ವಾರ್ತಾಭಾರತಿ ಕನ್ನಡ ದೈನಿಕ ಸಮೂಹ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿರುವ ಕನ್ನಡಿಗರಿಗಾಗಿಯೇ ಒಂದು ವಿಶೇಷ ವೆಬ್ ತಾಣವನ್ನು globalkannadiga.com ಎಂಬ ಹೆಸರಲ್ಲಿ ಪ್ರಾರಂಭಿಸುತ್ತಿರುವುದು ಅಭಿನಂದನಾರ್ಹವಾಗಿದೆ.
ಜಾಗತಿಕ ಕನ್ನಡಿಗರು , ಕರ್ನಾಟಕದ ಜನತೆ ಹಾಗು ಸರಕಾರದ ನಡುವೆ ಒಂದು ಸೇತುವೆಯಾಗಿ ಈ ಹೊಸ ವೆಬ್ ತಾಣ ಕಾರ್ಯನಿರ್ವಹಿಸಲಿ. ಕರ್ನಾಟಕದ ಅಭಿವೃದ್ಧಿಯಲ್ಲಿ ಅನಿವಾಸಿ ಕನ್ನಡಿಗರೂ ಭಾಗವಹಿಸುವಂತೆ ಮಾಡುವಲ್ಲಿ ಈ ವೆಬ್ ಸೈಟ್ ಶ್ರಮಿಸಲಿ.
ಹಾಗೆಯೇ ವಿವಿಧ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತಂದು ನಿವಾರಿಸುವಲ್ಲಿ ಕೊಡುಗೆ ನೀಡಲಿ.
ಜಯದೇವ್ ತೆಗ್ಗಿನಮನಿ
ಅಧ್ಯಕ್ಷರು, ಈಜಿಪ್ಟ್ ಕನ್ನಡಿಗರ ಸಂಘ