ಕನ್ನಡಿಗರ ಅಚ್ಚುಮೆಚ್ಚಿನ ಮಾಧ್ಯಮ ಸಂಸ್ಥೆ ವಾರ್ತಾಭಾರತಿ ಈಗ ಇನ್ನೊಂದು ವಿನೂತನ ಸಾಹಸಕ್ಕೆ ಅಣಿಯಾಗಿದೆ. ಜಾಗತಿಕ ಕನ್ನಡಿಗರಿಗಾಗಿಯೇ ಒಂದು ವಿಶೇಷ ವೆಬ್ ಸೈಟ್ globalkannadiga.com ಎಂಬ ಹೆಸರಲ್ಲಿ ಪ್ರಾರಂಭಿಸುತ್ತಿದೆ. ಇದು ಅತ್ಯಂತ ಶ್ಲಾಘನೀಯ ಕೆಲಸವಾಗಿದೆ. ವಾರ್ತಾಭಾರತಿ ಪ್ರಾರಂಭದಿಂದಲೂ ಅನಿವಾಸಿ ಕನ್ನಡಿಗರಿಗೆ ವಿಶೇಷ ಆದ್ಯತೆ ನೀಡುತ್ತಾ ಬಂದಿರುವ ಪತ್ರಿಕೆ. ಅನಿವಾಸಿಗಳ ಸಮಸ್ಯೆಗಳಿಗೆ ಧ್ವನಿಯಾಗುತ್ತಾ ಬಂದಿದೆ. ಈಗ ಡಿಜಿಟಲ್ ಹಾಗು ವಿಶುವಲ್ ಮೀಡಿಯಾಗಳಲ್ಲೂ ಛಾಪು ಮೂಡಿಸಿರುವ ವಾರ್ತಾಭಾರತಿ ಅನಿವಾಸಿ ಕನ್ನಡಿಗರ ಬಗ್ಗೆ ವಿಶೇಷ ಪ್ರೀತಿ ಹಾಗು ಕಾಳಜಿಯಿಂದ ರೂಪಿಸಿರುವ ಹೊಸ ವೆಬ್ ತಾಣ globalkannadiga.com ಭರ್ಜರಿ ಯಶಸ್ಸು ಕಾಣಲಿ. ಇದು ಜಗತ್ತಿನ ಎಲ್ಲ ದೇಶಗಳ ಕನ್ನಡಿಗರು ಒಟ್ಟು ಸೇರುವ ವೇದಿಕೆಯಾಗಲಿ. ಅನಿವಾಸಿಗಳ ಸಮಸ್ಯೆ, ಸವಾಲು, ಸುಖದುಃಖಕ್ಕೆ ಸ್ಪಂದಿಸುವ ತಾಣವಾಗಲಿ, ಕರ್ನಾಟಕ ಸರಕಾರ ಹಾಗು ಅನಿವಾಸಿ ಕನ್ನಡಿಗರ ನಡುವಿನ ಸೇತುವೆಯಾಗಲಿ ಎಂದು ಹಾರೈಸುತ್ತೇನೆ.
ಹಿದಾಯತ್ ಅಡ್ಡೂರು
ಸಂಚಾಲಕರು, ಇಂಟರ್ ನ್ಯಾಷನಲ್ ಕನ್ನಡಿಗಾಸ್ ಫೆಡೆರೇಶನ್
32 ದೇಶಗಳ 128 ಕನ್ನಡ ಸಂಘಟನೆಗಳ ಒಕ್ಕೂಟ