ವಾರ್ತಾಭಾರತಿ ಸುದ್ದಿ ಸಂಸ್ಥೆಯು ಅನಿವಾಸಿ ಕನ್ನಡಿಗರಿಗಾಗಿಯೇ ಜಾಗತಿಕ ವೇದಿಕೆಯಾಗಿ ‘globalkannadiga.com’ ವೆಬ್ ಸೈಟ್ ಪ್ರಾರಂಭಿಸುತ್ತಿರುವುದು ಅತಿ ಸಂತೋಷದ ಸಮಾಚಾರ. ಇದು ಕನ್ನಡ ಪತ್ರಿಕೋದ್ಯಮದಲ್ಲಿ ವಿನೂತನ ಪ್ರಯತ್ನ.
‘ವಾರ್ತಾಭಾರತಿ’ ಕನ್ನಡ ದಿನಪತ್ರಿಕೆ ಕರ್ನಾಟಕದ ಜನಪ್ರಿಯ ಪತ್ರಿಕೆಗಳಲ್ಲೊಂದು. ಪ್ರತಿದಿನದ ತತ್ ಕ್ಷಣದ ಸುದ್ದಿಯನ್ನು Varthabharati.in ನಲ್ಲಿ ಕನ್ನಡದಲ್ಲಿ ಓದಬಹುದು. ಯೂಟ್ಯೂಬ್ ನಲ್ಲೂ ವಾರ್ತಾಭಾರತಿ ಚಾನಲ್ ನಲ್ಲಿ ವೀಡಿಯೊಗಳನ್ನು ನೋಡಬಹುದು. ಇಂಗ್ಲಿಷ್ ಭಾಷೆಯಲ್ಲಿ english.varthabharati.in ನಲ್ಲಿ ಓದಬಹುದು.
ಜಾಗತೀಕರಣ ಪ್ರಪಂಚದಲ್ಲಿ ತಮ್ಮ ವೃತ್ತಿ ಹಾಗೂ ವ್ಯಾಪಾರಗಳನ್ನು ಅರಸಿ ಅಸಂಖ್ಯಾತ ಕನ್ನಡಿಗರು ಇಂದು ವಿದೇಶಗಳಲ್ಲಿ ನೆಲಸಿದ್ದಾರೆ. ಅವರೆಲ್ಲರಿಗೂ ಎಂದೆಂದೂ ತಮ್ಮ ಮಾತೃಭಾಷೆ ಹಾಗೂ ತಾಯ್ನಾಡಿನ ಮೇಲಿನ ಪ್ರೇಮ ಪ್ರತಿಕ್ಷಣವೂ ಮಿಡಿಯುತ್ತಿರುತ್ತದೆ. ಇಂತಹ ಅನಿವಾಸಿ ಕನ್ನಡಿಗರ ಹಂಬಲವನ್ನು ಒಂದೇ ವೇದಿಕೆಯಲ್ಲಿ ಹಂಚಿಕೊಳ್ಳಲು globalkannadiga.com ವೆಬ್ ಸೈಟ್ ಕೊಂಡಿಯಾಗಲಿದೆ.
ಅಮೇರಿಕಾದ ಅಟ್ಲಾಂಟ ನಗರದ ಬಹು ವರ್ಷದ ನಿವಾಸಿಯಾಗಿ ಹಾಗೂ ವಾರ್ತಾಭಾರತಿಯ ಪ್ರಾರಂಭದ ದಿನಗಳಿಂದಲೂ ಓದುಗನಾಗಿ ನಾನು globalkannadiga.com ವೆಬ್ ಸೈಟ್ ಪ್ರಾರಂಭಕ್ಕೆ ನನ್ನ ಹೃತ್ಪೂರ್ವಕ ಶುಭಕಾಮನೆಗಳನ್ನು ಹರಸುತ್ತಿದ್ದೇನೆ. ನಿಮ್ಮ ಈ ಹೊಸ ಪ್ರಯತ್ನ ಅನಿವಾಸಿ ಕನ್ನಡಿಗರ ಮುಖವಾಣಿಯಾಗಲೆಂದು ಕೋರುತ್ತಿದ್ದೇನೆ.
ಕೆ.ಆರ್.ಶ್ರೀನಾಥ್
ಅಟ್ಲಾಂಟ, ಯು ಎಸ್ ಎ