ಯುಎಸ್‌ಎಅಮೆರಿಕಾದ ಮಣ್ಣಿಗೂ ತಲುಪಲಿವೆ ಪಾಕಿಸ್ತಾನದ ಮಿಸೈಲ್‌ಗಳು: ವಾಷಿಂಗ್ಟನ್‌ ಕಳವಳ!

ಅಮೆರಿಕಾದ ಮಣ್ಣಿಗೂ ತಲುಪಲಿವೆ ಪಾಕಿಸ್ತಾನದ ಮಿಸೈಲ್‌ಗಳು: ವಾಷಿಂಗ್ಟನ್‌ ಕಳವಳ!

ನ್ಯೂಯಾರ್ಕ್:‌ ಪಾಕಿಸ್ತಾನವು ಬಹುದೂರಕ್ಕೆ ತಲುಪುವ ಬ್ಯಾಲಿಸ್ಟಿಕ್‌ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಈ ಕ್ಷಿಪಣಿಗಳ ಕುರಿತು ಯುನೈಟೆಡ್‌ ಸ್ಟೇಟ್ಸ್‌ ಕಳವಳ ಮತ್ತು ಎಚ್ಚರಿಕೆ ವ್ಯಕ್ತಪಡಿಸಿದೆ. ಇದೊಂದು ಹೊಸ ಭದ್ರತಾ ಬೆದರಿಕೆಯಾಗಿದೆ ಎಂದು ವಾಷಿಂಗ್ಟನ್‌ ಉಲ್ಲೇಖಿಸಿದೆ.

ಕಾರ್ನೆಗೀ ಎಂಡೋಮೆಂಟ್ ಫಾರ್ ಇಂಟರ್‌ನ್ಯಾಶನಲ್ ಪೀಸ್‌ನಲ್ಲಿ ಮಾತನಾಡುತ್ತಾ, ಯುಎಸ್ ಡೆಪ್ಯೂಟಿ ನ್ಯಾಷನಲ್ ಸೆಕ್ಯುರಿಟಿ ಅಡ್ವೈಸರ್ ಜಾನ್ ಫೈನರ್ ಅವರು ” ಪಾಕಿಸ್ತಾನವು ಕ್ಷಿಪಣಿಗಳನ್ನು ಪ್ರಗತಿಪಡಿಸುತ್ತಾ ಇರುವುದು ಒಂದು ತೊಂದರೆದಾಯಕ ಬದಲಾವಣೆಯಾಗಿದೆ” ಎಂದು ಬಣ್ಣಿಸಿದ್ದಾರೆ.

“ಪಾಕಿಸ್ತಾನವು ಅತ್ಯಾಧುನಿಕ ಕ್ಷಿಪಣಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ದೀರ್ಘ-ಶ್ರೇಣಿಯ ಬ್ಯಾಲಿಸ್ಟಿಕ್‌ ಕ್ಷಿಪಣಿಯಿಂದ ಹಿಡಿದು ದೊಡ್ಡ ದೊಡ್ಡ ರಾಕೆಟ್‌ ಗಳ ಮೋಟೊರ್‌ ಗಳನ್ನು ಟೆಸ್ಟ್‌ ಮಾಡುವಂತಹ ಉಪಕರಣಗಳನ್ನೂ ಅಭಿವೃದ್ಧಿಪಡಿಸಿದೆ. ಈ ಪ್ರವೃತ್ತಿಗಳು ಮುಂದುವರಿದರೆ, ಪಾಕಿಸ್ತಾನವು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ದಕ್ಷಿಣ ಏಷ್ಯಾದ ಆಚೆಗೂ ಗುರಿಗಳನ್ನು ಹೊಡೆಯುವ ಸಾಮರ್ಥ್ಯವನ್ನು ಹೊಂದಿರುತ್ತದೆ” ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನದ ಮಿಸೈಲ್‌ ಕಾರ್ಯಕ್ರಮದ ಮೇಲೆ ವಾಷಿಂಗ್ಟನ್‌ ಹೊಸ ನಿರ್ಬಂಧಗಳನ್ನು ವಿಧಿಸಿದ ಬೆನ್ನಲ್ಲೇ ಈ ವಿಚಾರ ಬಹಿರಂಗವಾಗಿದೆ. ಮೂರು ಖಾಸಗಿ ಕಂಪೆನಿಗಳು ಈ ಕ್ಷಿಪಣಿ ಅಭಿವೃದ್ಧಿಯನ್ನು ಬೆಂಬಲಿಸುತ್ತಿವೆ ಎಂದು ಆರೋಪಿಸಲಾಗಿದೆ.

Hot this week

ದುಬೈ; ಅ.11ರಂದು ‘ಗಮ್ಮತ್ ಕಲಾವಿದೆರ್ ದುಬೈ’ ತಂಡದಿಂದ ‘ಪೋನಗ ಕೊನೊಪರಾ..?’ ನಾಟಕ

ದುಬೈ: ಯುಎಇಯಲ್ಲಿರುವ ನಾಟಕ ಅಭಿಮಾನಿಗಳಿಗೆ ಕಳೆದ ಹಲವಾರು ವರ್ಷಗಳಿಂದ ಮನರಂಜನೆ ನೀಡುತ್ತಾ...

ಅಮೇರಿಕದಲ್ಲಿ ‘ಕಾಂತಾರ: ಚಾಪ್ಟರ್ 1’ ಯಶಸ್ಸಿನ ಅಬ್ಬರ! ಸಿನೆಮಾ ನೋಡಿದವರು ಏನೆಂದಿದ್ದಾರೆ ನೋಡಿ…!

ನ್ಯೂಯಾರ್ಕ್: ಬಹುನಿರೀಕ್ಷಿತ ‘ಕಾಂತಾರ: ಚಾಪ್ಟರ್ 1’ ಎಲ್ಲೆಡೆ ಬಿಡುಗಡೆಗೊಂಡಿದ್ದು, ಅಮೇರಿಕದ ನ್ಯೂಯಾರ್ಕ್...

Related Articles

Popular Categories