ಯುಎಇಯುಎಇಯ ಖ್ಯಾತ ಸಾಹಿತಿ, ರಂಗಕರ್ಮಿ ಪ್ರಕಾಶ್ ರಾವ್ ಪಯ್ಯಾರ್​ಗೆ...

ಯುಎಇಯ ಖ್ಯಾತ ಸಾಹಿತಿ, ರಂಗಕರ್ಮಿ ಪ್ರಕಾಶ್ ರಾವ್ ಪಯ್ಯಾರ್​ಗೆ ದುಬೈಯಲ್ಲಿ ಶ್ರದ್ಧಾಂಜಲಿ ಸಭೆ

ದುಬೈ: ಯುಎಇಯ ಕನ್ನಡ ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಅಸಾಮಾನ್ಯ ಸೇವೆ ಸಲ್ಲಿಸಿದ ಖ್ಯಾತ ಬರಹಗಾರ ಹಾಗೂ ರಂಗ ನಿರ್ದೇಶಕ ಪ್ರಕಾಶ್ ರಾವ್ ಪಯ್ಯಾರ್ ಇತ್ತೀಚೆಗೆ ನಿಧನರಾಗಿದ್ದು, ಅವರ ಸ್ಮರಣಾರ್ಥವಾಗಿ ಧ್ವನಿ ಪ್ರತಿಷ್ಠಾನವು ಶ್ರದ್ಧಾಂಜಲಿ ಸಭೆಯನ್ನು ಶುಕ್ರವಾರ ಸಂಜೆ ದುಬೈಯ ಅಬುಹೇಲ್‌ನಲ್ಲಿ ಆಯೋಜಿಸಿತ್ತು.

ಈ ಶ್ರದ್ಧಾಂಜಲಿ ಸಭೆಯಲ್ಲಿ ಪಯ್ಯಾರರ ಸಾಹಿತ್ಯ ಬಳಗದ ಮಿತ್ರರು, ರಂಗಭೂಮಿ ಕಲಾವಿದರು, ಧ್ವನಿ ಪ್ರತಿಷ್ಠಾನದ ಸದಸ್ಯರು, ಅಭಿಮಾನಿಗಳು ಹಾಗೂ ಆತ್ಮೀಯ ಮಿತ್ರವೃಂದದವರು ಭಾಗವಹಿಸಿದ್ದರು.

ಸಭೆಯ ಆರಂಭದಲ್ಲಿ ದೀಪ ಬೆಳಗುವ ಮೂಲಕ ಪಯ್ಯಾರರ ಆತ್ಮಕ್ಕೆ ಶಾಂತಿಗಾಗಿ ಪ್ರಾರ್ಥಿಸಲಾಯಿತು. ನಂತರ ಹಲವಾರು ಮಂದಿ ಅವರ ಸಾಹಿತ್ಯ ಸಾಧನೆ, ರಂಗ ನಿರ್ದೇಶನ ಕೌಶಲ್ಯ ಮತ್ತು ಕನ್ನಡ ಸಂಸ್ಕೃತಿಯ ಬೆಳವಣಿಗೆಗೆ ನೀಡಿದ ಅಮೂಲ್ಯ ಕೊಡುಗೆಗಳ ಕುರಿತು ತಮ್ಮ ಭಾವಪೂರ್ಣ ಸ್ಮರಣಗಳನ್ನು ಹಂಚಿಕೊಂಡರು.

ಪಯ್ಯಾರರ ನಿಧನವು ಯುಎಇಯ ಕನ್ನಡ ಸಾಹಿತ್ಯ ಮತ್ತು ನಾಟಕ ಲೋಕಕ್ಕೆ ಭಾರೀ ನಷ್ಟವೆಂದು, ಅವರ ಸ್ಮರಣೆ ಸದಾ ಪ್ರೇರಣೆಯಾಗಿ ಉಳಿಯಲಿದೆ ಎಂದು ಎಲ್ಲರೂ ಅಭಿಪ್ರಾಯಪಟ್ಟರು. ಧ್ವನಿ ಪ್ರತಿಷ್ಠಾನವು ಮುಂದಿನ ದಿನಗಳಲ್ಲಿ ಅವರ ಅಪೂರ್ಣವಾಗಿ ಉಳಿದ ಮಹತ್ತರದ ಕನಸಾದ ಧ್ವನಿ ಪ್ರತಿಷ್ಠಾನದ 40ರ ಸಂಭ್ರಮದ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆಯನ್ನೂ ಪ್ರಕಟಿಸಿತು.

Hot this week

ಸೋಲೋ ವಿಶ್ವ ಮೋಟಾರ್‌ಸೈಕಲ್ ಯಾತ್ರಿಕ ಗೇಬ್ರಿಯಲ್ ಶರತ್​​ರನ್ನು ಗೌರವಿಸಿದ ಕರ್ನಾಟಕ ಸಂಘ ಖತರ್

ದೋಹಾ: ಭಾರತೀಯ ಸಮುದಾಯಕ್ಕೆ ಹೆಮ್ಮೆಯ ಕ್ಷಣವಾಗುವಂತೆ, ಮಂಗಳೂರಿನ ಸಾಹಸಿ ಸೋಲೋ ವಿಶ್ವ...

ಕನ್ನಡ ಸಂಘ ಬಹರೈನ್‌ಗೆ ಪ್ರತಿಷ್ಠಿತ “ನವ ಕರ್ನಾಟಕ ರತ್ನ” ಪ್ರಶಸ್ತಿ

ಬೆಂಗಳೂರು: ಕನ್ನಡ ಭಾಷೆ, ನಾಡು-ನುಡಿ, ಕಲೆ, ಸಂಸ್ಕೃತಿ ಹಾಗೂ ಹೊರನಾಡಿನಲ್ಲಿ ಕನ್ನಡಿಗರ...

ದುಬೈಯಲ್ಲಿ ದಾಸವಾಣಿಯ ಸೊಬಗನ್ನು ಸಾರಿದ 27ನೇ ಹರಿನಾಮ ಸಂಕೀರ್ತನೆ

ದುಬೈ: ಕಳೆದ ನಾಲ್ಕು ದಶಕಗಳಿಂದ ದುಬೈಯಲ್ಲಿ ನೆಲೆಸಿದ್ದು, ಆಸಕ್ತರಿಗೆ ಕರ್ನಾಟಕ ಶಾಸ್ತ್ರೀಯ...

ಬಹರೈನ್‌; ಅ.9ರಂದು ಶ್ರೀ ನಾರಾಯಣ ಗುರು ಜಯಂತಿ ಅಂಗವಾಗಿ ‘Tribute to Bahrain’ ವಿಶೇಷ ಕಾರ್ಯಕ್ರಮ

ಮನಾಮಾ: ಬದುಕನ್ನು ಕಟ್ಟಿಕೊಳ್ಳಲು, ಕನಸುಗಳನ್ನು ನನಸಾಗಿಸಿಕೊಳ್ಳಲು ಹಾಗೂ ಭವಿಷ್ಯಕ್ಕೆ ಹೊಸ ದಿಕ್ಕು...

‘ಕನ್ನಡ ಸಂಘ ಬಹರೈನ್’ನಿಂದ ‘ಯಕ್ಷ ವೈಭವ 2026’: ಅದ್ಧೂರಿ ಯಕ್ಷಗಾನ ಪ್ರದರ್ಶನ

ಬಹರೈನ್: ಕನ್ನಡ ಸಂಘ ಬಹರೈನ್ ವತಿಯಿಂದ ಆಯೋಜಿಸಲಾದ “ಯಕ್ಷ ವೈಭವ 2026...

Related Articles

Popular Categories