ಯುಎಇಯುಎಇ ಕುಲಾಲ ಫ್ಯಾಮಿಲಿಯಿಂದ ಶ್ರೀಸತ್ಯನಾರಾಯಣ ಪೂಜೆ

ಯುಎಇ ಕುಲಾಲ ಫ್ಯಾಮಿಲಿಯಿಂದ ಶ್ರೀಸತ್ಯನಾರಾಯಣ ಪೂಜೆ

ದುಬೈ: ಇಲ್ಲಿನ ಗ್ಲೆಂಡೆಲ್ ಅಂತಾರಾಷ್ಟ್ರೀಯ ಶಾಲಾ ಸಭಾಂಗಣದಲ್ಲಿ ರವಿವಾರ ಸುಬ್ರಹ್ಮಣ್ಯ ಭಟ್ ಹಾಗೂ ಕೆ.ವಿ.ಅಡಿಗ ಇವರ ಪೌರೋಹಿತ್ಯದಲ್ಲಿ ಕುಲಾಲ ಫ್ಯಾಮಿಲಿ ಯುಎಇ ಆಯೋಜನೆಯ ಶ್ರೀ ಸತ್ಯನಾರಾಯಣ ಪೂಜೆ ಸಂಪನ್ನಗೊಂಡಿತು.

ಪದ್ಮರಾಜ್ ಕುಲಾಲ್ ಎಕ್ಕಾರ್ ಇವರ ನೇತ್ರತ್ವದಲ್ಲಿ ಹಾಗೂ ಅವರ ಜೊತೆಗೆ ಕೈ ಜೋಡಿಸಿದ ಕುಲಾಲ ಫ್ಯಾಮಿಲಿ ಅಡ್ಮಿನ್ ಬಳಗ ಆಯೋಜಿಸಿದ ಪೂಜಾ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನೆರವೇರಿತು.

ಕುಲಾಲ ಫ್ಯಾಮಿಲಿಯ ಸುಮಂಗಲಿಯರು, ದೀಪ ಪ್ರಜ್ವಲನೆ ಮಾಡುವ ಮೂಲಕ ಪೂಜಾ ವಿಧಿ ವಿಧಾನಗಳು ಆರಂಭಗೊಂಡಿತು. ಸುಜಾತ ಹಾಗೂ ಕಿರಣ್ ಕುಲಾಲ್ ದಂಪತಿಗಳು ಪೂಜೆಯ ಸಂಕಲ್ಪದಲ್ಲಿ ಪಾಲುಗೊಂಡರು. ಪದ್ಮರಾಜ್ ಎಕ್ಕಾರ್, ರಾಜೇಶ್ ಶೆಣೈ ಹಾಗೂ ಸಚಿನ್ ಕುಲಾಲ್ ‘ಶ್ರೀ ವಿಷ್ಣು ಸಹಸ್ರನಾಮಾವಳಿ’ ಪಠಣ ಮಾಡಿದರು.

ಶ್ರೀ ಓಂ ಶ್ರೀ ಭಕ್ತ ವೃಂದ ಶಾರ್ಜಾ ಇವರಿಂದ ಭಜನೆ ಸಂಕೀರ್ತನೆ ನಡೆಯಿತು. ಕುಲಾಲ ಸಮಾಜದ ಬಾಂಧವರು ನಡೆಸಿಕೊಟ್ಟ ಕುಣಿತ ಭಜನೆ ಸೇರಿದ ಭಕ್ತ ಜನರ ಮೆಚ್ಚುಗೆಗೆ ಪಾತ್ರವಾಯಿತು. ವಿದುಷಿ ಮಧುರಾ ವಿಶ್ವನಾಥ್ ಗಾಯನದ ಮುಖೇನ ನಡೆಸಿಕೊಟ್ಟ ಸತ್ಯನಾರಾಯಣ ದೇವರ ಕಥಾ ಕಾಲಕ್ಷೇಪಕ್ಕೆ ಸೇರಿದ ಭಕ್ತ ಸಮೂಹ ಭಾವ ಪರವಶರಾದರು. ಮಹಾಮಂಗಳಾರತಿ ಬಳಿಕ ದಾನಿಗಳನ್ನು ಗೌರವಿಸಿ, ಶ್ರೀ ದೇವರ ಪ್ರಸಾದ ನೀಡಲಾಯಿತು. ಭಕ್ತಾದಿಗಳು ಎಲ್ಲರೂ ಅನ್ನಸಂತರ್ಪಣೆಯ ಪ್ರಸಾದ ಸ್ವೀಕರಿಸಿ ಸಂತುಷ್ಟರಾದರು. ದುಬೈಯ ಹಲವು ಸಮಾಜದ ಗಣ್ಯರು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಆರತಿ ಅಡಿಗ ಕಾರ್ಯಕ್ರಮ ನಿರೂಪಿಸಿದರು.

Hot this week

ಸೋಲೋ ವಿಶ್ವ ಮೋಟಾರ್‌ಸೈಕಲ್ ಯಾತ್ರಿಕ ಗೇಬ್ರಿಯಲ್ ಶರತ್​​ರನ್ನು ಗೌರವಿಸಿದ ಕರ್ನಾಟಕ ಸಂಘ ಖತರ್

ದೋಹಾ: ಭಾರತೀಯ ಸಮುದಾಯಕ್ಕೆ ಹೆಮ್ಮೆಯ ಕ್ಷಣವಾಗುವಂತೆ, ಮಂಗಳೂರಿನ ಸಾಹಸಿ ಸೋಲೋ ವಿಶ್ವ...

ಕನ್ನಡ ಸಂಘ ಬಹರೈನ್‌ಗೆ ಪ್ರತಿಷ್ಠಿತ “ನವ ಕರ್ನಾಟಕ ರತ್ನ” ಪ್ರಶಸ್ತಿ

ಬೆಂಗಳೂರು: ಕನ್ನಡ ಭಾಷೆ, ನಾಡು-ನುಡಿ, ಕಲೆ, ಸಂಸ್ಕೃತಿ ಹಾಗೂ ಹೊರನಾಡಿನಲ್ಲಿ ಕನ್ನಡಿಗರ...

ದುಬೈಯಲ್ಲಿ ದಾಸವಾಣಿಯ ಸೊಬಗನ್ನು ಸಾರಿದ 27ನೇ ಹರಿನಾಮ ಸಂಕೀರ್ತನೆ

ದುಬೈ: ಕಳೆದ ನಾಲ್ಕು ದಶಕಗಳಿಂದ ದುಬೈಯಲ್ಲಿ ನೆಲೆಸಿದ್ದು, ಆಸಕ್ತರಿಗೆ ಕರ್ನಾಟಕ ಶಾಸ್ತ್ರೀಯ...

ಬಹರೈನ್‌; ಅ.9ರಂದು ಶ್ರೀ ನಾರಾಯಣ ಗುರು ಜಯಂತಿ ಅಂಗವಾಗಿ ‘Tribute to Bahrain’ ವಿಶೇಷ ಕಾರ್ಯಕ್ರಮ

ಮನಾಮಾ: ಬದುಕನ್ನು ಕಟ್ಟಿಕೊಳ್ಳಲು, ಕನಸುಗಳನ್ನು ನನಸಾಗಿಸಿಕೊಳ್ಳಲು ಹಾಗೂ ಭವಿಷ್ಯಕ್ಕೆ ಹೊಸ ದಿಕ್ಕು...

‘ಕನ್ನಡ ಸಂಘ ಬಹರೈನ್’ನಿಂದ ‘ಯಕ್ಷ ವೈಭವ 2026’: ಅದ್ಧೂರಿ ಯಕ್ಷಗಾನ ಪ್ರದರ್ಶನ

ಬಹರೈನ್: ಕನ್ನಡ ಸಂಘ ಬಹರೈನ್ ವತಿಯಿಂದ ಆಯೋಜಿಸಲಾದ “ಯಕ್ಷ ವೈಭವ 2026...

Related Articles

Popular Categories