ದುಬೈ: SKSSF ವಿಖಾಯ ಕರ್ನಾಟಕ UAE ಸಮಿತಿ ವತಿಯಿಂದ ಮರ್ಹೂಂ ಅಬ್ದುಲ್ ರಹ್ಮಾನ್ ಕೊಳ್ತಮಜಲ್ ಹಾಗು ಶತಮಾನದತ್ತ ಸಮಸ್ತ ಪ್ರಚಾರದ ಭಾಗವಾಗಿ ಬೃಹತ್ ರಕ್ತದಾನ ಶಿಬಿರ ನಡೆಯಿತು.


ಶಿಬಿರದಲ್ಲಿ ಯುಎಇಯ ವಿವಿಧ ಎಮಿರೇಟ್ಸ್ ಗಳಿಂದ ಸುಮಾರು ಇನ್ನೂರರಷ್ಟು ರಕ್ತ ದಾನಿಗಳು ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದರು.
ಶಿಬಿರವನ್ನು ಉದ್ಘಾಟಿಸಿದ SKSSF ಯು.ಎ.ಇ ಸಮಿತಿ ಅಧ್ಯಕ್ಷರಾದ ಸಯ್ಯಿದ್ ಅಸ್ಕರ್ ಅಲಿ ತಂಙಳ್ ಅವರು ಮಾತನಾಡಿ, ರಕ್ತದಾನವು ಬಹು ಪುಣ್ಯ ದಾಯಕ ಕಾರ್ಯವಾಗಿದ್ದು, ಅದೆಷ್ಟೋ ಜೀವಗಳನ್ನು ರಕ್ಷಿಸುವಲ್ಲಿ ಸಹಕಾರಿಯಾಗಲಿದೆ. ಅಲ್ಲದೆ ಓರ್ವ ರಕ್ತದಾನಿ ರಕ್ತದಾನದಿಂದ ಆತ ಸ್ವಯಂ ಆರೋಗ್ಯವಂತನಾಗುತ್ತಾನೆ ಎನ್ನುತ್ತಾ ವಿಖಾಯ ಕಳೆದ ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಸಾಮಾಜಿಕ ಕಾರ್ಯಗಳನ್ನು ಪ್ರಶಂಸಿಸಿ ಶುಭ ಹಾರೈಸಿದರು.



ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅನಿವಾಸಿ ಉದ್ಯಮಿ, ಕೆಐಸಿಜಿಸಿಸಿ ಅಧ್ಯಕ್ಷರಾದ ಹಾಜಿ ಅಶ್ರಫ್ ಷಾ ಮಾಂತೂರ್ ರವರು ಶುಭ ಹಾರೈಸಿ ಮಾತನಾಡುತ್ತಾ, ರಕ್ತದಾನದಿಂದ ಓರ್ವ ವ್ಯಕ್ತಿಯ ಹಲವಾರು ರೋಗಗಳಿಂದ ಮುಕ್ತನಾಗುತ್ತಾನೆ. ಅಲ್ಲದೆ ಓರ್ವ ವ್ಯಕ್ತಿಯ ಜೀವರಕ್ಷಕನಾಗುತ್ತಾನೆ. ಇಂತಹ ಅಭೂತ ಪೂರ್ವ ಕಾರ್ಯಕ್ರಮವನ್ನು ಆಯೋಜಿಸಿದ ಎಸ್ ಕೆ ಎಸ್ ಎಸ್ ಎಫ್ ವಿಖಾಯ ತಂಡವು ಅಭಿನಂಧನಾರ್ಹವಾಗಿದ್ದು, ಕೊರೋನಾ ಸಂದರ್ಭದಲ್ಲಿ ತಾವು ಈ ಸಮಾಜಕ್ಕೆ ನೀಡಿದ ಕೊಡುಗೆ ಪ್ರಶಂಸನೀಯವಾಗಿದ್ದು, ಅಂದು ಕೂಡ ತಾವು ಜೀವರಕ್ಷರಾಗಿ ಕಾರ್ಯನಿರ್ವಹಿಸಿದ್ದು ಮುಂದೆಯೂ ಸಮಾಜಮುಖಿ ಕಾರ್ಯಗಳೊಂದಿಗೆ ಮುನ್ನಡೆಯುವಂತೆ ಶುಭ ಹಾರೈಸಿದರು.

ಬ್ಯಾರೀಸ್ ಚೇಂಬರ್ ಯುಎಇ ಅಧ್ಯಕ್ಷ ಹಿದಾಯತ್ ಅಡ್ಡೂರ್ ಅವರು ಶುಭ ಹಾರೈಸಿ ಮಾತನಾಡುತ್ತಾ, ಅನಿವಾಸಿಗೆಳೆಡೆಯಲ್ಲಿ ತಾವು ನೀಡುತ್ತಿರುವ ಸೇವೆಯು ಅವರ್ಣನೀಯವಾಗಿದ್ದು ಇಂತಹ ಶಿಬಿರಗಳನ್ನು ಆಯೋಜಿಸುವ ಮೂಲಕ ಮಾದರಿಯಾಗಿ ಗುರುತಿಸಿ ಕೊಂಡಿದ್ದೀರಿ, ರಕ್ತದಾನದಿಂದ ಓರ್ವ ವ್ಯಕ್ತಿಯ ದೇಹ ಮನಸ್ಸು ಆರೋಗ್ಯಯುತವಾಗಿರಲು ಸಾಧ್ಯವಾಗುತ್ತದೆ ಮತ್ತು ಇನ್ನೊಂದು ಜೀವವನ್ನು ರಕ್ಷಿಸಲು ಸಹಕಾರಿಯಾಗುತ್ತದೆ ಎನ್ನುತ್ತಾ ವಿಖಾಯ ಸಮಿತಿಯ ಕಾರ್ಯಕ್ರಮಗಳನ್ನು ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ ಹಾಜಿ ಶಂಸುದ್ದೀನ್ ಸೂರಲ್ಪಡಿ (ಅಧ್ಯಕ್ಷರು, SKSSF ಶಾರ್ಜಾ), ಶರೀಫ್ ಕೊಡಿನೀರ್ (ಕಾರ್ಯದರ್ಶಿ, SKSSF ಶಾರ್ಜಾ), ರಫೀಕ್ ಸುರತ್ಕಲ್ (ಉಪಾಧ್ಯಕ್ಷರು, SKSSF ಶಾರ್ಜಾ), ಸಾಜಿದ್ ಬಜ್ಪೆ (ಉಪಾಧ್ಯಕ್ಷರು, SKSSF ಶಾರ್ಜಾ), ಅಲಿ ಹಸನ್ ಫೈಝಿ(ಅಧ್ಯಕ್ಷರು SKSSF ದುಬೈ) , ಇಬ್ರಾಹೀಂ ಆತೂರು (ಉಪಾಧ್ಯಕ್ಷರು SKSSF ದುಬೈ), ಬದ್ರುಲ್ ಮುನೀರ್ ಫೈಝಿ (ಉಪಾಧ್ಯಕ್ಷರು SKSSF ದುಬೈ), ಅನ್ವರ್ ಮನಿಲಾ (ಅಧ್ಯಕ್ಷರು, SKSSF ವಿಖಾಯಾ ಯು.ಎ.ಇ), ನಿಝಾಮ್ ತೋಡಾರ್ (ಕನ್ವೀನರ್, SKSSF ವಿಖಾಯಾ ಯು.ಎ.ಇ), ಹಾಜಿ ಮೊಹಿಯುದ್ದೀನ್ ಕುಟ್ಟಿ ದಿಬ್ಬಾ (ಅಧ್ಯಕ್ಷರು, KIC ಯು.ಎ.ಇ), ಶಾಫಿ ಹಾಜಿ ಪೆರುವಾಯಿ (ಕೋಶಾಧಿಕಾರಿ, SKSSF ಅಬುಧಾಬಿ), ಶರೀಫ್ ಕಾವು (ಅಧ್ಯಕ್ಷರು, ನೂರುಲ್ ಹುದಾ ಯು.ಎ.ಇ), ನಾಸೀರ್ ನಂದಾವರ (ಉದ್ಯಮಿ ದುಬೈ), ಶಕೂರ್ ಮನಿಲಾ (ಉದ್ಯಮಿ ದುಬೈ), ಸಮದ್ ಬಿರಾಳಿ, ಮೂಸಾ ಪೆರುವಾಯಿ (ಉದ್ಯಮಿ ದುಬೈ), ಹಮೀದ್ ಮುಸ್ಲಿಯಾರ್ ನೀರ್ಕಜೆ, ಉಸ್ತಾದ್ ಕರೀಂ ದಾರಿಮಿ ಹಾಗೂ ಉಸ್ತಾದ್ ಸಿರಾಜುದ್ದೀನ್ ಫೈಝಿ, ಬದ್ರುಲ್ ಮುನೀರ್ ಫೈಝಿ (ಉಪಾಧ್ಯಕ್ಷರು ಎಸ್ ಕೆ ಎಸ್ ಎಸ್ ಎಫ್ ದುಬೈ), ಅಸೀಫ್ ಮರೀಲ್ (ಅಧ್ಯಕ್ಷರು ಕೆ ಐ ಸಿ ಅಲ್ ಕೌಸರ್ ಯೂತ್ ವಿಂಗ್ ), ಆರೀಫ್ ಕೂರ್ನಡ್ಕ (ಅಧ್ಯಕ್ಷರು ದಾರುಲ್ ಹಸನಿಯಾ ಸಾಲ್ಮರ ), ಯಾಹ್ಯಾ ಕೊಡ್ಲಿಪೇಟೆ (ಕಾರ್ಯದರ್ಶಿ ಎಸ್ ಕೆ ಎಸ್ ಎಸ್ ಎಫ್ ಯು ಎ ಇ), ಬದ್ರುದ್ದೀನ್ ಹೆಂತಾರ್ (ಕಾರ್ಯದರ್ಶಿ ದಾರುನ್ನೂರ್ ಕಾಶಿಪಟ್ನ), ಅಶ್ರಫ್ ಅರ್ತಿಕೆರೆ (ಅಧ್ಯಕ್ಷರು ಕೆ ಐ ಸಿ ದುಬೈ ) ಸಹಿತ ಹಲವು ಗಣ್ಯರು ಭಾಗವಹಿಸಿ ರಕ್ತದಾನ ಶಿಬಿರವನ್ನು ಆಯೋಜಿಸಿದ ವಿಖಾಯ ತಂಡವನ್ನು ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ ಅನಿವಾಸಿ ಸಮಸ್ತದ ನೇತಾರರು, ವಿವಿಧ ಸಂಘಸಂಸ್ಥೆಗಳ ಪ್ರಮುಖರು ಅತಿಥಿಗಳಾಗಿ ಭಾಗವಹಿಸಿ ರಕ್ತದಾನ ಮಾಡಿ ಮಾದರಿಯಾದರು.
ಕಾರ್ಯಕ್ರಮದಲ್ಲಿ ಶಾಹುಲ್ ಹಮೀದ್ ಬಿ ಸಿ ರೋಡ್ ಪ್ರಾರ್ಥಿಸಿದರು. ಜಾಬೀರ್ ಬೆಟ್ಟಂಪಾಡಿ ಸ್ವಾಗತಿಸಿ, ಅನ್ವರ್ ಮನಿಲಾ ವಂದಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ಅಬ್ದುಲ್ ಅಝೀಝ್ ಸೋಂಪಾಡಿ ನಿರ್ವಹಿಸಿದರು.


