ಉಡುಪಿ ಜಿಲ್ಲೆಯ ಮೂಳೂರಿನಲ್ಲಿ ಮರ್ಕಝ್ ತಅಲಿಮಿಲ್ ಇಹ್ಸಾನ್ ಎಂಬ ಸಂಸ್ಥೆಯಲ್ಲಿ ಯತೀಂ, ಮಿಸ್ಕೀನ್, ಹಿಫ್ಳ್, ಉರ್ದು ವಿಭಾಗ, ಮದ್ರಸ, ಹಾಗೂ ಇಹ್ಸಾನ್ ಕಾಲೇಜಿನಲ್ಲಿ ಪ್ಲೇ ಸ್ಕೂಲ್ ನಿಂದ ಪದವಿ ಕಾಲೇಜು ತನಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದು ಸಂತೋಷದ ವಿಷಯ. ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಸರ್ವ ಸಹಕಾರ ನೀಡಲು ಬದ್ಧ ಎಂದು ಭರವಸೆ ನೀಡಿದರು.

ಡಿಕೆಎಸ್ ಸಿ ಕೇಂದ್ರ ಸಮಿತಿಯ ಅಧ್ಯಕ್ಷ ಅಸ್ಸೈಯದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್, ಜಿಲ್ಲಾ ಸಮಿತಿಯ ಅಧ್ಯಕ್ಷ  ಸೈಯದ್ ಅಹ್ಮದ್ ಮುಖ್ತಾರ್ ತಂಙಳ್ ದುಆಗೈದರು.

ಮುಖ್ಯ ಅತಿಥಿಗಳಾಗಿ ಹಾಜಿ ಝಕರಿಯ ಜೋಕಟ್ಟೆ (ಅಲ್ ಮುಝೈನ್), ಅಶ್ರಫ್ ಕರ್ನಿರೆ (ಎಕ್ಸ್‌ ಪರ್ಟೈಸ್), ಮುಶ್ತಾಕ್ ಅಹ್ಮದ್ ಬೆಂಗಳೂರು (ಫತ್ಹೇ ಅಲ್ ಜುಬೈಲ್ ) ಶಕೀಲ್ (ಮಕಾವಿ) ಇಸ್ಮಾಯೀಲ್ ಮುಂಬೈ (ಇಸ್ಮಾಯೀಲ್ ಇಬ್ರಾಹೀಂ ಪಾರ್ಟ್ನರ್ಸ್) ನಝೀರ್ ಹುಸೈನ್ (ಅಲ್ ಫಲಾಹ್), ಮುಹಮ್ಮದ್ ಕಮ್ಮರಡಿ(ಚಾಂಪಿಯನ್), ಇಮ್ತಿಯಾಝ್ ಉಳ್ಳಾಲ( ಎಎಸ್ ಕ್ಯೂ ಗ್ರೂಪ್), ಮುಹಮ್ಮದ್ ಕುಕ್ಕುವಳ್ಳಿ (ಮಾಜಿ ಅಧ್ಯಕ್ಷ  ಡಿಕೆಎಸ್ ಸಿ ಬುರೈದಾ ಘಟಕ) ಶರೀಫ್ ಬಜ್ಪೆ(ಮಝೂನ್ ಅಲ್ ಅಲಿ) ಮತ್ತಿತರರು ಭಾಗವಹಿಸಿದ್ದರು.

ಡಿಕೆಎಸ್ ಸಿ ಕಾರ್ಯಾಧ್ಯಕ್ಷ ಸೀದಿ ಹಾಜಿ ಬಹರೈನ್, ದಮ್ಮಾಮ್ ವಲಯ ಉಸ್ತುವಾರಿ ರಫೀಕ್ ಎರ್ಮಾಳ್ ಜಿದ್ದಾ, ಫೌಂಡೇಶನ್ ಡೇ ನಿರ್ವಾಹಕ ಇಬ್ರಾಹೀಂ ಕನ್ನಂಗಾರ್, ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಅಬ್ದುಲ್ ಮಜೀದ್ ಕನ್ನಂಗಾರ್, ಡಿಕೆಎಸ್ ಸಿ ಜಿಸಿಸಿ ಸಮಿತಿಗಳಾದ ಯುಎಇ, ಒಮಾನ್, ಖತರ್, ಕುವೈತ್, ಬಹರೈನ್ ರಾಷ್ಟ್ರೀಯ ಸಮಿತಿಗಳ ಸದಸ್ಯರು ಶುಭ ಹಾರೈಸಿದರು.

ಡಿಕೆಎಸ್ ಸಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಆತೂರು, ಹಣಕಾಸು ಕಾರ್ಯದರ್ಶಿ ದಾವೂದ್ ಕಜಮಾರ್, ಮಕ್ಕಾ ವಲಯದ ಶಾಕಿರ್ ಬೊಳ್ಳಾಯಿ, ರಿಯಾದ್ ವಲಯದಿಂದ ಅಬ್ದುಲ್ ಖಾದರ್ ಕನ್ನಂಗಾರ್ ಬುರೈದಾ, ಫಝಲ್ ಸುರತ್ಕಲ್ ಬಹರೈನ್ ರಾಷ್ಟ್ರೀಯ ಸಮಿತಿ, ಕುವೈತ್ ರಾಷ್ಟ್ರೀಯ ಸಮಿತಿಯ ಅಬ್ದುಲ್ಲತೀಫ್ ಮೂಲರಪಟ್ನ, ಇಮ್ತಿಯಾಝ್ ಸೂರಿಂಜೆ, ಡಿಕೆಎಸ್ ಸಿ ವಿಷನ್ 30 ಚೆಯರ್ ಮ್ಯಾನ್ ಹಾತಿಂ ಕೂಳೂರು, ಕೇಂದ್ರ ಸಂವಹಣಾ ಕಾರ್ಯದರ್ಶಿ ಕೆ.ಎಚ್.ಮುಹಮ್ಮದ್ ರಫೀಕ್ ಸೂರಿಂಜೆ, ಹಫರ್ ಅಲ್ ಬಾತಿನ್ ಘಟಕದಿಂದ ನಝೀಂ ಮದನಿ, ಮುಹಮ್ಮದ್ ಅಮ್ಮುಂಜೆ, ಅಹ್ಮದ್ ಶಾಹ್, ಅಬ್ದುಲ್ ಹಮೀದ್ ಎಡೂರು, ಅಸ್ಲಂ ಎರ್ಮಾಳ್, ದಮ್ಮಾಮ್ ವಲಯಾಧ್ಯಕ್ಷ ಅಬ್ದುಲ್ ಹಮೀದ್ ಕಾಪು, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರೋಯಲ್, ಕೋಶಾಧಿಕಾರಿ ಅಬ್ದುಲ್ ಕರೀಂ ಪಾಣೆಮಂಗಳೂರು, ಮುಲಾಖಾತ್ ಕೋಶಾಧಿಕಾರಿ ಉಸ್ಮಾನ್ ಹೊಸಂಗಡಿ, ಅಬೂಬಕರ್ ಬರ್ವ ಹಾಗೂ ಜುಬೈಲ್, ಹಫರ್ ಅಲ್ ಬಾತಿನ್, ಅಲ್ ಹಸ್ಸ, ಯೂತ್ ವಿಂಗ್ ಜುಬೈಲ್, ದಮ್ಮಾಮ್, ಅಲ್ ಖೋಬರ್, ತುಖ್ಬಾ ಘಟಕದ ಪದಾಧಿಕಾರಿಗಳು, ಹಿತೈಷಿಗಳು, ಅನಿವಾಸಿ ಉದ್ಯಮಿಗಳು ಉಪಸ್ಥಿತರಿದ್ದರು.

ಇದೇವೇಳೆ ಮೂಳೂರು ಮರ್ಕಝ್ ಮತ್ತು ಇಹ್ಸಾನ್ ಕಾಲೇಜಿನ ಕಾರ್ಯಚಟುವಟಿಕೆಗಳ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.

ನವೆಂಬರ್ 1ರಂದು ನಡೆದ ಮಕ್ಕಳ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸರ್ಟಿಫಿಕೆಟ್ ಮತ್ತು ಬಹುಮಾನಗಳನ್ನು ಇದೇವೇಳೆ ವಿತರಿಸಲಾಯಿತು.

ಫೌಂಡೇಶನ್ ಡೇ ಪ್ರಯುಕ್ತ ನಡೆಸಿದ ಜಿಸಿಸಿ ಕ್ವಿಝ್ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು.

ಪ್ರಥಮ ಡಿಕೆಎಸ್ ಸಿ ಬಹರೈನ್ ರಾಷ್ಟ್ರೀಯ ಸಮಿತಿ, ದ್ವಿತೀಯ ರಿಯಾದ್ ವಲಯ, ತೃತೀಯ ದಮ್ಮಾಮ್ ವಲಯ ಗಳಿಸಿತು. ಅದಲ್ಲದೇ ಸ್ಟೇಟಸ್ ನಲ್ಲಿ ಸ್ಥಾಪಕ ದಿನದ ಪೋಸ್ಟರ್ ಹಾಕಿ ಹೆಚ್ಚು ಮಂದಿ ವೀಕ್ಷಿಸಿದ ಪ್ರಯುಕ್ತ ವಿಶೇಷ ಬಹುಮಾನಗಳನ್ನು ನೀಡಲಾಯಿತು. ಇದರಲ್ಲಿ ಪ್ರಥಮ ಅಬ್ದುಲ್ ಅಝೀಝ್ ಬಜ್ಪೆ, ರಿಯಾದ್, ದ್ವಿತೀಯ ಅಬೂಬಕರ್ ಕಾರಾಜೆ (ಪಾಣೆಮಂಗಳೂರು ಘಟಕ) ತೃತೀಯ ಯೂಸುಫ್ ಮಂಚಕಲ್ ಕುವೈತ್ ಅವರಿಗೆ ನೀಡಲಾಯಿತು.

ಡಿಕೆಎಸ್ ಸಿ ಫ್ಯಾಮಿಲಿ ಮುಲಾಖಾತ್  ಚೆಯರ್ ಮ್ಯಾನ್ ಅಬ್ದುಲ್ ಅಝೀಝ್ ಮೂಳೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಬ್ದುಲ್ ಹಮೀದ್ ಉಳ್ಳಾಲ ಸ್ವಾಗತಿಸಿದರು. ಮುಲಾಖಾತ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ಅಲ್ ಮುಝೈನ್ ಕಾರ್ಯಕ್ರಮ ನಿರೂಪಿಸಿದರು. ಇಸ್ಮಾಯೀಲ್ ಕಾಟಿಪಳ್ಳ ಕಿರಾಅತ್ ಪಠಿಸಿದರು.

Hot this week

ನಾಳೆ ಒಮಾನಿನಲ್ಲಿ ‘ಮಸ್ಕತ್ ಗಡಿನಾಡ ಉತ್ಸವ-2025’ ಸಾಂಸ್ಕೃತಿಕ ಕಾರ್ಯಕ್ರಮ; ಆಮಂತ್ರಣ ಪತ್ರಿಕೆ ಅನಾವರಣ

ಮಸ್ಕತ್: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು, ಒಮಾನ್ ಘಟಕ ಮಸ್ಕತ್...

ತವರು ಪ್ರೇಮ ಮೆರೆದ ಹುಬ್ಬಳ್ಳಿ ಮೂಲದ ಕನ್ನಡಿಗ; ಲಂಡನಿನಲ್ಲಿ ತನ್ನ ಹೊಸ ‘ಟೆಸ್ಲಾ’ ಕಾರಿಗೆ ಧಾರವಾಡ ರಿಜಿಸ್ಟ್ರೇಷನ್ ಸಂಖ್ಯೆ!

ಲಂಡನ್: ವಿದೇಶದಲ್ಲಿದ್ದುಕೊಂಡು ತಮ್ಮ ತವರು ನಗರದೊಂದಿಗಿನ ಭಾವನಾತ್ಮಕ ಸಂಪರ್ಕವನ್ನು ಜೀವಂತವಾಗಿಡಲು ಇಲ್ಲೊಬ್ಬ...

Veteran expat Abdulaziz Kushalnagar passes away in Riyadh

Riyadh: Abdulaziz Kushalnagar, a long-time Indian expatriate from Kushalnagar...

Related Articles

Popular Categories