ಬಹರೈನ್ಬಹರೈನ್‌ನಲ್ಲಿ ಡಿ.19ರಂದು ಉಡುಪಿ ಪ್ರಜ್ಞಾನಂ ತಂಡದಿಂದ 'ಹೆಜ್ಜಗೊಲಿದ ಬೆಳಕು'...

ಬಹರೈನ್‌ನಲ್ಲಿ ಡಿ.19ರಂದು ಉಡುಪಿ ಪ್ರಜ್ಞಾನಂ ತಂಡದಿಂದ ‘ಹೆಜ್ಜಗೊಲಿದ ಬೆಳಕು’ ನಾಟಕ ಪ್ರದರ್ಶನ

ಬಹರೈನ್: ಬಹರೈನ್‌ನ ಕನ್ನಡ ಸಂಘದ ಆಶ್ರಯದಲ್ಲಿ ಉಡುಪಿ ಪ್ರಜ್ಞಾನಂ ಟ್ರಸ್ಟ್ (ರಿ)ನಿರ್ಮಿಸಿದ ವಿಶಿಷ್ಟ ಏಕವ್ಯಕ್ತಿ ನಾಟಕ “ಹೆಜ್ಜೆ ಗೊಲಿದ ಬೆಳಕು” ಬಹರೈನ್‌ನ ಮನಾಮಾದ ಕನ್ನಡ ಭವನದಲ್ಲಿ ಡಿಸೆಂಬರ್ 19ರ ಶುಕ್ರವಾರದಂದು ಅದ್ದೂರಿಯಾಗಿ ಪ್ರದರ್ಶನಗೊಳ್ಳಲಿದೆ.

ನೃತ್ಯ ವಿದುಷಿ ಸಂಸ್ಕೃತಿ ಅಭಿನಯದ ಈ ನಾಟಕ ಅಮೋಘ ನೃತ್ಯ ಮತ್ತು ಅಭಿನಯ, ಮಾತುಗಾರಿಕೆ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದು, ರಂಗಕರ್ಮಿ ಗಣೇಶ್ ರಾವ್ ಎಲ್ಲೂರು ಈ ನಾಟಕ ನಿರ್ದೇಶನ ನೀಡಿದ್ದಾರೆ. ಬೆಳಕು ವಿನ್ಯಾಸ ಶಂಕರ್ ಕೆ ಶಿವಮೊಗ್ಗ ಮಾಡಿದ್ದು, ಸಂಗೀತ ನಿರ್ವಹಣೆ ಸಂಹಿತಾ ಜಿಪಿ ಮಾಡಲಿದ್ದಾರೆ. ಖ್ಯಾತ ಸಾಹಿತಿ ಸುಧಾ ಆಡುಕಳ ನಾಟಕ ರಚನೆ ಮಾಡಿದ್ದಾರೆ.

ಬಹರೈನ್‌ ಕನ್ನಡ ಸಂಘ ಮತ್ತು ಬಹರೈನ್‌ನಲ್ಲಿ ಉದ್ಯೋಗಿಗಳಾಗಿದ್ದು ಪ್ರಜ್ಞಾನಂ ಟ್ರಸ್ಟ್ ಬಂಧುಗಳಾಗಿರುವ ಸುರೇಶ್ ಸಿದ್ದಕೆರೆ, ಶ್ರೀನಾಥ ಚೆಕ್ಕೆ, ಕವಿತಾ ಸುರೇಶ, ರಾಮ ಪ್ರಸಾದ್ ಅಮ್ಮೆನಡ್ಕ ಈ ನಾಟಕ ಪ್ರದರ್ಶನ ಪ್ರಾಯೋಜಿಸಿದ್ದಾರೆ ಎಂದು ಉಡುಪಿ ಪ್ರಜ್ಞಾನಂ ಟ್ರಸ್ಟ್ ಅಧ್ಯಕ್ಷ ಜಿ ಪಿ ಪ್ರಭಾಕರ್ ತುಮರಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Hot this week

ತುಳು ಭಾಷೆಗೆ ಅಧಿಕೃತ ಮಾನ್ಯತೆ: ದಶಕಗಳ ಹೋರಾಟಕ್ಕೆ ಸಂದ ಗೌರವ, ಅಮೇರಿಕದ ತುಳುವರಲ್ಲಿ ಸಂಭ್ರಮ!

ಅಮೇರಿಕ: ತುಳುನಾಡಿನ ಜನರ ಬಹುದಶಕಗಳ ಕನಸು ನನಸಾಗಿದೆ. ಸೆಪ್ಟೆಂಬರ್ 18, 2026ರಂದು...

ನ್ಯೂಯಾರ್ಕ್‌ನ ಆಲ್ಬನಿಯ ಸುಪ್ರಿಯಾ ಶೆಟ್ಟಿಗೆ ‘ಮಿಸ್ಸೆಸ್ ಅಕ್ಕ- 2026’ ಕಿರೀಟ

ಫಿಲಡೆಲ್ಫಿಯಾ: ಫಿಲಡೆಲ್ಫಿಯಾದಲ್ಲಿ ನಡೆದ ಅಕ್ಕ (AKKA) ರಜತ ಮಹೋತ್ಸವ ವಿಶ್ವ ಕನ್ನಡ...

ದುಬೈಯಲ್ಲಿ ಪದ್ಮಶಾಲಿ ಸಮುದಾಯದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ; ಭಕ್ತಿ,ಸಂಸ್ಕೃತಿ ಹಾಗೂ ಸಮುದಾಯದ ಒಗ್ಗಟ್ಟಿಗೆ ಸಾಕ್ಷಿಯಾದ ಕಾರ್ಯಕ್ರಮ

ದುಬೈ, : ದುಬೈ ಪದ್ಮಶಾಲಿ ಸಮುದಾಯದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯನ್ನು ಭಕ್ತಿ,...

ಬೆಂಗಳೂರು; ಕನ್ನಡಿಗರ ಕೂಟ, ದುಬೈಯಿಂದ ಪದ್ಮಶ್ರೀ ಭೀಮವ್ವ ದೊಡ್ಡಬಾಳಪ್ಪರಿಗೆ ಪ್ರತಿಷ್ಠಿತ ‘ಹುಟ್ಟೂರ ಸನ್ಮಾನ‌’ ಪ್ರದಾನ

ಬೆಂಗಳೂರು: ಕನ್ನಡಿಗರ ಕೂಟ, ದುಬೈ ವತಿಯಿಂದ ಬೆಂಗಳೂರಿನಲ್ಲಿ ನಡೆದ “ಹುಟ್ಟುೂರ ಸನ್ಮಾನ”...

ದುಬೈ; ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ ನಲ್ಲಿ ಓಣಂ ಹಬ್ಬ ಆಚರಣೆ

ದುಬೈ : ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರ ಫಾರ್ಚೂನ್ ಗ್ರೂಪ್...

Related Articles

Popular Categories