ಯುಎಸ್‌ಎಎವರೆಸ್ಟ್ ಬೇಸ್ ಕ್ಯಾಂಪ್ ಆರೋಹಣ ಮಾಡಿದ ಅಮೇರಿಕದಲ್ಲಿರುವ ಭಾರತೀಯ...

ಎವರೆಸ್ಟ್ ಬೇಸ್ ಕ್ಯಾಂಪ್ ಆರೋಹಣ ಮಾಡಿದ ಅಮೇರಿಕದಲ್ಲಿರುವ ಭಾರತೀಯ ಮೂಲದ ವೀರ ಮಹಿಳೆಯರು!

ಬಹಳಷ್ಟು ಜನ ಮಹಿಳೆಯರು ಮನೆಗೆಲಸ, ಗಂಡ ಮತ್ತು ಮಕ್ಕಳನ್ನು ನೋಡಿಕೊಳ್ಳುವ ಕೆಲಸದಲ್ಲಿ ತೃಪ್ತಿ ಕಾಣುತ್ತಾರೆ. ಮತ್ತೆ ಕೆಲವು ಮಹಿಳೆಯರು ಈ ಕೆಲಸಗಳ ಜೊತೆಗೆ ಆಫೀಸಲ್ಲಿ ಫುಲ್ ಟೈಮ್ ಜಾಬ್ ಮಾಡುತ್ತಾರೆ. ಆದರೆ ಕೆಲವೇ ಕೆಲವು ಮಹಿಳೆಯರು ಇನ್ನೂ ಮುಂದೆ ಹೋಗಿ ಜೀವನದಲ್ಲಿ ಮಹಾನ್ ಸಾಧನೆ ಮಾಡುತ್ತಾರೆ.

ಅಂತಹ ವಿರಳ ಮಹಿಳೆಯರಲ್ಲಿ ಇತ್ತೀಚಿಗೆ ಅಮೇರಿಕದಲ್ಲಿರುವ ಆರು ಜನ ಭಾರತಿಯ ವೀರ ನಾರಿಯರು “ಎವರೆಸ್ಟ್ ಬೇಸ್ ಕ್ಯಾಂಪ್ ” ಆರೋಹಣ ಮಾಡಿ ಬಂದಿದ್ದಾರೆ. ವಾಪಾಸ್ ಬರುವಾಗ ಅತ್ಯಂತ ಕಷ್ಟಕರ ಹಿಮಾಲಯದ ಪರ್ವತ ಮಾರ್ಗಗಳಲ್ಲಿ ಟ್ರೆಕ್ ಮಾಡಿದ್ದಾರೆ.

ಈ ತಂಡದಲ್ಲಿ ಆಲ್ಬನಿ, ನ್ಯೂಯಾರ್ಕ್‌ನಿಂದ ಡಾ.ಶೈಲಜ ಶೆಟ್ಟಿ, ಉಮಾ ಬೆಂಕಿ, ರಾಣಿ ಮುಪ್ಪಿಡಿ ಮತ್ತು ಸುಗುಣ ಶ್ರೀನಿವಾಸನ್, ಡಲ್ಲಾಸ್, ಟೆಕ್ಸಾಸ್‌ನಿಂದ ಸರಸ್ವತಿ ಕಾಕಿಲೇಟಿ ಹಾಗೂ ಮಿಚಿಗನ್‌ನಿಂದ ಶ್ರೀದೇವಿ ಮನೇಪಳ್ಳಿ ಜೊತೆ ಇದ್ದರು.

ಈ ಆರು ಜನ ತಾಯಂದಿರು. ಒಂದು ವರ್ಷಕ್ಕೂ ಹೆಚ್ಚು ಕಾಲ ಅಮೇರಿಕದಲ್ಲಿರುವ ಬೇರೆ ಬೇರೆ ಪರ್ವತಗಳನ್ನು ಏರಿ ತಯಾರಿ ನಡೆಸಿದ್ದರು. ಅವುಗಳಲ್ಲಿ ಕೋಲೊರಾಡೋ ರಾಜ್ಯದ ಅತ್ಯಂತ ಎತ್ತರದ ಪರ್ವತಗಳ ಆರೋಹಣ ಇವರಿಗೆ ತುಂಬಾ ಸಹಾಯ ಮಾಡಿತು.

ಅಮೇರಿಕದಿಂದ ನೇಪಾಳಕ್ಕೆ ಬಂದು ಇಳಿದ ಇವರು, ಟ್ರೆಕ್ ಆರಂಭಕ್ಕೂ ಮೊದಲು ಕಠ್ಮಂಡುವಿನ ಸ್ವಯಂಭುನಾಥ ಮತ್ತು ಪಶುಪತಿನಾಥ ದೇವಾಲಯಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದರು.

ನಂತರ ಲುಕ್ಲಾಕ್ಕೆ ಪುಟ್ಟ ವಿಮಾನದಲ್ಲಿ ಹೋಗಿ, ಅಲ್ಲಿಂದ ಟ್ರೆಕ್ಕಿಂಗ್ ಶುರು ಮಾಡಿದರು. ನಾಮ್ಚೆ ಬಜಾರ್, ತೆಂಗ್ಬೊಚೆ ಮತ್ತು ಡಿಂಗ್ಬೊಚೆ ಮೂಲಕ ಅವರು ಕೊನೆಗೆ ಎವರೆಸ್ಟ್ ಬೇಸ್ ಕ್ಯಾಂಪ್ ತಲುಪಿದರು. ಆಗ ಅವರಿಗೆ ಆದ ಆನಂದ ವರ್ಣನಾತೀತ. ಅಲ್ಲಿ ಸಂತೋಷದಿಂದ ಕುಣಿದು ಕುಪ್ಪಳಿಸಿದರು.

ಈ ಪ್ರಯಾಣದಲ್ಲಿ ಶೇರ್ಪಾಗಳ ಸಹಾಯ ಬಹಳ ಮುಖ್ಯವಾಗಿತ್ತು. ಅವರು ಆಹಾರ, ಸಾಮಾನು ಮತ್ತು ಆಮ್ಲಜನಕವನ್ನು ಪರ್ವತ ಮಾರ್ಗಗಳಲ್ಲಿ ಸಾಗಿಸಿದರು. ಯಾಕ್‌ಗಳು ಮತ್ತು ಕತ್ತೆಗಳು ಕೂಡ ತಂಡಕ್ಕೆ ಸಹಾಯ ಮಾಡಿವೆ.

ಎತ್ತರದ ಪರ್ವತಗಳಲ್ಲಿ ಆರೋಗ್ಯ ಸಮಸ್ಯೆಗಳು ಸಹಜ. ಪ್ರತಿದಿನ ಆಮ್ಲಜನಕ ಮಟ್ಟ ಪರೀಕ್ಷಿಸಲಾಯಿತು. ಸರಸ್ವತಿ ಕಾಕಿಲೇಟಿಯ ಆಮ್ಲಜನಕ ಮಟ್ಟ ಕಡಿಮೆಯಾದಾಗ ತಂಡ ಎಚ್ಚರಿಕೆಯಿಂದ ಕ್ರಮ ಕೈಗೊಂಡಿತು. ಪ್ರಾಣಾಯಾಮ ಮತ್ತು ತಂಡದ ಬೆಂಬಲದಿಂದ ಅವರು ಚೇತರಿಸಿಕೊಂಡರು.

ಎವರೆಸ್ಟ್ ಬೇಸ್ ಕ್ಯಾಂಪ್ ತಲುಪಿದ ಬಳಿಕ ಡಾ.ಶೈಲಜ ಶೆಟ್ಟಿ ಮತ್ತು ಉಮಾ ಬೆಂಕಿ ಇನ್ನೂ ಕಠಿಣ ಹಂತವಾದ ಚೋಲಾ ಪಾಸ್ ಕಡೆಗೆ ಹೋಗಲು ಮುಂದಾದರು. ಆದರೆ ಮಾರ್ಗ ಮಧ್ಯದಲ್ಲಿ ಉಮಾ ಬೆಂಕಿ ಆಸ್ವಸ್ಥರಾದರು. ಅವರನ್ನು ಹೆಲಿಕ್ಯಾಪ್ಟರ್ ಮೂಲಕ ಏರ್ ಲಿಫ್ಟ್ ಮಾಡಲು ನಿರ್ಧರಿಸಿದರು. ಆದರೆ ಇದನ್ನು ನಿರಾಕರಿಸಿ ಅನಾರೋಗ್ಯದ ಮಧ್ಯದಲ್ಲಿಯೇ ಉಮಾ ಬೆಂಕಿ ತುಂಬಾ ಕಷ್ಟಪಟ್ಟು ಕಾಲ್ನಡಿಗೆಯಲ್ಲಿಯೇ ವಾಪಾಸು ಬಂದರು.

ಹೀಗಾಗಿ ಡಾ.ಶೈಲಜ ಶೆಟ್ಟಿ ಒಬ್ಬರೇ ಚೋಲಾಪಾಸ್ ದಾಟಿ ಅತ್ಯಂತ ಸುಂದರವಾದ ಗೋಖ್ಯೋ ಸರೋವರ ಮತ್ತು ನಂತರ ರೆಂಜೋ ಲಾ ಪಾಸ್ ತಲುಪಿದರು. ಈ ಟ್ರೆಕ್‌ಗೆ ಅರವಿಂದ್ ತಮಾಂಗ್ ಮತ್ತು ನಿಮಾ ತಮಾಂಗ್ ಮಾರ್ಗದರ್ಶನ ನೀಡಿದರು. ಪೆಂಬಾ ಮತ್ತು ಅರ್ಜುನ್ ಸೇರಿದಂತೆ ಪೋರ್ಟರ್‌ಗಳು ಸಹಾಯ ಮಾಡಿದರು.

ಜೀವನದಲ್ಲಿ ಶಿಸ್ತು ಮತ್ತು ಧೈರ್ಯ ಇದ್ದರೆ, ಜೊತೆಗೆ ಗಂಡ ಮತ್ತು ಮನೆಯವರ ಸಪೋರ್ಟ್ ಇದ್ದರೆ ಯಾವುದೇ ಕನಸನ್ನೂ ಸಾಧಿಸಬಹುದು ಎಂಬುದಕ್ಕೆ ಈ ಮಹಿಳೆಯರ ಕಥೆ ಈ ಸಂದೇಶ ನೀಡುತ್ತದೆ.

ಲೇಖನ: ಬೆಂಕಿ ಬಸಣ್ಣ, ನ್ಯೂಯಾರ್ಕ್

Hot this week

ಫ್ಲೋರಿಡಾ; ತ್ಯಾಗರಾಜ–ಪುರಂದರ ದಾಸರ ಆರಾಧನಾ ಉತ್ಸವ ಭಕ್ತಿಭಾವದಿಂದ ಆಚರಣೆ

ಫ್ಲೋರಿಡಾ: ಇತ್ತೀಚೆಗೆ ತ್ಯಾಗರಾಜ ಹಾಗೂ ಪುರಂದರ ದಾಸರ ಆರಾಧನಾ ಉತ್ಸವವನ್ನು ಸಾಂಸ್ಕೃತಿಕ...

ದುಬೈ; ಜನವರಿ 25ರಂದು ‘ಗುರು ಕಿರಣ್ ನೈಟ್’ ಅದ್ಧೂರಿ ಸಂಗೀತ ಕಾರ್ಯಕ್ರಮ

ದುಬೈ: ಇಲ್ಲಿನ ಅಲ್ ಖಿಸೆಸ್ಸ್ ಅಮಿಟಿ ಸ್ಕೂಲಿನ ಫುಟ್ಬಾಲ್ ಮೈದಾನದಲ್ಲಿ ಜನವರಿ...

ಉಗಾಂಡದಲ್ಲಿ ಕನ್ನಡ ಭವನವನ್ನು ನಿರ್ಮಿಸಲು ರಾಜ್ಯ ಸರಕಾರದ ಸಹಕಾರ ಅಗತ್ಯ: ಕರ್ನಾಟಕ ಸಂಘ ಅಧ್ಯಕ್ಷ ದೀಪಕ್ ಜಗದೀಶ್

ವಿಶೇಷ ಸಂದರ್ಶನ: ಎಂ.ಇಕ್ಬಾಲ್ ಉಚ್ಚಿಲ, ದುಬೈ ಕನ್ನಡಿಗರು ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಕನ್ನಡ...

ಜನವರಿ 25ರಂದು ಶಾರ್ಜಾದಲ್ಲಿ ‘ಕೆಸಿಎಫ್’ನಿಂದ ‘ಮಹಬ್ಬಾ ಫ್ಯಾಮಿಲಿ ಫೆಸ್ಟ್-2026’

ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಯುಎಇಯ ಆಶ್ರಯದಲ್ಲಿ 'ಮಹಬ್ಬಾ ಫ್ಯಾಮಿಲಿ ಫೆಸ್ಟ್...

Related Articles

Popular Categories