ಯುಎಇದುಬೈಯಲ್ಲಿ ದಾಸವಾಣಿಯ ಸೊಬಗನ್ನು ಸಾರಿದ 27ನೇ ಹರಿನಾಮ ಸಂಕೀರ್ತನೆ

ದುಬೈಯಲ್ಲಿ ದಾಸವಾಣಿಯ ಸೊಬಗನ್ನು ಸಾರಿದ 27ನೇ ಹರಿನಾಮ ಸಂಕೀರ್ತನೆ

ದುಬೈ: ಕಳೆದ ನಾಲ್ಕು ದಶಕಗಳಿಂದ ದುಬೈಯಲ್ಲಿ ನೆಲೆಸಿದ್ದು, ಆಸಕ್ತರಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ದಾಸ ಸಂಕೀರ್ತನೆಗಳನ್ನು ಕಲಿಸುತ್ತಿರುವ ಹೆಮ್ಮೆಯ ಕನ್ನಡತಿ ವಿದುಷಿ ಸುಮಾ ನಾರಾಯಣ್. ದುಬೈಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ತರಗತಿಗಳನ್ನು ಆರಂಭಿಸಿದ ಮೊದಲ ಕನ್ನಡತಿ ಎಂಬ ಹೆಗ್ಗಳಿಕೆ ಇವರದು.
ಪ್ರಸ್ತುತ ಪೀಳಿಗೆಗೆ ಹರಿದಾಸರ ಪರಿಚಯ, ಅವರ ಸಂಕೀರ್ತನೆಗಳು ಹಾಗೂ ವಿಶಿಷ್ಟ ಮತ್ತು ಅಪರೂಪದ ಸಂಯೋಜನೆಗಳನ್ನು ಪರಿಚಯಿಸುವ ಉದ್ದೇಶದಿಂದ ವಿದುಷಿ ಸುಮಾ ನಾರಾಯಣ್ ಮತ್ತು ಶ್ರೀ ಲಕ್ಷ್ಮೀ ನಾರಾಯಣ್ ದಂಪತಿಗಳು ಕಳೆದ 30 ವರ್ಷಗಳಿಂದ ದುಬೈಯಲ್ಲಿ ಹರಿನಾಮ ಸಂಕೀರ್ತನೆ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುಮಾ ನಾರಾಯಣ್ ಅವರ ವಿದ್ಯಾರ್ಥಿಗಳ ಜೊತೆಗೆ ಯುಎಇಯ ಪ್ರತಿಭಾವಂತ ಹಾಗೂ ವಿದ್ವತ್ಪೂರ್ಣ ಸಂಗೀತಗಾರರು ಭಾಗವಹಿಸಿ ಸಂಕೀರ್ತನೆಗಳನ್ನು ಪ್ರಸ್ತುತಪಡಿಸಿದ್ದಾರೆ.

ಹರಿನಾಮ ಸಂಕೀರ್ತನೆ ಕಾರ್ಯಕ್ರಮ
2026ರ ಅಕ್ಟೋಬರ್ 4ರ ರವಿವಾರ ಸಂಜೆ ದುಬೈಯ ದೇರಾ ಪ್ರದೇಶದಲ್ಲಿ 27ನೇ ಹರಿನಾಮ ಸಂಕೀರ್ತನೆ ಕಾರ್ಯಕ್ರಮವು ಭಕ್ತಿಭಾವದಿಂದ ನೆರವೇರಿತು.
ಕಾರ್ಯಕ್ರಮದಲ್ಲಿ ಪಕ್ಕವಾದ್ಯದಲ್ಲಿ ಯುಎಇಯ ಖ್ಯಾತ ವಯೊಲಿನ್ ವಾದಕಿ ವಿದುಷಿ ಸಂಗೀತಾ ರಾಜೇಶ್, ಮೃದಂಗದಲ್ಲಿ ಮ್ಯೂಸಿಕೋ ತಂಡದ ಜನಪ್ರಿಯ ಕಲಾವಿದ ನಂದಗೋಪಾಲ್, ತಬಲಾದಲ್ಲಿ ರಾಜೇಶ್ ಅಡಿಗ ಹಾಗೂ ಹಾರ್ಮೋನಿಯಂನಲ್ಲಿ ಶ್ರೀ ರಾಘವೇಂದ್ರ ಪೂಜಾರಿ ಸಹಕರಿಸಿದರು.

ಧ್ಯಾನ ಶ್ಲೋಕ ಹಾಗೂ ಪಿಳ್ಳಾರಿ ಗೀತೆಗಳಿಂದ ಆರಂಭವಾದ ಕಚೇರಿಯಲ್ಲಿ ಪುರಂದರ ದಾಸರು, ಕನಕದಾಸರು, ಮಧ್ವೇಶ ದಾಸರು, ಶ್ರೀಚರಣ ದಾಸರು, ಭೀಮವ್ವ, ಗೋಪಾಲ ದಾಸರು, ವಾದಿರಾಜರು ಸೇರಿದಂತೆ ಹಲವು ಹರಿದಾಸರ 30ಕ್ಕೂ ಹೆಚ್ಚು ಸಂಕೀರ್ತನೆಗಳನ್ನು ಶಾಸ್ತ್ರೀಯವಾಗಿ ಹಾಡಲಾಯಿತು.

ಸುಮಾ ನಾರಾಯಣ್ ಅವರ ವಿದ್ಯಾರ್ಥಿಗಳಾದ ಸಾಯಿ ಪ್ರಶಾಂತ್, ಡಾ. ರಶ್ಮಿ ದೀಪಕ್, ಚಿನ್ಮಯಿ ಡೇನಿಯಲ್, ಶರಣ್ಯ ವೇದವ್ಯಾಸ, ಡಾ. ಸೋನಿಯಾ ದೀಪಕ್ ಹಾಗೂ ಸುಬ್ರಮಣ್ಯ ಅವರು ಸಂಕೀರ್ತನೆಗಳನ್ನು ಪ್ರಸ್ತುತಪಡಿಸಿದರು.

ಇವರೊಂದಿಗೆ ಆಹ್ವಾನಿತ ಕಲಾವಿದರಾದ ವಿದುಷಿ ಮಧುರಾ ವಿಶ್ವನಾಥ್, ವಿದುಷಿ ರೇವತಿ ಚಿದಂಬರ, ವಿದುಷಿ ಮಾಧವಿ ಪ್ರಸಾದ್, ನಾಗಭೂಷಣ್ ಕಶ್ಯಪ್ ಹಾಗೂ ರವಿರಾಜ್ ತಂತ್ರಿ ಅವರು ಭಾಗವಹಿಸಿ ತಮ್ಮ ಗಾಯನದ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ಸಂಪೂರ್ಣ ಕಾರ್ಯಕ್ರಮದ ಸ್ವಾಗತ ಹಾಗೂ ನಿರೂಪಣೆಯನ್ನು ಆರತಿ ಅಡಿಗ ಅವರು ನಿರ್ವಹಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ವಿದುಷಿ ಸುಮಾ ನಾರಾಯಣ್ ಅವರು ವಂದಿಸಿದರು.

ಹರಿದಾಸರ ಭಕ್ತಿ ಸಾಹಿತ್ಯ, ದಾಸವಾಣಿಯ ಸೊಗಡು ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತದ ಸೊಬಗನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸಿದ ೨೭ನೇ ಹರಿನಾಮ ಸಂಕೀರ್ತನೆ ಕಾರ್ಯಕ್ರಮವು ಸಂಗೀತಾಸಕ್ತರಿಗೆ ಹಾಗೂ ಭಕ್ತರಿಗೆ ಮನತಣಿಸುವ ಅನುಭವವನ್ನು ನೀಡಿತು.

Hot this week

ಬಹರೈನ್‌; ಅ.9ರಂದು ಶ್ರೀ ನಾರಾಯಣ ಗುರು ಜಯಂತಿ ಅಂಗವಾಗಿ ‘Tribute to Bahrain’ ವಿಶೇಷ ಕಾರ್ಯಕ್ರಮ

ಮನಾಮಾ: ಬದುಕನ್ನು ಕಟ್ಟಿಕೊಳ್ಳಲು, ಕನಸುಗಳನ್ನು ನನಸಾಗಿಸಿಕೊಳ್ಳಲು ಹಾಗೂ ಭವಿಷ್ಯಕ್ಕೆ ಹೊಸ ದಿಕ್ಕು...

‘ಕನ್ನಡ ಸಂಘ ಬಹರೈನ್’ನಿಂದ ‘ಯಕ್ಷ ವೈಭವ 2026’: ಅದ್ಧೂರಿ ಯಕ್ಷಗಾನ ಪ್ರದರ್ಶನ

ಬಹರೈನ್: ಕನ್ನಡ ಸಂಘ ಬಹರೈನ್ ವತಿಯಿಂದ ಆಯೋಜಿಸಲಾದ “ಯಕ್ಷ ವೈಭವ 2026...

ಕರ್ನಾಟಕ ಸಂಘ ಖತರ್‌ನಿಂದ 71ನೇ ಕರ್ನಾಟಕ ರಾಜ್ಯೋತ್ಸವ ‘ಕರುನಾಡ ವೈಭವ 2026’ ಪೋಸ್ಟರ್ ಅನಾವರಣ

ದೋಹಾ: ಭಾರತೀಯ ರಾಯಭಾರ ಕಚೇರಿ, ದೋಹಾ ಇದರ ಆಶ್ರಯದಲ್ಲಿ ಕಾರ್ಯನಿರ್ವಹಿಸುವ ಭಾರತೀಯ...

ಮಸ್ಕತ್‌ನಲ್ಲಿ ಸತ್ಯನಾರಾಯಣ ಪೂಜೆ-ನಾರಾಯಣ ಗುರು ಜಯಂತಿ ಆಚರಣೆ

ಮಸ್ಕತ್: ಒಮಾನ್ ಬಿಲ್ಲವಾಸ್ ವತಿಯಿಂದ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಬ್ರಹ್ಮಶ್ರೀ...

ದುಬೈ; ಗಂಧರ್ವ ಗಮಕ ಶಾಲೆಯಲ್ಲಿ ವಿಶೇಷ ಗುರುಪೂರ್ಣಿಮಾ ಕಾರ್ಯಕ್ರಮ

ದುಬೈ: ಗಮಕ ಕಲೆಯ ಪ್ರಸಿದ್ಧ ಕಲಾವಿದ ಹಾಗೂ ಪದ್ಮಶ್ರೀ ಪುರಸ್ಕೃತ ಹೊಸಹಳ್ಳಿ...

Related Articles

Popular Categories