ವಾರ್ತಾ ಭಾರತಿ ಮಾಧ್ಯಮ ಸಂಸ್ಥೆ ಅನಿವಾಸಿ ಕನ್ನಡಿಗರಿಗಾಗಿ ವಿಶೇಷ ವೆಬ್ ಸೈಟ್ globalkannadiga.com ಪ್ರಾರಂಭಿಸುತ್ತಿರುವುದು ಅಪಾರ ಸಂತೋಷ ತಂದಿದೆ. ಅನಿವಾಸಿ ಕನ್ನಡಿಗರ ಹಿತಚಿಂತನೆಯಲ್ಲಿ ವಾರ್ತಾ ಭಾರತಿ ಕೈಗೊಂಡಿರುವ ಈ ಕ್ರಮ ಶ್ಲಾಘನೀಯವಾಗಿದೆ.
ವಾರ್ತಾ ಭಾರತಿ ಸದಾ ಜನಪರವಾಗಿ ಯೋಚಿಸುವ, ಕಾರ್ಯ ನಿರ್ವಹಿಸುತ್ತಾ ಬಂದಿರುವ ಪತ್ರಿಕೆ. ಸತ್ಯವನ್ನು ಎಲ್ಲೆಡೆಗೆ ತಲುಪಿಸುವ, ಜನರ ಧ್ವನಿಯಾಗಿ ಎರಡು ದಶಕಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಹೆಗ್ಗಳಿಕೆ ವಾರ್ತಾಭಾರತಿ ಮಾಧ್ಯಮ ಸಮೂಹಕ್ಕಿದೆ.
ಅನಿವಾಸಿ ಕನ್ನಡಿಗರ ಪ್ರಾಮುಖ್ಯತೆಯನ್ನು ವಾರ್ತಾ ಭಾರತಿ ತನ್ನ ಪತ್ರಿಕೆ ಮತ್ತು ಡಿಜಿಟಲ್ ಮಾಧ್ಯಮಗಳ ಮೂಲಕ ಸದಾ ಪರಿಗಣಿಸುತ್ತಾ ಬಂದಿದೆ.
ವಿದೇಶಗಳಲ್ಲೂ ಬಹಳ ದೊಡ್ಡ ಸಂಖ್ಯೆಯ ಕನ್ನಡಿಗರು ವಾರ್ತಾ ಭಾರತಿಯ ನಿಷ್ಠಾವಂತ ಓದುಗರು, ವೀಕ್ಷಕರೂ ಆಗಿದ್ದಾರೆ. ಅವರಿಗಾಗಿಯೇ ಮೀಸಲಾಗಿರುವ ಈ ಹೊಸ ವೆಬ್ ಸೈಟ್ ಅನಿವಾಸಿ ಕನ್ನಡಿಗರ ಜೊತೆಗೆ ಕರ್ನಾಟಕದ ಬಂಧವನ್ನು ಮತ್ತಷ್ಟು ಬೆಸೆಯಲು ಸಹಕಾರಿ ಆಗುತ್ತದೆ. ಈ ಯೋಜನೆ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ.
ಉಮರ್ ಫಾರೂಖ್ ಮುಸ್ಬಾ,
ಅಧ್ಯಕ್ಷರು, ರಾಬಿತಾ ಸೊಸೈಟಿ.