ನಮ್ಮ ಅಚ್ಚುಮೆಚ್ಚಿನ ಮಾಧ್ಯಮ ಸಂಸ್ಥೆ ವಾರ್ತಾಭಾರತಿ ಈಗ ಇನ್ನೊಂದು ಸಾಹಸಕ್ಕೆ ಕೈ ಹಾಕಿರುವುದು ಬಹಳ ಸಂತೋಷದ ವಿಷಯ. ಅನಿವಾಸಿ ಕನ್ನಡಿಗರಿಗಾಗಿಯೇ ಮೀಸಲಾದ ಹೊಸ ವೆಬ್ ಸೈಟ್ globalkannadiga.com ಅನ್ನು ರೂಪಿಸುವ ಅದರ ಕಲ್ಪನೆ ಹಾಗು ಆಶಯ ಅತ್ಯಂತ ಶ್ಲಾಘನೀಯವಾಗಿದೆ. ಅನಿವಾಸಿ ಕನ್ನಡಿಗರ ಬಗ್ಗೆ ವಾರ್ತಾಭಾರತಿ ಬಹಳ ವರ್ಷಗಳಿಂದ ಅಕ್ಕರೆ, ಕಾಳಜಿ ತೋರಿಸುತ್ತಲೇ ಬಂದಿದೆ. ಅದೇ ಸಂಪನ್ನ ಪರಂಪರೆಯ ಮುಂದಿನ ಭಾಗವಾಗಿ ಅನಿವಾಸಿ ಕನ್ನಡಿಗರಿಗಾಗಿಯೇ ಮೀಸಲಿಟ್ಟ ಹೊಸ ವೆಬ್ ಸೈಟ್ ಅನ್ನು ತಂದಿದ್ದಾರೆ. ಜಗತ್ತಿನಾದ್ಯಂತ ಇರುವ ಅನಿವಾಸಿ ಕನ್ನಡಿಗರಿಗೆ ಇದೊಂದು ಮಹತ್ವದ ಕೊಡುಗೆಯಾಗಿದೆ. ಮುದ್ರಣ, ಡಿಜಿಟಲ್ ಹಾಗು ವಿಶುವಲ್ ಮಾಧ್ಯಮಗಳಲ್ಲಿ ಈಗಾಗಲೇ ಛಾಪು ಮೂಡಿಸಿರುವ ವಾರ್ತಾಭಾರತಿ ಈ ವೆಬ್ ಸೈಟ್ ಅನ್ನು ಅನಿವಾಸಿ ಕನ್ನಡಿಗರ ಪಾಲಿನ ಜಾಗತಿಕ ವೇದಿಕೆಯಾಗಿ ರೂಪಿಸಲಿದೆ ಎಂಬ ಸಂಪೂರ್ಣ ಭರವಸೆ ನನಗಿದೆ. ಇದು ಭರ್ಜರಿ ಯಶಸ್ಸು ಕಾಣಲಿ. ನನ್ನ ಇಡೀ ಕುಟುಂಬದ ಪರವಾಗಿ ವಾರ್ತಾಭಾರತಿ ಬಳಗಕ್ಕೆ ಅಭಿನಂದನೆಗಳು ಹಾಗು ಶುಭ ಹಾರೈಕೆಗಳು.
ಡಾ. ರೊನಾಲ್ಡ್ ಕೊಲಾಸೊ ಹಾಗು ಜೀನ್ ಕೊಲಾಸೊ, ದುಬೈ