“ಅದಾನಿ ಗ್ರೂಪ್ ಅಧಿಕಾರಿಗಳ ವಿರುದ್ಧದ ಯುಎಸ್ ಡಿಪಾರ್ಟ್ ಮೆಂಟ್ ಆಫ್ ಜಸ್ಟೀಸ್ ದೋಷಾರೋಪಣೆಯು ʼಸಂಪೂರ್ಣ ಅಮೆರಿಕನ್ ಅತಿಕ್ರಮಣʼ ಹೊರತು ಬೇರೇನೂ ಅಲ್ಲ. ಎಲ್ಲ ಕೊನೆಗೊಂಡ ಮೇಲೆ ಅದಾನಿ ಸಮೂಹ ಸಂಸ್ಥೆ ಬಲಶಾಲಿಯಾಗಿ ಹಿಂದಿರುಗಲಿದೆ” ಎಂದು ನಾರ್ವೆಯ ಮಾಜಿ ಪರಿಸರ ಸಚಿವ ಎರಿಕ್ ಸೊಲ್ಹೀಮ್ ಹೇಳಿದ್ದಾರೆ.
ಅಮೆರಿಕಾಗೆ ಅದಾನಿ ಗ್ರೂಪ್ ಬಗ್ಗೆ ದೂರುಗಳಿದ್ದರೆ, ಅದು ಮೊದಲು ಭಾರತ ಸರ್ಕಾರದ ಗಮನಕ್ಕೆ ತರಬೇಕು. ನಂತರ ಪ್ರಕರಣ ಭಾರತದ ನ್ಯಾಯಾಂಗದ ಭಾಗವಾಗಬೇಕು ಹೊರತು ಅಮೆರಿಕನ್ ನ್ಯಾಯಾಲಯದ್ದಲ್ಲ ಹಿರಿಯ ರಾಜತಾಂತ್ರಿಕರೂ ಆಗಿರುವ ಸೊಲ್ಹೀಮ್ ಐಎಎನ್ ಎಸ್ ಸಂದರ್ಶನದಲ್ಲಿ ಹೇಳಿದ್ದಾರೆ.
“ಅದಾನಿ ಗ್ರೂಪ್ ಗೆ ಹಲವು ಸೌರ ಹಾಗೂ ಗಾಳಿಗೆ ಸಂಬಂಧಿಸಿದ ಹಲವು ಯೋಜನೆಗಳಿವೆ. ಇವುಗಳನ್ನು ಭಾರತದ ಹಲವು ರಾಜ್ಯಗಳು ಮತ್ತು ವಿದೇಶಗಳಲ್ಲಿ ಈ ನಿಟ್ಟಿನ ಹೂಡಿಕೆಗಳನ್ನು ಮಾಡುವ ಸಾಧ್ಯತೆ ಇದೆ. ಅಮೆರಿಕದಲ್ಲಿ 10 ಶತಕೋಟಿ ಡಾಲರ್ ಹೂಡಿಕೆ ಮಾಡುವುದಾಗಿ ಈಗಾಗಲೇ ಗ್ರೂಪ್ ಘೋಷಿಸಿದೆ. ಇಂತಹ ದೋಷಾರೋಪಣೆಗಳಿಂದ ಈ ಯೋಜನೆಯ ಉದ್ದೇಶಗಳಿಗೆ ಹಾನಿಯಾಗುತ್ತದೆ” ಎಂದವರು ಹೇಳಿದ್ದಾರೆ.