ಇತರೆಯೆಮೆನ್‌ ರಾಜಧಾನಿಯಲ್ಲಿ ಹೌತಿ ನೆಲೆಗಳ ವಿರುದ್ಧ ದಾಳಿ: ಅಮೆರಿಕ...

ಯೆಮೆನ್‌ ರಾಜಧಾನಿಯಲ್ಲಿ ಹೌತಿ ನೆಲೆಗಳ ವಿರುದ್ಧ ದಾಳಿ: ಅಮೆರಿಕ ಹೇಳಿಕೆ

ಸನಾ: ಯೆಮೆನ್‌ನ ರಾಜಧಾನಿ ಸನಾದಲ್ಲಿ ಹೌತಿ ಬಂಡುಕೋರರ ನೆಲೆಗೆ ಅಮೆರಿಕಾ ವಾಯು ದಾಳಿ ನಡೆಸಿದ್ದು, ಕ್ಷಿಪಣಿಗಳನ್ನು ಸಂಗ್ರಹಿಸಿಡುತ್ತಿದ್ದ ಪ್ರದೇಶ ಸೇರಿದಂತೆ ಕಮಾಂಡ್‌ ಮತ್ತು ಕಂಟ್ರೋಲ್‌ ನ ಜಾಗಕ್ಕೆ ದಾಳಿ ಮಾಡಿದೆ ಎಂದು ಯುನೈಟೆಡ್‌ ಸ್ಟೇಟ್ಸ್‌ ಮಿಲಿಟರಿ ಹೇಳಿಕೆ ನೀಡಿದೆ.

US ಸೆಂಟ್ರಲ್ ಕಮಾಂಡ್ (CENTCOM) ಮಧ್ಯಪ್ರಾಚ್ಯದಾದ್ಯಂತ ಅಮೆರಿಕಾದ ಸೇನಾ ಕಾರ್ಯಾಚರಣೆಗಳ ಮೇಲ್ವಿಚಾರಣೆಯನ್ನು ನಡೆಸುತ್ತಿದೆ. “ಈ ವಾಯುದಾಳಿಗಳು ಹೌತಿ ಬಂಡುಕೋರರ ಕಾರ್ಯಾಚರಣೆಗಳನ್ನು ಅಡ್ಡಿಪಡಿಸುವ ಮತ್ತು ಇಲ್ಲದಂತೆ ಮಾಡುವ ಗುರಿಯನ್ನು ಹೊಂದಿದೆ ಎಂದು ಯುಎಸ್‌ ಸೆಂಟ್ರಲ್‌ ಕಮಾಂಡ್‌ ಹೇಳಿಕೆಯಲ್ಲಿ ತಿಳಿಸಿದೆ.

ಈ ಹಿಂದೆ ಇರಾನ್‌ ಬೆಂಬಲಿತ ಹೌತಿ ಗುಂಪುಗಳು ಅಮೆರಿಕಾ ನೌಕಾಪಡೆಯ, ಕೆಂಪು ಸಮುದ್ರ ಹಾಗೂ ಬಾಬ್‌ ಅಲ್‌ ಮಂದೇಬ್‌ ಮತ್ತು ಏಡನ್‌ ಕೊಲ್ಲಿಯಲ್ಲಿನ ವ್ಯಾಪಾರಿ ಹಡಗುಗಳ ವಿರುದ್ಧ ದಾಳಿ ನಡೆಸಿತ್ತು ಎಂದು ಸೆಂಟ್‌ಕಾಮ್ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದೆ.

ಹೌತಿ ಬಂಡುಗೊರರು ಮತ್ತು ಇಸ್ರೇಲ್‌ ಸೇನೆಯ ನಡುವೆ ದಾಳಿಗಳು ಹೆಚ್ಚುತ್ತಿರುವ ಮಧ್ಯದಲ್ಲೇ ಅಮೆರಿಕಾ ಹೌತಿ ಬಂಡುಗೋರರ ನೆಲೆಯ ಮೇಲೆ ದಾಳಿಗಳನ್ನು ನಡೆಸಿವೆ. ಸನಾ ಬಳಿಯ ವಿದ್ಯುತ್ ಕೇಂದ್ರಗಳು ಸೇರಿದಂತೆ ಯೆಮೆನ್‌ನ ಹಲವಾರು ಗುರಿಗಳ ಮೇಲೆ ಇಸ್ರೇಲ್ ಗುರುವಾರ ಬಾಂಬ್ ದಾಳಿ ನಡೆಸಿತು.

ಇಸ್ರೇಲ್‌ ನ ಬಾಂಬ್‌ ದಾಳಿಯಲ್ಲಿ ಕನಿಷ್ಠ ಒಂಭತ್ತು ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇಸ್ರೇಳ್‌ ನ ಟೆಲ್‌ ಅವೀವ್‌ ಗುರಿಯಾಗಿಸಿ ಅನ್ಸಾರುಲ್ಲಾ ಎಂಬ ಹೆಸರಿನ ಹೌತಿಗಳ ಕ್ಷಿಪಣಿಗಳ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ.

Hot this week

ಬಹರೈನ್ ಕನ್ನಡ ಸಂಘದಿಂದ 79ನೇ ಸ್ವಾತಂತ್ರ್ಯ ದಿನಾಚರಣೆ

ಬಹರೈನ್: ಭಾರತದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಗಸ್ಟ್ 15ರಂದು ಬೆಳಗ್ಗೆ 8:30ಕ್ಕೆ...

ಬಹರೈನ್ ರೇಡಿಯೋ ಆರ್ ಜೆ ಕಮಲಾಕ್ಷ ಅಮೀನ್​ಗೆ ‘ಗೋಲ್ಡನ್ ಐಕಾನಿಕ್ ಅವಾರ್ಡ್’ ಗೌರವ ಪ್ರಶಸ್ತಿ

ಮಂಗಳೂರು: ಬಹರೈನ್ ನ ಕಸ್ತೂರಿ ಕನ್ನಡ ಎಫ್ಎಂ ರೇಡಿಯೋ ಆರ್ ಜೆ...

ಮಸ್ಕತ್‌ನಲ್ಲಿ ‘ಕನ್ನಡ ಭವನ’ ನಿರ್ಮಾಣಕ್ಕೆ ಕರ್ನಾಟಕ ಸರಕಾರದಿಂದ ಆರ್ಥಿಕ ನೆರವು ಬೇಕು: ‘ಮಸ್ಕತ್ ಕನ್ನಡ ಸಂಘ’ದ ಅಧ್ಯಕ್ಷ ಮಂಜುನಾಥ್ ಸಂಗಟಿ

ವಿಶೇಷ ಸಂದರ್ಶನ; ಎಂ.ಇಕ್ಬಾಲ್ ಉಚ್ಚಿಲ, ದುಬೈ ನಿಸರ್ಗ ನಿರ್ಮಿತ ರಮ್ಯ ಮನೋಹರ ತಾಣವಾಗಿರುವ...

Related Articles

Popular Categories