ಬಹರೈನ್ಬಹರೈನ್ : ಎನ್‌ಆರ್‌ಐ ಮುಹಮ್ಮದ್ ಮನ್ಸೂರ್ ಅವರಿಗೆ ಪ್ರತಿಷ್ಠಿತ...

ಬಹರೈನ್ : ಎನ್‌ಆರ್‌ಐ ಮುಹಮ್ಮದ್ ಮನ್ಸೂರ್ ಅವರಿಗೆ ಪ್ರತಿಷ್ಠಿತ ʼTOB ಐಕನ್ʼ ಪ್ರಶಸ್ತಿ ಪ್ರದಾನ

ಮನಾಮ, ಬಹರೈನ್ : ಬಹರೈನ್ ಸಂಸ್ಥಾನದ ಸಂಸತ್ತಿನ ಸ್ಪೀಕರ್ ಅಹ್ಮದ್ ಬಿನ್ ಸಲ್ಮಾನ್ ಅಲ್-ಮುಸಲ್ಲಮ್ ಉಪಸ್ಥಿತಿಯಲ್ಲಿ ಸಾರಾ ಸಮೂಹದ ಸಂಸ್ಥಾಪಕ ಹಾಗೂ ಅಧ್ಯಕ್ಷ ಮುಹಮ್ಮದ್ ಮನ್ಸೂರ್ ಅವರಿಗೆ ದಿ ಟೈಮ್ಸ್ ಆಫ್ ಬಹ್ರೈನ್‌ನ ಪ್ರತಿಷ್ಠಿತ ʼTOB ಐಕನ್ʼ ಪ್ರಶಸ್ತಿ 2024 ಅನ್ನು ಪ್ರದಾನ ಮಾಡಿ ಗೌರವಿಸಲಾಯಿತು. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಮುಹಮ್ಮದ್ ಮನ್ಸೂರ್ ಅವರು ಉದ್ಯಮ ವಲಯಕ್ಕೆ ನೀಡಿರುವ ಕೊಡುಗೆಯನ್ನು ಗುರುತಿಸಿ ನೀಡಲಾಗಿದೆ.

ಅಹ್ಮದ್ ಬಿನ್ ಸಲ್ಮಾನ್ ಅಲ್-ಮುಸಲ್ಲಮ್ ಅವರು ಕ್ಷೇತ್ರಗಳಿಗೆ ಗಣನೀಯ ಕೊಡುಗೆ ನೀಡಿರುವ ಪ್ರಶಸ್ತಿ ವಿಜೇತರನ್ನು ಈ ಸಂದರ್ಭದಲ್ಲಿ ಅಭಿನಂದಿಸಿದರು. ಬಹ್ರೈನ್ ಆರ್ಥಿಕತೆ ಹಾಗೂ ಸಮಾಜದ ಪ್ರಗತಿಯಲ್ಲಿ ಅವರು ನಿರ್ವಹಿಸಿರುವ ಗಮನಾರ್ಹ ಪಾತ್ರವನ್ನು ಅವರು ಶ್ಲಾಘಿಸಿದರು.

ಖ್ಯಾತ ಉದ್ಯಮಿ ಹಾಗೂ ಕ್ರೀಡಾ ಪೋಷಕರಾದ ಮುಹಮ್ಮದ್ ಮನ್ಸೂರ್ ಅವರು ತಮ್ಮ ವ್ಯಾವಹಾರಿಕ ಕೌಶಲದಿಂದ ಸಾರಾ ಸಮೂಹವನ್ನು ಹೊಸ ಎತ್ತರಕ್ಕೆ ಏರಿಸಿದ್ದಾರೆ. ಮಹಮ್ಮದ್ ಮನ್ಸೂರ್ ಅವರು ಬಹ್ರೈನ್ ಕ್ರಿಕೆಟ್ ಫೌಂಡೇಶನ್ ಹಾಗೂ ಲೈಫ್ ಎನ್ ಸ್ಟೈಲ್ ನಿಯತಕಾಲಿಕದ ಅಧ್ಯಕ್ಷರಾಗಿದ್ದಾರೆ. ವಿಶ್ವಸಂಸ್ಥೆಯ ಅಧೀನದಲ್ಲಿರುವ ದಿ ಕೌನ್ಸಿಲ್ ಇನ್ ದಿ ವರ್ಲ್ಡ್ ಯೂತ್ ಗ್ರೂಪ್‌ನ ನಿರ್ದೇಶಕರೂ ಆಗಿದ್ದಾರೆ.

ಮುಹಮ್ಮದ್ ಮನ್ಸೂರ್ ಅವರು ಕೆಎಚ್‌ಕೆ ಹೀರೋಸ್ ಫೌಂಡೇಶನ್‌ನ ಉಪಾಧ್ಯಕ್ಷ ಹಾಗೂ ಬಹ್ರೈನ್ ಇಂಡಿಯಾ ಸೊಸೈಟಿಯ ಆಡಳಿತ ಮಂಡಳಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಅವರ ಬಹುಮುಖ ಕೆಲಸವು ಪ್ರಗತಿ, ಅಭಿವೃದ್ಧಿ ಹಾಗೂ ಅಂತರ್ ಸಾಂಸ್ಕೃತಿಕ ಸಂಬಂಧಗಳ ಬಗ್ಗೆ ಅವರಿಗಿರುವ ಬದ್ಧತೆಯನ್ನು ಪ್ರತಿಫಲಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Hot this week

ಬಹರೈನ್: ಯಕ್ಷಗುರು ದೀಪಕ್ ರಾವ್ ಪೇಜಾವರರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಬಹರೈನ್: ಕಳೆದ ಒಂದು ದಶಕದಿಂದ ಬಹರೈನ್ ದ್ವೀಪರಾಷ್ಟ್ರದಲ್ಲಿ ನೆಲೆಸಿರುವ ಖ್ಯಾತ ಯಕ್ಷಗಾನ...

ನ್ಯೂಯಾರ್ಕ್ ಮೇಯರ್ ಆಗಿ ಭಾರತೀಯ ಮೂಲದ ಝೊಹ್ರಾನ್ ಮಮ್ದಾನಿ ಆಯ್ಕೆ ಸಂಭವ; ಗೆದ್ದರೆ, ಹಲವು ಇತಿಹಾಸ ಸೃಷ್ಟಿ!

ಜೂನ್ 24 ರಂದು ನಡೆದ ನ್ಯೂಯಾರ್ಕ್ ಮೇಯರ್ ಹುದ್ದೆಗೆ ಪಕ್ಷಗಳ ಅಭ್ಯರ್ಥಿಯ...

ಗಲ್ಫ್‌ನಲ್ಲಿ ಮತ್ತೆ ಕವಿದ ಯುದ್ಧದ ಕಾರ್ಮೋಡ; ವಲಸಿಗರನ್ನು ಕಾಡುತ್ತಿವೆ 1991ರ ಕೊಲ್ಲಿ ಯುದ್ಧದ ಕಹಿ ನೆನಪುಗಳು…!

ಇರಾನ್-ಇಸ್ರೇಲ್ ದಾಳಿಯಲ್ಲಿ ಅಮೇರಿಕ ನೇರವಾಗಿ ಭಾಗವಹಿಸುತ್ತಿರುವುದರಿಂದ , ಅಮೇರಿಕದ ಮಿತ್ರ ರಾಷ್ಟ್ರಗಳಾದ...

ಜೂನ್ 29ರಂದು ಯುಎಇ ಯಕ್ಷಗಾನ ಅಭ್ಯಾಸ ಕೇಂದ್ರದ ದಶಮಾನೋತ್ಸವ: 7 ಮಂದಿ ಸಾಧಕರಿಗೆ-ಮೂರು ಸಾಧಕ ಸಂಸ್ಥೆಗಳಿಗೆ ಸನ್ಮಾನ

ದುಬೈ:ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಇದರ ದಶಮಾನೋತ್ಸವ ಕಾರ್ಯಕ್ರಮವು ಜೂನ್ 29ರಂದು...

Related Articles

Popular Categories