ಬಹರೈನ್ಬಹರೈನ್ ಕನ್ನಡ ಸಂಘದಿಂದ 79ನೇ ಸ್ವಾತಂತ್ರ್ಯ ದಿನಾಚರಣೆ

ಬಹರೈನ್ ಕನ್ನಡ ಸಂಘದಿಂದ 79ನೇ ಸ್ವಾತಂತ್ರ್ಯ ದಿನಾಚರಣೆ

ಬಹರೈನ್: ಭಾರತದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಗಸ್ಟ್ 15ರಂದು ಬೆಳಗ್ಗೆ 8:30ಕ್ಕೆ ಮನಾಮದ ಕನ್ನಡ ಭವನ ಸಮುಚ್ಛಯದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.

ಕಾರ್ಯಕ್ರಮವು ಸಂಘದ ಅಧ್ಯಕ್ಷ ಅಜಿತ್ ಬಂಗೇರ ಅವರು ಧ್ವಜಾರೋಹಣ ಮಾಡುವುದರ ಮೂಲಕ ಆರಂಭಗೊಂಡಿತು. ನಂತರ ಉಪಾಧ್ಯಕ್ಷರು ನಿತಿನ್ ಶೆಟ್ಟಿ ಅವರು ಬಹರೈನ್ ರಾಷ್ಟ್ರಧ್ವಜರೋಹಣಗೈದರು. ನೆರೆದಿದ್ದ ನೂರಾರು ಸದಸ್ಯರು ಧ್ವಜಕ್ಕೆ ವಂದನೆ ಸಲ್ಲಿಸಿ, ರಾಷ್ಟ್ರಗೀತೆಯನ್ನು ಹಾಡಿದರು.
ಸಮಾರಂಭದ ಅತಿಥಿಗಳಾಗಿ ಜಯಶಂಕರ್, ಮೊಹಮ್ಮದ್ ಮನ್ಸೂರ್, ಸಿಎ ಅಜಯ್, ನಿಕಟಪೂರ್ವ ಅಧ್ಯಕ್ಷ ಅಮರನಾಥ ರೈ ಹಾಗೂ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದು, ಸ್ವಾತಂತ್ರ್ಯ ದಿನದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಅಧ್ಯಕ್ಷ ಅಜಿತ್ ಬಂಗೇರ ಅವರು ಸ್ವಾತಂತ್ರ್ಯ ದಿನದ ಸಂದೇಶ ನೀಡಿದರು.

ಸ್ವಾತಂತ್ರ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ ಕನ್ನಡ ಭವನ ಸಭಾಂಗಣದಲ್ಲಿ ವಿಶೇಷ ಛದ್ಮವೇಷ ಸ್ಪರ್ಧೆ ಮತ್ತು ಸಂಘದ ಸದಸ್ಯರ ಪರಿವಾರದಿಂದ ಮನರಂಜನಾತ್ಮಕ ನೃತ್ಯ ಪ್ರದರ್ಶನ ನಡೆಯಿತು.

ಛದ್ಮವೇಷ ಸ್ಪರ್ಧೆಯ ಫಲಿತಾಂಶ
ವರ್ಗ A (1–4 ವಯಸ್ಸು)
ಪ್ರಥಮ: ಜೈಶ್ನಿ ಜಯರಾಜ್
ದ್ವಿತೀಯ: ಸಾಯಂಶ್ ರೂಪೇಶ್
ತೃತೀಯ: ಮೇಗನ್ ಮ್ಯಾಥ್ಯೂ

ವರ್ಗ B (4–8 ವಯಸ್ಸು)
ಪ್ರಥಮ: ರಿದ್ಧಿ ನಿತೇಶ್ ಶೆಟ್ಟಿ
ದ್ವಿತೀಯ: ಶೌರ್ಯ ಪ್ರವೀಣ್ ಶೆಟ್ಟಿ
ತೃತೀಯ: ಆಯಾನ್ ಸತೀಶ್ ಶೆಟ್ಟಿ

ವರ್ಗ C (8–15 ವಯಸ್ಸು)
ಪ್ರಥಮ: ಪ್ರಕೃತಿ ಗೋಪಾಲ್ ಶೆಟ್ಟಿ
ದ್ವಿತೀಯ: ಶ್ರೇಯಾ ಹರೀಶ್ ಗೌಡ
ತೃತೀಯ: ಕ್ಷಿತಿ ಸುನಿಲ್

ಸೌರವ್ ರಾಕೇಶ್ ಹಾಗೂ ಫೆಲ್ಸಿ ಫಿಲೊಮೇನಾ ಫರ್ನಾಂಡಿಸ್ ತೀರ್ಪುಗಾರರಾಗಿ ಸಹಕರಿಸಿದರು. ಈ ವೇಳೆ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದ ಅಂತ್ಯದಲ್ಲಿ ರುಚಿಕರ ಉಪಹಾರ ಮತ್ತು ಸಿಹಿತಿಂಡಿಗಳನ್ನು ಎಲ್ಲರಿಗೂ ನೀಡಲಾಯಿತು. ಕಾರ್ಯಕ್ರಮವನ್ನು ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಹರಿಣಿ ಶೆಟ್ಟಿ, ಸಾಂಸ್ಕೃತಿಕ ಜೊತೆ ಕಾರ್ಯದರ್ಶಿ ಹರೀಶ್ ಗೌಡ ಮತ್ತು ಪ್ರಭಾರ ಕಾರ್ಯದರ್ಶಿ ಹರಿನಾಥ್ ಸುವರ್ಣ ಅವರ ಸಮನ್ವಯದಲ್ಲಿ ಯಶಸ್ವಿಯಾಗಿ ನೆರವೇರಿಸಲಾಯಿತು.

Hot this week

ದುಬೈ; ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ ನಲ್ಲಿ ಓಣಂ ಹಬ್ಬ ಆಚರಣೆ

ದುಬೈ : ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರ ಫಾರ್ಚೂನ್ ಗ್ರೂಪ್...

ಕನ್ನಡಿಗರ ಕೂಟ ದುಬೈ ವತಿಯಿಂದ ಮಾಜಿ ಕ್ರಿಕೆಟಿಗ ಬ್ರಿಜೇಶ್ ಪಟೇಲ್‌ಗೆ ಸನ್ಮಾನ

ಬೆಂಗಳೂರು: ಕನ್ನಡಿಗರ ಕೂಟ, ದುಬೈ ತಂಡವು ಮಾಜಿ ಭಾರತೀಯ ಕ್ರಿಕೆಟಿಗ ಹಾಗೂ...

ಫ್ಲೋರಿಡಾ ತುಳು ಕೂಟದ 2ನೇ ವಾರ್ಷಿಕ ಪೊಟ್ಲಕ್ ಪಿಕ್ನಿಕ್ ಸಂಭ್ರಮ

ಅಮೇರಿಕದ ಫ್ಲೋರಿಡಾ ತುಳು ಕೂಟವು ಇತ್ತೀಚೆಗೆ ಕ್ಯಾಸೆಲ್‌ಬೆರ್ರಿ ಒರ್ಲಾಂಡೊದಲ್ಲಿ ತನ್ನ ಎರಡನೇ...

ಭಾರತದ ನೂತನ ಕಾನ್ಸುಲ್ ಜನರಲ್ ಡಾ.ವಿಷ್ಣುವರ್ಧನ ರೆಡ್ಡಿಗೆ ಕನ್ನಡಿಗರ ಕೂಟ ದುಬೈಯಿಂದ ಸ್ವಾಗತ

ದುಬೈ: ಯುಎಇಯ ಪ್ರತಿಷ್ಠಿತ ಕನ್ನಡ ಸಂಘಟನೆಗಳಲ್ಲಿ ಒಂದಾಗಿರುವ ಕನ್ನಡಿಗರ ಕೂಟ, ದುಬೈ...

Related Articles

Popular Categories