ಯುಎಇಅಜ್ಮಾನ್‌: ಜನವರಿ 19ರಂದು ಬಿಸಿಎಫ್- 'ತುಂಬೆ ಮೆಡಿಸಿಟಿ ಸ್ಪೋರ್ಟ್ಸ್...

ಅಜ್ಮಾನ್‌: ಜನವರಿ 19ರಂದು ಬಿಸಿಎಫ್- ‘ತುಂಬೆ ಮೆಡಿಸಿಟಿ ಸ್ಪೋರ್ಟ್ಸ್ ಮೀಟ್- 2025’

ಅಜ್ಮಾನ್: ಬ್ಯಾರೀಸ್ ಕಲ್ಬರಲ್ ಫೋರಮ್ (ಬಿಸಿಎಫ್) ವತಿಯಿಂದ “ಬಿಸಿಎಫ್ ಸ್ಪೋರ್ಟ್ಸ್ ಮೀಟ್- 2025” ತುಂಬೆ ಮೆಡಿಸಿಟಿ ಸಹಭಾಗಿತ್ವದಲ್ಲಿ ಜನವರಿ 19 ರವಿವಾರ ಅಜ್ಮಾನಿನ ತುಂಬೆ ಮೆಡಿಸಿಟಿಯಲ್ಲಿ ನಡೆಯಲಿದೆ.

BCF ಅಧ್ಯಕ್ಷ ಡಾ. ಬಿ ಕೆ ಯೂಸುಫ್ ಮತ್ತು ತುಂಬೆ ಗ್ರೂಪ್ ಸ್ಥಾಪಕಾಧ್ಯಕ್ಷ ಡಾ. ತುಂಬೆ ಮೊಯ್ದೀನ್ ಇವರ ಮುಂದಾಳುತ್ವದಲ್ಲಿ ನಡೆಯುತ್ತಿರುವ ಈ ಸ್ಪೋರ್ಟ್ಸ್ ಮೀಟ್, ಬಿಸಿಎಫ್ ನ ಪ್ರಧಾನ ಪೋಷಕರಾಗಿದ್ದ ದಿವಂಗತ ಮುಮ್ತಾಝ್ ಅಲಿ ಯವರ ಸ್ಮರಣಾರ್ಥ ಬಿ ಎಂ ಮುಮ್ತಾಝ್ ಅಲಿ ಬಿ ಸಿ ಎಫ್ ವೇದಿಕೆಯಲ್ಲಿ ಜರುಗಲಿದೆ.

ಈ ಸಮಾರಂಭದಲ್ಲಿ ಕರ್ನಾಟಕ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, state allied and Health Care Council ನ ಚೇರ್ಮನ್ ಯು ಟಿ ಇಫಿಕಾರ್, ಕರ್ನಾಟಕ ವಿಧಾನ ಪರಿಷತ್ ಸದಸ್ಯ ಬಿ ಎಂ ಫಾರೂಖ್, ಬಿ ಸಿ ಎಫ್ ನ ನೂತನ ಪೋಷಕ ಮಾಜಿ ಶಾಸಕ ಮೊಯ್ದೀನ್ ಬಾವ, ಕರ್ನಾಟಕದ ಹಲವು ವಿಶೇಷ ಅತಿಥಿಗಳು ಮತ್ತು UAE ಯ ಹಲವಾರು ಗಣ್ಯರು, ಉಧ್ಯಮಿಗಳು, ಅನಿವಾಸಿ ಕನ್ನಡಿಗರ ವಿವಿಧ ಸಂಸ್ಕೃತಿ, ಜಾತಿ ಮತ್ತು ಪಂಗಡಗಳ ಸಾಮಾಜಿಕ ಸಂಸ್ಥೆಗಳ ಪ್ರತಿನಿಧಿಗಳು ಅತಿಥಿಗಳಾಗಿ ಭಾಗವಹಿಸುವ ನಿರೀಕ್ಷೆ ಇದೆ.

ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅನಿವಾಸಿ ಭಾರತೀಯ ಉದ್ಯಮಿ ಡಾ.ತುಂಬೆ ಮೊಯ್ದೀನ್ ರವರನ್ನು ಈ ಸಂಧರ್ಭದಲ್ಲಿ ಸನ್ಮಾನಿಸಲಾಗುವುದು.

ಬೆಳಿಗ್ಗೆ 8 ಘಂಟೆಯಿಂದ ಸಂಜೆ 8 ಘಂಟೆಯವರೆಗೆ ನಡೆಯುವ ಈ ಕ್ರೀಡಾ ಕೂಟದಲ್ಲಿ ಮಕ್ಕಳು, ಮಹಿಳೆಯರಿಗೂ ಹಲವಾರು ರೀತಿಯ ಕ್ರೀಡೆಗಳು, ದೈಹಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದೆ.

ಮುಖ್ಯವಾಗಿ ಕ್ರಿಕೆಟ್, ಕಬಡ್ಡಿ, ವಾಲಿಬಾಲ್, ಫುಟ್ ಬಾಲ್, ಟೇಬಲ್ ಟೆನಿಸ್, ಹಗ್ಗ ಜಗ್ಗಾಟ, ಮಹಿಳೆಯರಿಗಾಗಿ ಪಾಕ ಸ್ಪರ್ಧೆ, ಮೆಹಂದಿ ಡಿಸೈನಿಂಗ್ ಒಳಗೊಂಡಂತೆ ವಿವಿಧ ಇತರ ಸ್ಪರ್ಧೆಗಳು, ಇಸ್ಲಾಮಿಕ್ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ.

ಊಟೋಪಚಾರ ಮತ್ತು ಲಘು ತಿಂಡಿ ಪಾನೀಯದ ಏರ್ಪಾಡು ಮಾಡಲಾಗಿದ್ದು, UAE ಮತ್ತು ಇತರ GCC ಯ ಅನಿವಾಸಿ ಕನ್ನಡಿಗರು ಮತ್ತು ಊರಿನ ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ BCF ಸ್ಪೋರ್ಟ್ಸ್ ಸಮಿತಿಯ ಚೇರ್ಮನ್ ಜನಾಬ್ ಅಸ್ಲಾಂ ಕಾರಾಜೆ, ಉಪ ಚಯರ್ ಮ್ಯಾನ್ ಜನಾಬ್ ಅಫೀಕ್ ಹುಸೈನ್, BCF ಸಮಿತಿಯ ಸದಸ್ಯರು, BCF ಮಹಿಳಾ ವಿಂಗ್ ಸದಸ್ಯರು ಮತ್ತು ಬಿ ಸಿ ಎಫ್ ಪದಾಧಿಕಾರಿಗಳು ವಿನಂತಿಸಿದ್ದಾರೆ.

Hot this week

ಕನ್ನಡ ಸಂಘ ಬಹರೈನ್ ನ ಸಂಭ್ರಮದ 48ನೇ ವಾರ್ಷಿಕೋತ್ಸವ ಆಚರಣೆ

ಬಹರೈನ್: ಕನ್ನಡ ಸಂಘ ಬಹರೈನ್ ನ 48ನೇ ವಾರ್ಷಿಕೋತ್ಸವವನ್ನು ಕನ್ನಡ ಭವನದ...

ತುಳುನಾಡಿನ ಆಚರಣೆಗಳಲ್ಲಿ ಮೂಡನಂಬಿಕೆ ವೈಭವೀಕರಣಕ್ಕೆ ಕಳವಳ ವ್ಯಕ್ತಪಡಿಸಿದ ಡಾ.ಸಂತೋಷ್ ಗುರೂಜಿ

ದುಬೈ: ಅರಬ್ ಸಂಯುಕ್ತ ಸಂಸ್ಥಾನದ ವಾಣಿಜ್ಯ ನಗರಿ ದುಬೈಯಲ್ಲಿ ಯುಎಇ ಬಂಟ್ಸ್...

ಹಾಂಗ್ ಕಾಂಗ್‌ನಲ್ಲಿ ಕನ್ನಡ ಶಾಲೆ ಆರಂಭಿಸಲು ಕರ್ನಾಟಕ ಸರಕಾರ ನೆರವು ಅಗತ್ಯ: ‘ಕನ್ನಡ ಸಂಘ ಹಾಂಗ್ ಕಾಂಗ್’ ಅಧ್ಯಕ್ಷೆ ವಾಣಿ ರಮೇಶ್ ಬಾಬು

ವಿಶೇಷ ಸಂದರ್ಶನ: ಎಂ.ಇಕ್ಬಾಲ್ ಉಚ್ಚಿಲ, ದುಬೈ ಜಗತ್ತಿನ ಅತೀ ಹೆಚ್ಚು ಶ್ರೀಮಂತರನ್ನು ಹೊಂದಿರುವ...

ದುಬೈ; ಫೆಬ್ರವರಿ 28ರಂದು ‘ಬ್ಯಾರೀಸ್ ಕಲ್ಚರಲ್ ಫೋರಮ್( BCF)’ನಿಂದ ‘ಇಫ್ತಾರ್ ಮೀಟ್ 2026’

ದುಬೈ: ಕಳೆದ 28 ವರ್ಷಗಳಿಂದ ಸಾಮುದಾಯಿಕ ಸೇವಾ ಕಾರ್ಯದಲ್ಲಿ ತೊಡಗಿ ಕೊಂಡಿರುವ...

ಶಾರ್ಜಾ ರೋಲ್ಲಾದಲ್ಲಿ ‘ಮ್ಯಾಕ್ಸ್‌ಕೇರ್ ಕ್ಲಿನಿಕ್ಸ್’ನ ಹೊಸ ಶಾಖೆ ಆರಂಭ; ಕಡಿಮೆ ವೆಚ್ಚದ ಆರೋಗ್ಯ ಸೇವೆಗೆ ಹೆಚ್ಚಿನ ಪ್ರವೇಶ

ಶಾರ್ಜಾ: ಯುಎಇಯಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರಾಥಮಿಕ ಆರೋಗ್ಯ ಸೇವಾ ಸಂಸ್ಥೆಗಳಲ್ಲೊಂದಾದ ಮ್ಯಾಕ್ಸ್‌ಕೇರ್...

Related Articles

Popular Categories